ಮುದ್ದೇಬಿಹಾಳ ಶಾಲೆ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಚಾಂಪಿಯನ್ ಅವಾರ್ಡ ಪರೀಕ್ಷೇ ವಿಜೇತರಿಗೆ ಸನ್ಮಾನ
Muddebihala School felicitates the winners of the Champion Award examination for students of classe
ಮುದ್ದೇಬಿಹಾಳ 27: ಮಕ್ಕಳಿಗೆ ಪ್ರಾರಂಭದ ಹಂತದಿಂದಲೇ ಅತ್ಯಾಧುನಿಕ ತರಬೇತಿ ನೀಡುವ ಮೂಲಕ ಗುಣಮಟ್ಟ ಶಿಕ್ಷಣ ನೀಡುವೂದೇ ನಮ್ಮ ಆಕ್ಸಫಡ್ ಪಾಟೀಲ ಶಿಕ್ಷಣ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಿ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳಾಗಿ ಆಯ್ಕೆಗೊಳ್ಳುತ್ತಿರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿಯೇ ನಾಗರಬೆಟ್ಟ ಆಕ್ಸಫಡ್ ಪಾಟೀಲ ಶಿಕ್ಷಣ ಸಂಸ್ಥೆಯ ವಿದ್ಯಾಕಾಶಿ ಎಂದೆ ಹೆಸರಾಗಿದೆ ಎಂದು ನಾಗರಬೇಟ್ ಆಕ್ಸಫಡ್ ಪಾಟೀಲ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಹೇಳಿದರು. ತಾಲೂಕಿನ ಬಿದರಕುಂದಿ ಹತ್ತಿರ ವಿರುವ ನಾಗರಬೆಟ್ಟ್ ಆಕ್ಸಫಡ್ ಪಾಟೀಲ ಶಿಕ್ಷಣ ಸಂಸ್ಥೆಯ ಮುದ್ದೇಬಿಹಾಳ ಶಾಲೆಯಲ್ಲಿ ಭಾನುವಾರ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಚಾಂಪಿಯನ್ ಅವಾರ್ಡ ಪರೀಕ್ಷೇ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಕಾಲೇಜಿನ ಆವರಣದಲ್ಲಿ ಏಪ್ರಿಲ್ 4 ರಂದು ಮೂರು ಕೋಟಿ ರೂ.ವೆಚ್ಚದ ನಗದು ಬಹುಮಾನ ಸಹಿತ ಶಿಷ್ಯವೇತನ ನೀಡುವ ಆಕ್ಸಫರ್ಡ್ ಪಾಟೀಲ್ಸ್ ಜೀನಿಯಸ್ ಸ್ಟೂಡೆಂಟ್ ಆವಾರ್ಡ್ ಪರೀಕ್ಷೆ ನಡೆಸಲಾಗುತ್ತದೆ. ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ.ಈ ವರ್ಷದ ಜೆಇಇ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೇ.90ಕ್ಕೂ ಅಧಿಕ ಪರ್ಸೆಂಟೈಲ್ ಅಂಕ ಬಂದಿವೆ.ಅದರಲ್ಲಿ ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ ಮೂರು ಸ್ಥಾನಗಳನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದ್ದು ಪ್ರಸಕ್ತ ವರ್ಷದಿಂದ ಜೆಇಇ ತರಬೇತಿಯನ್ನು ಮುದ್ದೇಬಿಹಾಳ ಶಾಖೆಯಲ್ಲಿ ಆರಂಭಿಸಲಾಗಿದೆ ಕಳೆದ ಐದು ವರ್ಷಗಳಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸ್ಥಾನ ಪಡೆದುಕೊಳ್ಳುತ್ತಾ ಬಂದಿದ್ದಾರೆ.
2025ರಲ್ಲಿ ನಮ್ಮ ಸಂಸ್ಥೆ 187ಮೆಡಿಕಲ್ ಸೀಟುಗಳನ್ನು ಪಡೆದುಕೊಂಡ ಹೆಗ್ಗಳಿಕೆ ನಮ್ಮ ಸಂಸ್ಥೆಯದ್ದಾಗಿದೆ. ಜತೆಗೆ ಬಾಗಲಕೋಟೆಯಲ್ಲಿಯೂ ಕೂಡ ನಮ್ಮ ಶಿಕ್ಷಣ ಸಂಸ್ಥೆಯ ಶಾಖೆ ಪ್ರಾರಂಭಿಸಲಾಗಿದೆ ಅದರಂತೆ ಜೆಇಇ ನೀಟ ಪರೀಕ್ಷೆ ಕುರಿತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೂಡ ಟ್ಯಾಲೇಂಟ್ ಅವಾರ್ಢ ಮೂಲಕ ಮಕ್ಕಳಿಗೆ ಸ್ಪರ್ಧಾ ಮನೋಭಾವ ಬೆಳೆಯಸುವಲ್ಲಿ ನಡೆಸಿದ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲ ಶಿಕ್ಷಕರ ಹಾಗೂ ಉಪನ್ಯಾಸಕರ ಹಾಗೂ ಸಿಬ್ಬಂದಿ ವರ್ಗದವರ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದು ಹೇಳಿದರುಮಾಜಿ ಸೈನಿಕ ನಾಗಲಿಂಗಯ್ಯ ಮಠ ಅವರು ಮಾತನಾಡಿ ರಾಜ್ಯದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿವೆ ಆದರೇ ನಾಗಬೆಟ್ಟ್ ಆಕ್ಸಪಡ್ ಪಾಟೀಲ ಶಿಕ್ಷಣ ಸಂಸ್ಥೆ ಕಾರ್ಯ ಸಾಧನೆ ಅಪಾರವಾಗಿದೆ.
ಬೆಂಗಳೂರು ಮಂಗಳೂರಂತ ದೊಡ್ಡ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಯನ್ನೇ ಅವಲಂಬಿತರಾಗಿ ಕುಳಿತುಕೊಳ್ಳಬೇಕಿತ್ತು ಇದರಿಂದ ನಿಜವಾದ ಬಡ ಕುಟುಂಭದ ಪ್ರತಿಭಾನ್ವೀತ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆದುಕೊಳ್ಳಲು ನೀಟ್ ನಂತಹ ಸ್ಪಧಾತ್ಮಕ ಪರೀಕ್ಷೆಗಳಲ್ಲಿ ಬಾಗವಹಿಸಲು ಕಷ್ಟಪಡೆಬೇಕಾಗಿತ್ತು ಆದರೇ ಸಂಸ್ಥೆಯ ಮುಖ್ಯಸ್ಥರಾದ ಎಂ.ಎಸ್.ಪಾಟೀಲರ ಶಿಕ್ಷಣ ಪ್ರೇಮದ ಪರಿಶ್ರಮದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿದ್ದು ನಿಜಕ್ಕೂ ಶ್ಲಾಘನಿಯ ಎಂದರು. ಈ ವೇಳೆ ಬಿ.ಎಚ್.ತಿಳಗೂಳ,ಸಂಗಮೇಶ ಹೂಗಾರ ,ಮಾಜಿ ಸೈನಿಕ ನಾಗಲಿಂಗಯ್ಯ ಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಢವಳಗಿ ಸ್ವಾತಂತ್ರ್ಯ ಪಪೂ ಕಾಲೇಜಿನ ಪ್ರಾಚಾರ್ಯ ಎನ್.ಎ.ಬಿರಾದಾರ, ಸಂಸ್ಥೆಯ ನಿರ್ದೇಶಕ ದರ್ಶನಗೌಡ ಪಾಟೀಲ, ಶಿಕ್ಷಕರಾದ ರಾಜಶೇಖರ ಹಿರೇಮಠ, ಆನಂದ ನಾವಿ, ಸಿದ್ದನಗೌಡ ಕಾಶಿನಕುಂಟಿ ಮೊದಲಾದವರು ಇದ್ದರು.
ಪರಶುರಾಮ ಹೂಗಾರ ಸ್ವಾಗತಿಸಿದರು. ಇಸ್ಮಾಯಿಲ್ ಮನಿಯಾರ್ ನಿರೂಪಿಸಿ ವಂದಿಸಿದರು.5 ರಿಂದ 10 ನೇಯ ತರಗತಿಯವರೆಗೆ ಆಕ್ಸಫರ್ಡ್ ಪಾಟೀಲ್ಸ್ ಚಾಂಪಿಯನ್ಸ್ ಪರೀಕ್ಷೆಯಲ್ಲಿ 912 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಎಲ್ಲ ತರಗತಿಗೆ 11 ವಿದ್ಯಾರ್ಥಿಗಳಂತೆ ಒಟ್ಟು 55 ವಿದ್ಯಾರ್ಥಿಗಳನ್ನು 10 ಲಕ್ಷ ರೂ.ವೆಚ್ಚದ ಶಿಷ್ಯವೇತನಕ್ಕೆ ಆಯ್ಕೆ ಮಾಡಲಾಯಿತು. ವಿಶೇಷವೆಂದರೆ ಮಧ್ಯಪ್ರದೇಶ, ಉತ್ತರ್ರದೇಶ, ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು.ಪೋಟೊ: ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಹತ್ತಿರ ವಿರುವ ನಾಗರಬೆಟ್ಟ್ ಆಕ್ಸಫಡ್ ಪಾಟೀಲ ಶಿಕ್ಷಣ ಸಂಸ್ಥೆಯ ಮುದ್ದೇಬಿಹಾಳ ಶಾಖೆಯಲ್ಲಿ ಭಾನುವಾರ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಚಾಂಪಿಯನ್ ಅವಾರ್ಡ ಪರೀಕ್ಷೇ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 