ದಿ, 15 ರಂದು ಬಹು ಭಾಷಾ ಶಾಯರಿ ಕವಿಗೋಷ್ಠಿ ಹಾಗೂ ಸುಗಮ ಸಂಗೀತ ಕಾರ್ಯಕ್ರಮ
Multilingual poetry poetry gathering and light music program on the 15th
ಕೊಪ್ಪಳ 85: ಶ್ರೀ ನಿಮಿಷಾಂಬ ಪ್ರಕಾಶನ, ಶ್ರೀ ನಿಮಿಷಾಂಬ ಆರ್ಟ್ಸ ಗ್ಯಾಲರಿ ಕಿನ್ನಾಳ ವತಿಯಿಂದ ಸುಜ್ಞಾನ ದೀವಿಗೆ ತ್ರೈಮಾಸಿಕ ಸರಣಿ ಕಾರ್ಯಕ್ರಮ ಅಂಗವಾಗಿ ತಾಲೂಕಿನ ಕಿನ್ನಾಳ ಗ್ರಾಮದ ಕೊಪ್ಪಳ ರಸ್ತೆಯಲ್ಲಿರುವ ಗ್ರಾಮದ ಸ್ವಾಗತ ಕಮಾನ್ ಹತ್ತಿರ ಇರುವ ಹಸನ್ಮುಖಿ ಸ್ಥಳದಲ್ಲಿ ಇದೇ ದಿ, 15 ರ ರವಿವಾರ ಬೆಳಗ್ಗೆ 10 ಗಂಟೆಗೆ ಬಹುಭಾಷಾ ಶಾಯಿರಿ ಕವಿಗೋಷ್ಠಿ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ಸಂಘಟಕರಾದ ಶಿಕ್ಷಕ ಪ್ರಕಾಶಕ ಶ್ರೀನಿವಾಸ್ ಚಿತ್ರಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಸಮಾರಂಭದ ದಿವ್ಯ ಸಾನಿಧ್ಯವನ್ನು ಮುಂಡರಗಿ ಅನ್ನದಾನಿಶ್ವರ ಶಾಖಾ ಮಠ ಕುಕನೂರಿನ ಪರಮಪೂಜ್ಯ ಡಾ, ಮಹಾದೇವ ಮಹಾಸ್ವಾಮಿಗಳವರು ಸಾನಿಧ್ಯ ವಹಿಸಲಿದ್ದು ಸಿರಿಗನ್ನಡ ವೇದಿಕೆ ರಾಜ್ಯ ಅಧ್ಯಕ್ಷ ಜಿ.ಎಸ್. ಗೋನಾಳ ರವರ ಅಧ್ಯಕ್ಷತೆಯಲ್ಲಿ ಕಿನ್ನಾಳ ಗ್ರಾಮ ಹಿರಿಯರಾದ ವೆಂಕಟೇಶ್ವರ ರಾವ್ ದೇಸಾಯಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ, ಗದುಗಿನ ಸಾಹಿತಿ ಮರಳುಸಿದ್ದಪ್ಪ ದೊಡ್ಡಮನಿ ಯವರು ಶಾಯಿರಿ ಸಾಗಿ ಬಂದ ದಾರಿ ಒಂದು ಪಕ್ಷಿ ನೋಟ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ,
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಡಾ, ಫಕೀರ್ಪ ವಜ್ರಬಂಡಿ, ಎಂ ಬಿ ಅಳವಂಡಿ, ವೀರಣ್ಣ ನಿಂಗೊಜಿ ಮತ್ತು ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಪಾಲ್ಗೊಳ್ಳಲಿದ್ದಾರೆ, ಅಲ್ಲದೆ ಕಿನ್ನಾಳ ಗ್ರಾಮದ ಹಿರಿಯರಾದ ಮತ್ತು ಸಮಾಜದ ಅಧ್ಯಕ್ಷರಾದ ಪರಶುರಾಮ್ ಚಿತ್ರಗಾರ, ಮತ್ತು ಕಿನ್ನಾಳ ಗ್ರಾಮದ ಮುಸ್ಲಿಂ ಸಮಾಜದ ಹಿರಿಯರಾದ ಮಾಬುಸಾಬ್ ಹೀರಾಳ, ಅಲ್ಲದೆ ಕೊಪ್ಪಳದ ಹಿರಿಯ ಉರ್ದು ಸಾಹಿತಿ ಶಮೀಮುನ್ನಿಸಾ ಬೇಗಠ ಹುನುಗುಂದ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ,
ವೀರಭದ್ರ್ಪ ಶಿವ ಸಿಂಪಿ ಮಾದಿನೂರು ಮತ್ತು ನಾಮದೇವ್, ಚಿತ್ರಗಾರ್ ಕಿನ್ನಾಳರವರು ಸುಗಮ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ, ಶಾಯರಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಮತ್ತು ಕವಿ ಯಲ್ಲಪ್ಪ ಹರ್ನಾಳಗಿ ವಹಿಸಲಿದ್ದು ಕವಿಗಳಾದ ಅನ್ವರ್ ಹುಸೇನ್, ಕೊಪ್ಪಳ ,ಅರುನಾ ನರೇಂದ್ರ ಕೊಪ್ಪಳ, ಎಂ ಬದಿಯುದ್ದೀನ್ ಅಹಮದ್ ನವೀದ, ವಿಜಯಲಕ್ಷ್ಮಿ ಕೊಟಗಿ, ಈರ್ಪ ಬಿಜಲೀ, ಕೊಟ್ರೇಶ್ ಜವಳಿ ಗದಗ್, ಎಂ ವಿಜಾರತ್ ಅಲಿ,ಶಿವಪ್ರಸಾದ ಹಾದಿಮನಿ, ಮೌಲಾನ ಮಹಮ್ಮದ್‌ಅಲಿ ಹಿಮಾಯತಿ, ಮತ್ತು ಹನುಮಂತ ಸೋಮನ ಕಟ್ಟಿ, ಬೆಂಗಳೂರು ರವರುಗಳು ಪಾಲ್ಗೊಂಡು ತಮ್ಮ ಕನ್ನಡ ಮತ್ತು ಉರ್ದು ಕವನ ವಾಚನ ಮಾಡಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕರಾದ ಶ್ರೀ ನಿಮಿಷಾಂಬ ಪ್ರಕಾಶನದ ಮುಖ್ಯಸ್ಥ ಶ್ರೀನಿವಾಸ ಚಿತ್ರಗಾರ, ಶ್ರೀ ನಿಮಿಷಾಂಬ ಆರ್ಟ್ ಗ್ಯಾಲರಿ ಸಂಚಾಲಕಿ ಶ್ರೀಮತಿ ವಿದ್ಯಾವತಿ ಚಿತ್ರಗಾರ ಹಾಗೂ ಯುವ ಸಂಘಟಕರಾದ ಭಾಸ್ಕರ್ ರಾವ್ ಚಿತ್ರಗಾರ ಜಂಟಿ ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ,
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 