ಶಾಲಾ ಸಂಸತ್ ಉದ್ಘಾಟಿಸಿದ ನಗರಸಭಾ ಅಧ್ಯಕ್ಷೆ ಚಂಪಿಕಾ ಬಿಸಲಳ್ಳಿ
Municipal Council President Champika Bisalalli inaugurated the school parliament.
ಶಾಲಾ ಸಂಸತ್ ಉದ್ಘಾಟಿಸಿದ ನಗರಸಭಾ ಅಧ್ಯಕ್ಷೆ ಚಂಪಿಕಾ ಬಿಸಲಳ್ಳಿ
ರಾಣಿಬೆನ್ನೂರು 11: ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನದ ಈ ಯುಗದಲ್ಲಿ ಮಹಿಳೆಯರು ಬಹುತೇಕವಾಗಿ ಎಲ್ಲರಂಗದಲ್ಲೂ ಮುಂಚೂಣಿಯಲ್ಲಿದ್ದು, ಅಸಾಧಾರಣ ಸಾಧನೆ ಮಾಡುತ್ತಿದ್ದಾರೆ. ಅಂತಹವರ ಸಾಧನೆಯಲ್ಲಿ ನೀವು ಸಹ ಸಾಗಿ ವಿಶೇಷ ಸಾಧನೆ ಮಾಡಲು ಮುಂದಾಗಿ ಎಂದು ನಗರಸಭಾ ಅಧ್ಯಕ್ಷೆ ಚಂಪಿಕಾ ಬಿಸಲಳ್ಳಿ ಹೇಳಿದರು.
ನಗರದ ದೇವರಗುಡ್ಡ ರಸ್ತೆಯ ವೀರ ಮದಕರಿ ನಾಯಕ ಹೆಣ್ಣು ಮಕ್ಕಳ ಪ್ರೌಢಶಾಲೆಯಲ್ಲಿ ಏರಿ್ಡಸಿದ್ದ 2025-26ನೇ ಸಾಲಿನ ಶಾಲಾ ಸಂಸತ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂದು ಶತಮಾನಗಳ ಹಿಂದೆಯೇ ಶರಣರು, ಸನ್ಯಾಸಿಗಳು ಭವಿಷ್ಯ ನುಡಿದದ್ದು ಇಂದು ನಿಜವಾಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ವಿಶಿಷ್ಟ ಸಾಧನೆ ಮಾಡಿರುವ ಮಹಿಳೆಯರ ಸಾಧನೆ ನಿಮಗೆ ಮಾದರಿಯಾಗಲಿ ಎಂದರು. ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎಚ್. ಡಿ ಬಡಕರೆಪ್ಪನವರ ಮಾತನಾಡಿ, ಇಂದಿನ ಮಕ್ಕಳು ಓದಿನ ಅಭಿರುಚಿ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕವಾದ ವಿಷಯಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಓದಿನ ಜೊತೆಗೆ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದಿನಂಪ್ರತಿ ಯೋಗ, ಧ್ಯಾನ, ವಾಯುವಿಹಾರದತ್ತ ಚಿತ್ತಹರಿಸಬೇಕು ಎಂದರು. ಶಾಲಾ ಆಡಳಿತಾಧಿಕಾರಿ ರಮೇಶ್ ಬಡಕರೆಪ್ಪನವರ, ಶಾಲಾ ಮುಖೋಪಾಧ್ಯಾಯಿನಿ ಎಸ್. ಆರ್. ಕುಲಕರ್ಣಿ, ಸಿ.ಬಿ ಗುಜ್ಜರ್, ಜಿ. ಮಮತ, ಎಂ.ಎಚ್ ಕುಸುಮಾ, ಪಿ.ಎಚ್. ಎರೇಸಿಮಿ, ಪಿ.ಎಂ ತುವಾರ, ಸಿ.ಆರ್ ಅನುರಾಧ, ನಾಗರಾಜ್. ಕೆ ಎಚ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರುಗಳು ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 