ಮೈಸೂರು 13: ಇಂದು ಶಿಕ್ಷಣ ಎಂಬುದು ಕೇವಲ ಉದ್ಯೋಗಕ್ಕಾಗಿ ಎನ್ನುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಶಿಕ್ಷಣ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದರು.
ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಡಾ.ಎಸ್.ರಾಧಾಕೃಷ್ಣನ್ ಸಭಾಭವನದ ಶಂಕುಸ್ಥಾಪನೆ ನೆರವೇರಿಸಿ ನಂತರ ನೆರೆದಿದ್ದ ಸಭಿಕರನ್ನು ಕನ್ನಡದಲ್ಲೇ ಸಂಭೋಧಿಸಿ ಭಾಷಣ ಆರಂಭಿಸಿದರು.
ಪ್ರಾದೇಶಿಕವಾಗಿ ಶಿಕ್ಷಣದಲ್ಲಿ ದೇಶ ಸದೃಢವಾಗಬೇಕು, ಶಿಕ್ಷಣದಿಂದ ಉದ್ಯಮ ನಡೆಸಲು ಸ್ವತಂತ್ರವಾಗಿ ಉದ್ಯೋಗ ಕೈಗೊಳ್ಳಲು, ಇತರರಿಗೆ ಉದ್ಯೋಗ ನೀಡಲು ಸಾಧ್ಯವಿದೆ ಎಂದು ವಿವರಿಸಿದರು.
ಬಾಲ್ಯದ ದಿನಗಳು, ರಜೆಯ ಮಜ ಸಮಯದಲ್ಲಿ ಎಲ್ಲರೊಂದಿಗೆ ಬೆರೆಯುವ ಕಲೆಯ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದ ಅವರು, ಜಾಗತೀಕರಣದ ಯುಗದಲ್ಲಿ ನಾವು ಎಲ್ಲರಿಗೂ ಗುಣಮಟ್ಟ ಮತ್ತು ಸಮಾನತೆ ನೀಡುವತ್ತ ಶ್ರಮಿಸುತ್ತಿರುವುದರಿಂದ ಭಾರತೀಯ ಶಿಕ್ಷಣ ವ್ಯವಸ್ಥೆಯು ಇಂದು ನಿರ್ಣಾಯಕ ಹಂತವನ್ನು ದಾಟುತ್ತಿದೆ ಎಂದರು.
ಶಾಲೆ, ಶಿಕ್ಷಕ ಮತ್ತು ಉನ್ನತ ಶಿಕ್ಷಣದಲ್ಲಿ ನಾವು ಭಾರೀ ಪ್ರಗತಿ ಸಾಧಿಸಿದ್ದೇವೆ. ದಾಖಲಾತಿ ದರಗಳು ಗಮನಾರ್ಹವಾಗಿ ಹೆಚ್ಚಾಗಿದೆ. ಮೂಲಸೌಕರ್ಯ, ಸೌಲಭ್ಯಗಳು ಮಹತ್ತರವಾಗಿ ಸುಧಾರಿಸಿವೆ ಎಂದು ಅವರು ತಿಳಿಸಿದರು.
ಪ್ರತಿ ವರ್ಷ ವಾರ್ಷಿಕ ಪರೀಕ್ಷೆಗೆ ಮಕ್ಕಳನ್ನು ಹೇಗೆ ಸಿದ್ದಪಡಿಸುತ್ತೇವೆಯೋ ಅದೇ ರೀತಿ ಅಗತ್ಯವಾದ ಜೀವನ ಕೌಶಲ್ಯಗಳನ್ನು ಒದಗಿಸುವ ಮೂಲಕ ಜೀವನದಲ್ಲಿ ವಿವಿಧ ಸವಾಲುಗಳನ್ನು ಎದುರಿಸಲು ಅವರನ್ನು ಸಿದ್ದಪಡಿಸುವುದೂ ಅಷ್ಟೇ ಮುಖ್ಯ ಎಂದು ಹೇಳಿದರು.
ಶಿಕ್ಷಕರು ಮಕ್ಕಳ ವ್ಯಕ್ತಿತ್ವ ವಿಕಸನದತ್ತ ಗಮನಹರಿಸಬೇಕು. ಅದೇ ಸಂದರ್ಭದಲ್ಲಿ ಪ್ರತಿ ವಿದ್ಯಾಥರ್ಿಯ ವೈಯಕ್ತಿಕ ಪ್ರತಿಭೆ ಪ್ರಕಾಶಿಸುವಂತೆ ನೋಡಿಕೊಳ್ಳಬೇಕೆಂದರು.
ಶಿಕ್ಷಕರು ಪಠ್ಯಕ್ರಮ, ವಿಷಯ ಮತ್ತು ಶಿಕ್ಷಣ ಶಾಸ್ತ್ರದ ಬಗ್ಗೆ ಸಮುದಾಯ ಮತ್ತು ಶಾಲಾ ರಚನೆಗಳು ಹಾಗೂ ನಿರ್ವಹಣೆಯ ಬಗ್ಗೆ ಸಮರ್ಪಕ ತಿಳುವಳಿಕೆಯನ್ನು ಹೊಂದಿರಬೇಕು ಹಾಗಿದ್ದಾಗ ಮಾತ್ರ ಶಿಕ್ಷಕರು ಮಕ್ಕಳೊಂದಿಗೆ ಸಂಪರ್ಕ ಸಾಧಿಸಿಲು ಸಾಧ್ಯವಾಗುತ್ತದೆ.
ಅವರು ಜ್ಞಾನದ ಸೃಷ್ಟಿಕರ್ತರಾಗಿಬೇಕು ಮಕ್ಕಳು ತಮ್ಮ ಮನೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಾತಾವರಣದಿಂದ ಕಲಿಯುವುದನ್ನು ಮೌಲ್ಯೀಕರಿಸಬೇಕು ಹಾಗೂ ಮಕ್ಕಳಿಗೆ ತಮ್ಮ ಪೂರ್ಣ ಸಾಮಥ್ರ್ಯವನ್ನು ಕಂಡುಹಿಡಿಯಲು, ಕಲಿಯಲು, ವಿಕಸನಕ್ಕೆ ಅವಕಾಶಗಳನ್ನು ಸೃಷ್ಟಿಸಬೇಕು ಎಂದರು.
ಪೋಷಕರೂ ಪಾಲುದಾರರು: ಶಿಕ್ಷಣದಲ್ಲಿ ಪೋಷಕರು ಸಹ ಪ್ರಮುಖ ಪಾಲುದಾರರಾಗಿದ್ದಾರೆ. ಅವರಿಗೆ ಶಿಕ್ಷಣದ ಮಹತ್ವ ಮತ್ತು ವ್ಯಾಪ್ತಿಯ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳ ಮೇಲೆ ಪೋಷಕರ ಮಹತ್ವಾಕಾಂಕ್ಷೆಗಳನ್ನು ಹೇರುವುದು ಮತ್ತು ಸಾರ್ವಕಾಲಿಕವಾಗಿ ಉತ್ಕೃಷ್ಟರಾಗುವಂತೆ ಒತ್ತಡ ಹೇರುವುದು ಆರೋಗ್ಯಕರ ಬೆಳವಣಿಗೆಯಲ್ಲ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಗೆ ಅವಕಾಶ ನೀಡಬೇಕು ಎಂದರು.
21ನೇ ಶತಮಾನದ ಭಾರತವನ್ನು ಜ್ಞಾನ ಮತ್ತು ಇನೋವೇಷನ್ ಹಬ್ ಮಾಡಲು ಸಾಮೂಹಿಕವಾಗಿ ಶಿಕ್ಷಕರು ಶ್ರಮಿಸುವಂತೆ ಇದೇ ವೇಳೆ ಅವರು ಕರೆ ನೀಡಿದರು.
ಭಾರತೀಯ ಹೆಮ್ಮೆಯ ಪುತ್ರನ ಹೆಸರನ್ನು ಸಭಾಂಗಣಕ್ಕೆ ಶಂಕುಸ್ಥಾಪನೆ ಮಾಡಿದ್ದು ನನಗೆ ಖುಷಿ ಎನಿಸಿದೆ ಎಂದು ಸ್ಪಷ್ಟ ಕನ್ನಡದಲ್ಲೇ ಹೇಳಿದ್ದು ನೆರೆದಿದ್ದವರಲ್ಲಿ ಹರ್ಷವುಂಟು ಮಾಡಿತು.
ಕಾರ್ಯಕ್ರಮದಲ್ಲಿ ಎನ್ಸಿಇಆರ್ಟಿಯ ನಿದರ್ೇಶಕ ಪ್ರೊ.ಎಚ್.ಕೆ.ಸೇನಾಪತಿ ಆರ್ಐಇಎಂ ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.