ಅಮ್ಮಣಗಿಯ ಶ್ರೀ ಮಲ್ಲಿಕಾಜರ್ುನ ಜಾತ್ರಾ ಮಹೋತ್ಸವ

ರಾಮಣ್ಣಾ ನಾಯಿಕ 

         ಅಮ್ಮಣಗಿ (ತಾ: ಹುಕ್ಕೇರಿ) ಗ್ರಾಮದ ಶ್ರೀ ಮಲ್ಲಿಕಾಜರ್ುನ ದೇವಸ್ಥಾನದ ಜಾತ್ರಾ ಮಹೋತ್ಸವ ರವಿವಾರ 13 ರಿಂದ ಬುಧವಾರ 16 ಜನೇವರಿ ವರೆಗೆ ಅದ್ಧೂರಿಯಾಗಿ ಜರುಗಲಿದೆ. ನಡುನಾಡ ಶ್ರೀಶೈಲವೆಂದು ಖ್ಯಾತಿ ಹೊಂದಿದ ಈ ಜಾತ್ರೆಗೆ ಕನರ್ಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ. ಜಾತ್ರೆ ಹಾಗೂ ದೇವಸ್ಥಾನದ ಐತಿಹಾಸಿಕ ಹಿನ್ನೆಲೆಯನ್ನು ಪರಿಚಯಿಸುವ ಈ ಲೇಖನ !

           ಹುಕ್ಕೇರಿ ತಾಲೂಕಿನ ಅಮ್ಮಣಗಿಯಲ್ಲಿರುವ ಪ್ರಾಚೀನ ಮಲ್ಲಿಕಾಜರ್ುನ ದೇವಸ್ಥಾನ ನಡುನಾಡ ಶ್ರೀಶೈಲವೆಂದು ಹೆಸರುವಾಸಿಯಾಗಿದೆ. ದೇವಗಿರಿಯ ಯಾದವ ದೊರೆ ಸಿಂಘಣದೇವ ಚಾಲುಕ್ಯರ ಕೊನೆಯ ಅರಸನಾದ ಸೋಮೇಶ್ವರನನ್ನು ಯುದ್ದದಲ್ಲಿ ಪರಾಭವಗೊಳಿಸಿ ಈ ಭಾಗವನ್ನು ಆಳತೊಡಗಿದ. ಕೊನೆಯ ಅರಸನಾದ ಅಮ್ಮಣದೇವ ರಾಜ್ಯ ತ್ಯಾಗ ಮಾಡಿ ಅಮ್ಮಣಗಿಯನ್ನು ತನ್ನ ತಪೋಭೂಮಿಯನ್ನಾಗಿ ಮಾಡಿಕೊಂಡು ಕೊನೆಯ ದಿನಗಳನ್ನು ಇಲ್ಲಿ ಕಳೆದ ಬಗ್ಗೆ ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಕ್ರಿ.ಶ. 980 ರಲ್ಲಿ ಸವದತ್ತಿಯ ರಟ್ಟರಾಜನಾದ ಮೊದಲನೆಯ ಕಾರ್ತವೀರ್ಯನ ಕಾಲದಲ್ಲಿ ಇಲ್ಲಿಯ ಜೈನ ತ್ರಿ ಬಸದಿಗಳು ಹಾಗೂ ಸಂಕೇಶ್ವರದ ಶಂಕರಲಿಂಗ ದೇವಸ್ಥಾನಗಳು ನಿಮರ್ಾಣಗೊಂಡಿರುವದಾಗಿ ಹೇಳಲಾಗುತ್ತದೆ. 

   ಮಲ್ಲಿಕಾಜರ್ುನ ದೇವಸ್ಥಾನ ಅಮ್ಮಣಗಿ ಗ್ರಾಮದಿಂದ ಪೂರ್ವ ದಿಶೆಯಲ್ಲಿ 2 ಕಿ.ಮೀ. ಅಂತರದಲ್ಲಿ ಹುಣಸೆೆ ಮರಗಳ ನಿಸರ್ಗ ರಮ್ಯ ಪರಿಸರದಲ್ಲಿ ನಿಮರ್ಾಣಗೊಂಡಿದೆ. ಭವ್ಯ ಪ್ರವೇಶ ದ್ವಾರ, ಗೋಪುರಗಳು, ಮಲ್ಲಿಕಾಜರ್ುನ ಹಾಗೂ ಭ್ರಮರಾಂಭಿಕಾ ವಿಗ್ರಹಗಳು, ದೇವಸ್ಥಾನದ ಹಿಂಬದಿಗಿರುವ ವಿಶಾಲ ಕೆರೆ, ಯಾತ್ರಿಕರನ್ನು ಕೈ ಮಾಡಿ ಕರೆಯುತ್ತವೆ. ದೇವಸ್ಥಾನ ನಿಮರ್ಾಣಗೊಳ್ಳಲು ಇದಕ್ಕೊಂದು ಐತಿಹಾಸಿಕ ಕಾರಣವಿದೆ. 

   ಸಮೀಪದ ಹಂದಿಗೂಡ ಗ್ರಾಮದ ಹುದ್ದಾರ ಕುಟುಂಬದ ಆಕಳುಗಳು ಕಾಡಿಗೆ ಮೇಯಲು ಹೋದಾಗ ಅದರಲ್ಲಿಯ ಒಂದು ಆಕಳು ಪ್ರತಿದಿನ ಒಂದು ಹುತ್ತಿನ ಬಳಿ ಹೋಗಿ ಹಾಲು ಕರೆಯುವುದನ್ನು ಕಂಡ ದನಗಾಯಿ ಆಳು ಮನುಷ್ಯ ತನ್ನ ಒಡೆಯನಿಗೆ ಈ ವಿಷಯ ತಿಳಿಸಿದಾಗ ಹುದ್ದಾರರು ಈ ದೃಶ್ಯವನ್ನು ಪ್ರತ್ಯಕ್ಷವಾಗಿ ಕಂಡು ಎಲಿಮುನ್ನೋಳಿ ಪಂಡಿತರನ್ನು ವಿಚಾರಿಸಿದಾಗ ಅವರು ಅಲ್ಲಿ ಮಲ್ಲಿಕಾಜರ್ುನ ಮೂತರ್ಿಯಿದ್ದು ಅದನ್ನು ಹೊರತೆಗೆದು ವಿಧಿಪೂರ್ವಕವಾಗಿ ಪ್ರತಿಷ್ಠಾಪನೆ ಮಾಡಲು ಸೂಚಿಸಿದಾಗ ಅವರು ಮೂತರ್ಿಯನ್ನು ಹೊರತೆಗೆದು ವಿಧಿ ಪೂರ್ವಕ ಪೂಜೆ ಸಲ್ಲಿಸಿ ಪ್ರತಿಷ್ಠಾಪನೆ ಮಾಡಿದರು.

   ಶ್ರೀಶೈಲದಲ್ಲಿರುವ ಮಲ್ಲಿಕಾಜರ್ುನ ದೇವಸ್ಥಾನಕ್ಕೂ ಹಾಗೂ ಅಮ್ಮಣಗಿಯ ಮಲ್ಲಿಕಾಜರ್ುನ ದೇವಸ್ಥಾನಕ್ಕೂ ಸಾಕಷ್ಟು ಸಾಮ್ಯ ಹಾಗೂ ಹೋಲಿಕೆಗಳು ಕಂಡುಬರುತ್ತವೆ. ಶ್ರೀಶೈಲದಂತೆ ಅಮ್ಮಣಗಿ ದೇವಸ್ಥಾನ ಕೂಡ ಪೂರ್ವ ದಿಕ್ಕಿನಲ್ಲಿದೆ. ಎದುರು ಸುಂದರವಾದ ದೀಪಪ್ತಂಭ, ಉತ್ತರ ಭಾಗಕ್ಕೆ ಕಪ್ಪು ಶಿಲೆಯಿಂದ ನಿಮರ್ಿಸಲಾದ ವಿಶಾಲ ಕೆರೆಯಿದೆ. ಭಕ್ತಾದಿಗಳು ಕೆರೆಯಲ್ಲಿ ಕೈಕಾಲು ಮುಖ ತೊಳೆದುಕೊಂಡು ದೇವರ ದರ್ಶನ ಪಡೆಯುವ ಪರಪಂರೆ ಇಂದಿಗೂ ಮುಂದುವರೆದಿದೆ. ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಬ್ಯಾಳಿ ಬಸಪ್ಪನ ಚಿಕ್ಕದಾದ ದೇವಸ್ಥಾನವಿದೆ. 

   ಶ್ರೀಶೈಲದಲ್ಲಿ ದವನದ ಹುಣ್ಣಿಮೆಯಂದು ನಡೆಯುವ ಉತ್ಸವದಲ್ಲಿ ದೇಶದ ವಿವಿಧ ಮೂಲೆಗಳಿಂದ 150ಕ್ಕೂ ಮಿಕ್ಕಿ ಕಂಬಿಗಳು ಬರುತ್ತವೆ. ಅದರಲ್ಲಿ ಅಮ್ಮಣಗಿಯ ಕಂಬಿಗೆ ಪ್ರಥಮ ಸ್ಥಾನವಿದೆ.  ಶ್ರೀಶೈಲದಂತೆ ಇಲ್ಲಿಯೂ ಸೂಯರ್ೋದಯಕ್ಕೆ ಮುಂಚೆ ಪ್ರಭಾತ ಪೂಜೆ, 10 ಗಂಟೆಗೆ  ಜಾವದ ಪೂಜೆ, ಸಾಯಂಕಾಲ ಪೂಜೆ, ನಂತರ ದೀಪಾರಾಧನೆಯಾದ ಕೂಡಲೆ ವಿಧಿಪೂರ್ವಕ ಪೂಜೆ ಹಾಗೂ ಶಯನ ಪೂಜೆಗಳು ನಡೆಯುತ್ತವೆ. ಜಾತ್ರೆಯ ಆರಂಭದ ದಿನದಂದು ನೇಲರ್ಿ ಗ್ರಾಮದ ಬಸವೇಶ್ವರ ದೇವರ ಪಲ್ಲಕ್ಕಿಯನ್ನು ಇಲ್ಲಿ ಗ್ರಾಮಸ್ಥರು ಗೌರವಾದರದಿಂದ ಬರಮಾಡಿಕೊಳ್ಳುತ್ತಾರೆ. ಭ್ರಮರಾಂಭಿಕಾ ಹಾಗೂ ಮಲ್ಲಿಕಾಜರ್ುನರ ಲಗ್ನ ಸಮಾರಂಭದಲ್ಲಿ ಈ ಪಲ್ಲಕ್ಕಿಯನ್ನು ಇಡಲಾಗುತ್ತದೆ. ಮಲ್ಲಿಕಾಜರ್ುನ ಹಾಗೂ ಭ್ರಮರಾಂಭಿಕೆಗೆ ರಾಜ ವೈಭವದ ಅಲಂಕಾರಗಳಿದ್ದು ಭಕ್ತಾಧಿಗಳ ಇಷ್ಟಾರ್ಥ ನೆರವೇರಿದಾಗ ಅವರು ದೇವರಿಗೆ ಚಿನ್ನ ಹಾಗೂ ಬೆಳ್ಳಿಯ ಒಡವೆಗಳನ್ನು ಅಪರ್ಿಸುತ್ತಾರೆ. ಪೂಜೆ ಹಾಗೂ ಜಾತ್ರೆ ನಿರಂತರವಾಗಿ ಸಾಗಲು ಸೇವಕರಿಗೆ ಭೂಮಿಗಳನ್ನು ಉಂಬಳಿಯಾಗಿ ನೀಡಲಾಗಿದೆ. 

  ದೇವಾಲಯದ ಸಮೀಪಕ್ಕೆ ಹೋದಾಗ ವಿಶಾಲವಾದ ಗೋಪುರ, ಮಹಾದ್ವಾರದ ಮುಂಭಾಗದಲ್ಲಿ ಸುಂದರ ದೀಪಸ್ತಂಬ ಒಳಗೆ ಪ್ರವೇಶಿಸಿದ ನಂತರ ಶಿವನ ಭಜನಾಕಾರರಾದ ಶೃಂಗ, ಭಂಗಿಯರ ಮೂತರ್ಿಗಳು,  ಗರ್ಭ ಗುಡಿಯಲ್ಲಿ ಏಕಶಕ್ತಿ, ಮಹಾಶಕ್ತಿ ಮಲ್ಲಿಕಾಜರ್ುನ ವಿಗ್ರಹ, ಆವರಣದಲ್ಲಿ ಮಲ್ಲಿಕಾಜರ್ುನ ದೇವರ ವಿಶ್ರಾಂತಿ ಕೋಣೆ, ವೀರಭದ್ರ ಹಾಗೂ ಗಣಪತಿ ದೇವಸ್ಥಾನಗಳಿವೆ. 

  ಅಮ್ಮಣಗಿಯಲ್ಲಿ ಐದು ದಿನಗಳ ಸಂಕ್ರಮಣ ಉತ್ಸವ ಅದ್ಧೂರಿಯಾಗಿ ಜರಗುತ್ತದೆ ರವಿವಾರ 13 ರಂದು ಅಮ್ಮಣಗಿ ಗ್ರಾಮದಿಂದ ಶ್ರೀ ಮಲ್ಲಿಕಾಜರ್ುನ ದೇವರ ಪಲ್ಲಕ್ಕಿಯನ್ನು ದೇವಾಲಯಕ್ಕೆ ತಂದ ನಂತರ ಅರಿಶಿಣ ಹಚ್ಚುವ ಕಾರ್ಯಕ್ರಮ. ಸೋಮವಾರ 14 ಜನೇವರಿಯಂದು ವಿಶೇಷ ಪೂಜೆ ಜಾತ್ರೆಯ ಮುಖ್ಯ ದಿನ, ವಿಹಾರ ಹಾಗೂ ಎಳ್ಳು ಬೆಲ್ಲು ವಿನಿಮಯ ಕಾರ್ಯಕ್ರಮ. ಮಂಗಳವಾರ 15 ರಂದು ಕರಿ, ಬುಧವಾರ 16 ರಂದು ನಂದಿಕೋಲು, ಕುದುರೆ, ಬಾಜಾ ಭಜಂತ್ರಿಯೊಂದಿಗೆ ಪಲ್ಲಕ್ಕಿ ಮೆರವಣಿಗೆ ಅಪರಾಹ್ನ ಕುಸ್ತಿಗಳು. ಸಂಜೆ 4.30 ಕ್ಕೆ ಪಲ್ಲಕ್ಕಿ ಸಂಜೆ 6.30 ಕ್ಕೆ ಪಲ್ಲಕ್ಕಿ ಮರಳಿ ಅಮ್ಮಣಗಿ ಗ್ರಾಮಕ್ಕೆ ಬರುತ್ತದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾಮರ್ಿಕ ಕಾರ್ಯಕ್ರಮ, ಮನರಂಜನೆ, ನಾಟಕ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಭಕ್ತಾದಿಗಳಿಗೆ ಜಾತ್ರೆಗೆ ಬರಲು ಸಂಕೇಶ್ವರ, ಹುಕ್ಕೇರಿ ಹಾಗೂ ಚಿಕ್ಕೋಡಿ ಬಸ್ ನಿಲ್ದಾಣಗಳಿಂದ ವಿಶೇಷ ಬಸ್ಸುಗಳ ವ್ಯವಸ್ಥೆಯಿರುತ್ತದೆ.