ಬಟ್ಟೂರು ಗ್ರಾಮದಲ್ಲಿ ಮೊಹರಂ ಹಬ್ಬದ ಸಂಭ್ರಮ
Muharram festival celebrations in Battur village
ಲಕ್ಷ್ಮೇಶ್ವರ" 26: ತಾಲೂಕಿನ ಬಟ್ಟೂರು ಗ್ರಾಮದಲ್ಲಿ ಗ್ರಾಮದ ಸಮಸ್ತ ಎಲ್ಲಾ ಸಮಾಜ ಬಾಂಧವರು ಒಗ್ಗಟ್ಟಾಗಿ ಸಂಭ್ರಮದೊಂದಿಗೆ ಮೊಹರಂ ಹಬ್ಬವನ್ನು ಆಚರಿಸುವುದ ರೊಂದಿಗೆ ಭಾವೈಕ್ಯತೆ ಹಬ್ಬವೆಂದು ಸಾರುವ ಮೊಹರಂ ಹಬ್ಬಕ್ಕೆ ಸಾಕ್ಷಿಯಾದರು ಮೊಹರಂ ಹಬ್ಬದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲೆ ದೇವರಗಳ ಮೆರವಣಿಗೆ ಸಕಲ ವಾದ್ಯ ವೈಭವ್ಗಳೊಂದಿಗೆ ನಡೆಯಿತು ಮೆರವಣಿಗೆಯಲ್ಲಿ ಮುದ್ದು ಮಕ್ಕಳಿಂದ ಹೆಜ್ಜೆ ಮೇಳ ಹಾಗೂ ಯುವಕರಿಂದ ಮುಳ್ಳ ಗದ್ದಿಗೆಯಲ್ಲಿ ಹಾಗೂ ಹಗ್ಗ ಹಿಡಿದು ಹೆಜ್ಜೆ ಮೇಳ ಹಾಕಿದ್ದು ಮೊಹರಂ ಹಬ್ಬದ ವಿಶೇಷವಾಗಿತ್ತು ಮೊಹರಂ ಹಬ್ಬ ಆಚರಣೆ ಕುರಿತು ಮಾತನಾಡಿದ ಗ್ರಾಮದ ಯುವಕ ಹಸನಸಾಬ ಟಕೇದ ಅವರು ಮೊಹರಂ ಹಬ್ಬವನ್ನು ತ್ಯಾಗ ಬಲಿದಾನ ಸಂಕೇತವಾಗಿ ಆಚರಿಸುತ್ತಾರೆ.
ಈ ಹಬ್ಬವು ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಮತ್ತು ಅವರ ಅನುಯಾಯಿಗಳು ಕರ್ಬಾಲಾ ಯುದ್ಧದಲ್ಲಿ ಧರ್ಮದ ಉಳಿವಿಗಾಗಿ ವೀರಮರಣ ವಪ್ಪಿದೆ ದಿನವಾಗಿ ಆಚರಿಸುತ್ತಾರೆ ಎಂಬ ಇತಿಹಾಸ ಇದೆ ಆದರೆ ಇತ್ತೀಚಿನ ದಿನಗಳಲ್ಲಿ ಹಿಂದೂಗಳು ಸಹ ಶ್ರದ್ಧಾಭಕ್ತಿಯಿಂದ ಮೊಹರಂ ಹಬ್ಬವನ್ನು ಆಚರಿಸುತ್ತಾರೆ ಇದರಿಂದ ಮೊಹರಂ ಹಬ್ಬವು ಹಿಂದೂ ಮುಸ್ಲಿಂ ಸಮುದಾಯದ ಭಾವೈಕ್ಯತೆಯನ್ನು ಸಾರುವ ಹಬ್ಬವಾಗಿ ಪರಿಣಮಿಸಿದೆ ಕೆಲವೊಂದು ಗ್ರಾಮಗಳಲ್ಲಿ ಮುಸ್ಲಿಮರೆ ಇಲ್ಲ ಅಂತ ಗ್ರಾಮಗಳಲ್ಲಿ ಹಿಂದುಗಳೇ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ ಇದರಿಂದ ಮೊಹರಂ ಹಬ್ಬ ವಿಶೇಷ ಅರ್ಥವನ್ನು ಪಡೆದುಕೊಂಡಿದೆ ಎಂದರು ಮೊಹರಂ ಹಬ್ಬದ ಅಲೆ ದೇವರಗಳ ಮೆರವಣಿಗೆಯಲ್ಲಿ ಗ್ರಾಮದ ಬಟ್ಟೂರು ಗ್ರಾಮದ ಎಲ್ಲ ಸಮಾಜದ ಬಾಂಧವರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಗುರುಹಿರಿಯರು ಮಹಿಳೆಯರು ಮಕ್ಕಳು ಭಾಗಿಯಾಗಿದ್ದರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 