ಸ್ವಂತ ಮನೆಯನ್ನೆ ಮಠವಾಗಿಸಿದ ಮೃತ್ಯುಂಜಯ ಮಹಾಸ್ವಾಮಿ

ಸ್ವಂತ ಮನೆಯನ್ನೆ ಮಠವಾಗಿಸಿದ ಮೃತ್ಯುಂಜಯ ಮಹಾಸ್ವಾಮಿ Mrityunjaya Mahaswami turned his own house into a monastery

                   ಹುಕ್ಕೇರಿ  16: ಸ್ವಂತ ಮನೆಯನ್ನೆ ಮಠವಾಗಿಸಿದ ಮೃತ್ಯುಂಜಯ ಮಹಾಸ್ವಾಮಿ - ರಮಾನಂದ ಸ್ವಾಮಿಜಿ.ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದ ಮೃತ್ಯುಂಜಯ ಮಹಾಸ್ವಾಮಿಗಳು ತಮ್ಮ ಸ್ವಂತ ಮನೆಯನ್ನು ಸಿದ್ದಾರೂಡರ ಮಠವನ್ನಾಗಿಸಿ ಜ್ಞಾನ ಮತ್ತು ಅದ್ಯಾತ್ಮ ನೀಡುವ ಕೇಂದ್ರವನ್ನಾಗಿಸಿ ನಮಗೆಲ್ಲಾ ಮಾದರಿ ಯಾಗಿದ್ದಾರೆ ಎಂದು ಕಕ್ಕೆರಿ ಸಿದ್ದಾರೂಡ ಮಠದ ರಮಾನಂದ ಮಹಾಸ್ವಾಮಿಗಳು ಹೇಳಿದರು.ಹುಕ್ಕೇರಿ ತಾಲೂಕಿನ ಬೆಳವಿ ,ಸಾರಾಪೂರ, ಶಿರಹಟ್ಟಿ ಗ್ರಾಮಗಳ ಮಧ್ಯಭಾಗದಲ್ಲಿರುವ ಸದ್ಗುರು ಸಿಧ್ದಾರೂಡರ ಮಠದಲ್ಲಿ ಸಂಕ್ರಮಣ ಮತ್ತು ಕಲ್ಮೇಶ್ವರ ಸ್ವಾಮಿಗಳ 19 ನೇ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡ 37 ನೇ ಶಿವಜ್ಞಾನ ಸಪ್ತಾಹ, ದೇವಿ  ಹಾಗೂ ಭಗವದ್ಗೀತಾ ಪಾರಾಯಣ ಕಾರ್ಯಕ್ರಮ ಕಳೆದ ಮೂರು ದಿನಗಳಿಂದ ನಾಡಿನ ಹರ ಗುರು ಚರ ಮೂರ್ತಿಗಳ ಸಾನಿಧ್ಯದಲ್ಲಿ ವಿಬೃಂಜನೆಯಿಂದ ಜರುಗಿತು.ಕೋನೆಯ ದಿನದ ಸಮಾರೋಪ ಸಮಾರಂಭದಲ್ಲಿ  ಮೃತ್ಯುಂಜಯ ಸ್ವಾಮಿಗಳು ,ಈಶ್ವರ ಚೌಗಲಾ, ರಾಮಣ್ಣಾ ಬಂದಾಯಿ ಮತ್ತು ಬಾಬು ನಾಯಿಕ ಸಂತರು ಗುರುವಿನ ಮಹತ್ವ ಕುರಿತು ಪ್ರವಚನ ನಡೆಸಿದರು.

                 ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಕಕ್ಕೇರಿ ಸಿಧ್ದಾರೂಢ ಮಠದ ರಾಮಾನಂದ ಭಾರತಿ ಮಹಾಸ್ವಾಮಿಗಳು ಮಾತನಾಡಿ ಬೆಳವಿ ಗ್ರಾಮದ ಮೃತ್ಯುಂಜಯ ಮಹಾಸ್ವಾಮಿಗಳು ಹುಬ್ಬಳ್ಳಿಯ  ಆರೂಢ ಶಿವಪುತ್ರ ಸ್ವಾಮಿಗಳಿಂದ ದೀಕ್ಷೆ ಪಡೆದು ತಮ್ಮ ಗ್ರಾಮದ ಸ್ವಂತ ಮನೆಯನ್ನು ಮಠವನ್ನಾಗಿಸಿ ಈ ಭಾಗದ ಜನರಿಗೆ ಅಧ್ಯಾತ್ಮಿಕ ಕೇಂದ್ರಮಾಡಿ ಪ್ರತಿ ವರ್ಷ ಮೂರು ದಿನಗಳ ಕಾಲ ವೇದಾಂತ, ಜ್ಞಾನ ದಾಸೋಹ,ಅನ್ನದಾಸೋಹ ಮಾಡುವ  ಮೂಲಕ ಈ ಪವಿತ್ರ ಸ್ಥಳಕ್ಕೆ ಬರುವ ಭಕ್ತರ ಮನಸ್ಸಿಗೆ ನೆಮ್ಮದಿ ನೀಡುತ್ತಿದ್ದಾರೆ ಎಂದರು (    )ನಂತರ ಪರಿಸರದ ಬಾಲಕಿಯರಿಂದ ನೃತ್ಯ ಗಳು ಜರುಗಿದವು.ಗಣ್ಯರಿಗೆ ಮಠದ ವತಿಯಿಂದ ಸತ್ಕರಿಸಿ ಅಭಿನಂದಿಸಲಾಯಿತು.ಪೀಠಾಧಿಪತಿಗಳಾದ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ ಸದ್ಗುರುಗಳ ಆದೇಶದ ಮೇರೆಗೆ ನಮ್ಮ ಸ್ವಂತ ಜಮೀನಿನಲ್ಲಿ ಸಿಧ್ದಾರೂಢರ ಮಠ ಸ್ಥಾಪಿಸಿ ಕಳೆದ 37 ವರ್ಷಗಳಿಂದ ದೇವಿ ಪಾರಾಯಣ, ವೇದಾಂತ ಪರಿಷತ್ ನಿರಂತರ ಜರಗುತ್ತಿವೆ ಇದಕ್ಕೆ ಬೆಳವಿ ಹಾಗೂ ಸುತ್ತಮುತ್ತಲ್ಲಿನ ಜನರಿಗೆ ಸಿಧ್ದಾರೂಢರ ಆಶಿರ್ವಾದ ಸಧಾ ಲಭಿಸಲಿ ಎಂದರು (    )ಈ ಸಂದರ್ಭದಲ್ಲಿ ಬಸವರಾಜ ಝಿರಲಿ, ಮುಗಳಿಯ ಗದಗಯ್ಯಾ ಮಹಾಸ್ವಾಮಿ,ಗುತ್ತಿಗೆದಾರ ಸಂಜಿವ ಚಿಕ್ಕೋಡಿ,ಭೀಮಪ್ಪಾ ಖೇಮಾಳೆ, ಕುಮಾರ ಮಡಿವಾಳ, ಬಾಳಪ್ಪಾ ಹಂಜ್ಯಾನಟ್ಟಿ ಹಾಗೂ ಹುಕ್ಕೇರಿ,  ಮದಿಹಳ್ಳಿ,ಬೆಣಿವಾಡ, ಎಲಿಮುನ್ನೋಳ್ಳಿ, ಬೆಳವಿ,ಶಿರಹಟ್ಟಿ, ಚಿಕ್ಕಣಗಿ ತೋಟದ ಭಕ್ತರು ಹಾಜರಿದ್ದರು.