ಮುಸ್ಲಿಂ ಸಮಾಜದ ಮುಖಂಡ ಖಾಜಾಹುಸೇನ ಡೋಣಿ ನಿಧನ
Muslim community leader Khaja Hussain Doni passes away
ತಾಳಿಕೋಟಿ 24: ಪಟ್ಟಣದ ಮುಸ್ಲಿಂ ಸಮಾಜದ ಮುಖಂಡ,ಈದಗಾ ಸಮಿತಿ ಮಾಜಿ ಅಧ್ಯಕ್ಷ ಖಾಜಾಹುಸೇನ ಮಶಾಕಸಾಬ ಡೋಣಿ(70) ಬುಧವಾರ ನಿಧನರಾದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ(ಬುಧವಾರ) ಮುಂಜಾನೆ 9 ಘಂಟೆಗೆ ಟಿಪ್ಪು ನಗರದ ತಮ್ಮ ಸ್ವಗೃಹದಲ್ಲಿ ಕೊನೆ ಉಸಿರೇಳೆದರು. ಮೃತರು ಪತ್ನಿ, ಐವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂದು ಬಳಗ ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಬುಧವಾರ(ಡಿ.24) ಸಂಜೆ 5:00 ಘಂಟೆಗೆ ಸ್ಥಳೀಯ ಖಬರ ಸ್ಥಾನದಲ್ಲಿ ನೆರವೇರಿತು. ಶಾಸಕ ನಾಡಗೌಡರಿಂದ ಸಂತಾಪ: ಮುಸ್ಲಿಂ ಸಮಾಜದ ಮುಖಂಡರಾದ ಖಾಜಾ ಹುಸೇನ ಡೋಣಿ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣದ ವಾರ್ಡ್ ಮಟ್ಟದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ಶಾಸಕ ಅಪ್ಪಾಜಿ ನಾಡಗೌಡರು ಕಾರ್ಯಕ್ರಮ ಸ್ಥಗಿತಗೊಳಿಸಿ ಮನೆಗೆ ಭೇಟಿ ನೀಡಿ ಡೋಣಿಯವರ ಪಾರ್ಥಿವ ಶರೀರದ ದರ್ಶನ ಪಡೆದು ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿ ಅವರ ಆತ್ಮಕ್ಕೆ ಭಗವಂತನಲ್ಲಿ ಶಾಂತಿ ಕೋರಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 