ಸಂಗೀತ ಜೀವಸೃಷ್ಟೀಯ ಅತ್ಯಂತ ಮಹತ್ವದ ಕಲೆ : ನಂದನ ಹೆರ್ಲೆಕರ

ಸಂಗೀತ ಜೀವಸೃಷ್ಟೀಯ ಅತ್ಯಂತ ಮಹತ್ವದ ಕಲೆ : ನಂದನ ಹೆರ್ಲೆಕರ  Music is the most important art form in creating life: Nandana Herlekar

ಸಂಗೀತ ಜೀವಸೃಷ್ಟೀಯ ಅತ್ಯಂತ ಮಹತ್ವದ ಕಲೆ : ನಂದನ ಹೆರ್ಲೆಕರ  


ಬೆಳಗಾವಿ 15: ಸಂಗೀತ ಜೀವಸೃಷ್ಟೀಯ ಅತ್ಯಂತ ಮಹತ್ವದ ಕಲೆ. ಸಂಗೀತ ಮನಸ್ಸನ್ನು ಮುದಗೊಳಿಸುತ್ತದೆ. ಮೃದುಗೊಳಿಸುತ್ತದೆ ಎಂದು ಸಂಗೀತಜ್ಞ ನಂದನ ಹೆರ್ಲೆಕರ ಅವರು ಇಂದಿಲ್ಲಿ ಹೇಳಿದರು.  

ನಿನ್ನೆ ದಿ. 14 ರವಿವಾರದಂದು ತಿಲಕವಾಡಿಯ ಲೈಯಿನ್ಸ್‌ ಭವನದಲ್ಲಿ ಜರುಗಿದ ಹುಕ್ಕೇರಿ ಬಾಳಪ್ಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಪ್ತಕ ಸಂಗೀತ ಸಂಸ್ಥೆಯ ಸಹಕಾರದೊಡನೆ ಇಂಪು ಸಂಗೀತ ವೇದಿಕೆ ಪ್ರತಿ ವರ್ಷದಂತೆ ಸಭಾಭೂಷಣ ಹುಕ್ಕೇರಿ ಬಾಳಪ್ಪ ಸಂಸ್ಮರಣ ಪ್ರಶಸ್ತಿಯನ್ನು ಕಿರಾನಾ ಘರಾಣಾದ ಪ್ರಸಿದ್ಧ ಗಾಯಕಿ ವಿದುಷಿ ಶ್ರೀಮತಿ ಸುಜಾತಾ ಗುರವ ಅವರಿಗೆ ನೀಡಿ ಗೌರವಿಸಿತು. ಅತಿಥಿಗಳಾಗಿ ಆಗಮಿಸಿದ್ದ ಹೆರ್ಲೆಕರ ಮೇಲಿನಂತೆ ಅಭಿಪ್ರಾಯ ಪಟ್ಟರು  

ಪ್ರಶಸ್ತಿಯನ್ನು ಸ್ವೀಕರಿಸಿದ ಗಾಯಕಿ ಸುಜಾತಾ ಗುರವ ಅವರು ಆರಂಭದಲ್ಲಿ ಮಧುವಂತಿ ರಾಗವನ್ನು ಬಹಳ ಸುಂದರವಾಗಿ ಪ್ರಸ್ತುತ ಪಡಿಸಿ ಸಂಗೀತ ಕಲಾರಸಿಕರ ಮನ ಸೂರೆಗೊಂಡರು. ವಚನ, ಭಾವಗೀತೆ, ಭಕ್ತಿಗೀತೆ, ನಾಟ್ಯಗೀತೆಗಳನ್ನೂ ಹಾಡಿದ ಅವರು ಭೈರವಿ ಠುಮ್ರಿಯೊಂದಿಗೆ ಕಾರ್ಯಕ್ರಮ ಮುಗಿಸಿದರು. ತಬಲಾ ಅಲ್ಲಮಪ್ರಭು ಕಡಕೋಳ ಮತ್ತು ಹಾರ್ಮೋನಿಯಂ ಯೋಗೇಶ ರಾಮದಾಸ ಇವರು ಸಮರ್ಥ ರೀತಿಯಲ್ಲಿ ಸಾಥ್ ಒದಗಿಸಿದರು. ಸಪ್ತಸ್ವರದ ವಿದ್ಯಾರ್ಥಿನಿಯರಾದ ಶ್ರುತಿ ಮತ್ತು ಪೂರ್ವಿ ತಂಬೂರಿ ಸಾಥ್ ನೀಡಿದರು.  


 ಬೆಂಗಳೂರಿನ ಸಪ್ತಕದ ಜಿ. ಎಸ್‌. ಹೆಗಡೆ, ಸಪ್ತಸ್ವರದ ನಿರ್ಮಲಾ ಪ್ರಕಾಶ ಮತ್ತು ಸೂರ್ಯಪ್ರಕಾಶ ಅಯ್ಯರ್, ನಿವೇದಾರ​‍್ಣ ಅಕಾಡೆಮಿಯ ಚಂದ್ರಶೇಖರ ನವಲಗುಂದ, ಸಂಗೀತ ಕಲಾಕಾರ ಸಂಘದ ಪ್ರಭಾಕರ ಶಹಾಪುರಕರ, ಆನಂದ ಪುರಾಣಿಕ, ಡಾ. ಹೇಮಾ ಸೊನೊಳ್ಳಿ, ಪತ್ರಕರ್ತ ಮಿತ್ರ ಮುರುಗೇಶ ಶಿವಪೂಜಿ, ಗುಂಡೇನಟ್ಟಿ ಮಧುಕರ, ಡಾ. ಅರವಿಂದ ಕುಲಕರ್ಣಿ, ಡಾ. ಪದ್ಮಾ ಕುಲಕರ್ಣಿ, ಡಾ. ಅಶೋಕಕುಮಾರ, ಅರವಿಂದ ಹುನಗುಂದ, ಬಸವರಾಜ ಗಾರ್ಗಿ, ಡಾ. ಪಿ. ಜಿ. ಕೆಂಪಣ್ಣವರ, ಡಾ. ಶ್ರೀರಂಗ ಜೋಶಿ, ರವಿ ಕೊಟಾರಗಸ್ತಿ, ಇಂದಿರಾ ಮೋಟೆಬೆನ್ನೂರು, ಜಿತೇಂದ್ರ ಸಾಬಣ್ಣವರ, ನಾರಾಯಣ ಗಣಾಚಾರಿ, ಆರ್‌. ಬಿ. ಬನಶಂಕರಿ ನೀರಜಾ ಗಣಾಚಾರಿ ಮುಂತಾದ ಸಂಗೀತಾಸಕ್ತರು ಉಪಸ್ಥಿತರಿದ್ದರು. ಆನಂದ ಪುರಾಣಿಕ ವಂದಿಸಿದರು. ಚಂದ್ರಶೇಖರ ನವಲಗುಂದ ಪರಿಚಯಿಸಿದರು.