ಅಂಬೇಡ್ಕರ್ ಅವರ ಪರಂಪರೆಯನ್ನು ಕಾರ್ಯದ ಮೂಲಕ ಜೀವಂತವಾಗಿಸಿದ ಮೋದಿಜಿ ಸರ್ಕಾರ
Modiji's government has kept Ambedkar's legacy alive through action
‘ಪಂಚತೀರ್ಥ’ಗಳ ಐತಿಹಾಸಿಕ ಸಂದೇಶ ಭಾರತೀಯ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಥಾನ ಅಪರೂಪದ್ದು. ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಈ ಮೂರು ಮೌಲ್ಯಗಳನ್ನು ಅವರು ಕೇವಲ ಬೋಧಿಸಲಿಲ್ಲ; ತಮ್ಮ ಜೀವನವನ್ನೇ ತ್ಯಾಗಿಸಿ ರಾಷ್ಟ್ರದ ರಕ್ತನಾಳಗಳಲ್ಲಿ ಹರಿಸಿದರು. ಇಂತಹ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸುವುದು ಕೇವಲ ಭಾಷಣಗಳಿಂದ ಮಾತ್ರ ಸಾಧ್ಯವಿಲ್ಲ. ಅದು ರಾಷ್ಟ್ರದ ಸಂವೇದನೆ, ಕಾರ್ಯಪ್ರವೃತ್ತಿ ಮತ್ತು ದೂರ ದೃಷ್ಟಿಯ ಮೂಲಕ ವ್ಯಕ್ತವಾಗಬೇಕು.ಈ ಹಿನ್ನೆಲೆಯಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ‘ಪಂಚತೀರ್ಥ’ಗಳ ಅಭಿವೃದ್ಧಿ ಕಾರ್ಯಗಳು ಭಾರತೀಯ ರಾಜಕೀಯದ ಧಾರ್ಮಿಕತೆ ಮತ್ತು ಐಕ್ಯತೆಗೆ ನಾಂದಿ.ಇದು ಕೇವಲ ಸ್ಮಾರಕ ನಿರ್ಮಾಣವಲ್ಲ; ಒಂದು ಮಹಾನ್ ಚಿಂತಕರಿಗೆ ಸಲ್ಲಿಸಲಾದ ರಾಷ್ಟ್ರದ ಜವಾಬ್ದಾರಿಯುತ ನಮನ.ಅಂಬೇಡ್ಕರ್ ಪರಂಪರೆಯ ಜಾಗತೀಕರಣಅಂಬೇಡ್ಕರ್ ಅವರ ಜೀವನದ ಐದು ಪ್ರಮುಖ ತಾಣಗಳನ್ನು ಗುರುತಿಸಿ ಅವನ್ನು “ತೀರ್ಥ”ಗಳೆಂದು ಘೋಷಿಸಿ ಅಭಿವೃದ್ಧಿಪಡಿಸುವುದು
ಅವರ ಚಿಂತನೆಯ ಜಾಗತೀಕರಣದ ದಿಕ್ಕಿನಲ್ಲಿ ಮಹತ್ತರ ಹೆಜ್ಜೆ. ಮಹೂನ ಜನ್ಮಭೂಮಿಯಿಂದ ಲಂಡನ್ನ ವಿದ್ಯಾಭ್ಯಾಸ ತಾಣವರೆಗೆ ಅಭಿವೃದ್ಧಿಪಡಿಸುವ ವಿಚಾರದಲ್ಲಿ ನರೇಂದ್ರ ಮೋದಿಜಿ ಅವರು ತೋರಿದ ಇಚ್ಛಾಶಕ್ತಿ ಒಬ್ಬ ವ್ಯಕ್ತಿ ಹೇಗೆ ಜಗತ್ತಿನ ಮನಸ್ಸನ್ನು ಬದಲಾಯಿಸಬಲ್ಲನು ಎಂಬುದಕ್ಕೆ ಸಾಕ್ಷಿ.ದೇಶದ ಸರ್ಕಾರವು ಈ ಐದು ತಾಣಗಳಿಗೆ ಒಗ್ಗಟ್ಟಿನ ಐಕ್ಯತೆಯನ್ನು ಕೊಟ್ಟು, ಅವನ್ನು “ರಾಷ್ಟ್ರೀಯ ಚಿಂತನೆಯ ನಕ್ಷೆ”ಯಲ್ಲಿ ಒಂದೇ ಶ್ರೇಣಿಗೆ ತಂದಿರುವುದು ಇತಿಹಾಸದಲ್ಲಿ ಮೊತ್ತಮೊದಲ ಬಾರಿಯಾಗಿದೆ.ಪಂಚತೀರ್ಥಗಳ ಸಂಕೇತ - ಕೃತಿಯ ಮೂಲಕ ಗೌರವ1. ಮಹೂ ಹಿ ಸಮಾನತೆಯ ಮೌಲ್ಯಗಳ ಜನ್ಮಸ್ಥಳಅಂಬೇಡ್ಕರ್ ಅವರ ಪ್ರಥಮ ಉಸಿರು ತೆಗೆದುಕೊಂಡ ಈ ನೆಲಕ್ಕೆ ಹೊಸ ಕಣ್ಣುಗಳನ್ನು ಕೂಡುವಂತೆ ಸ್ಮಾರಕ ಮತ್ತು ಮ್ಯೂಸಿಯಂ ನಿರ್ಮಿಸಲಾಗಿದೆ. ಈ ಮೂಲಕ ಸಮಾಜದ ಕಿರಿಯ-ಮಹಿಳೆ, ಹಿಂದುಳಿದ ವರ್ಗಗಳ ಮಕ್ಕಳಿಗೆ ಹೊಸ ಆತ್ಮವಿಶ್ವಾಸವನ್ನು ನೀಡುವ ಕಾರ್ಯ ನಡೆದಿದೆ.2. ದೀಕ್ಷಾಭೂಮಿ - ಧಾರ್ಮಿಕ ಸ್ವಾತಂತ್ರ್ಯದ ಘೋಷಣೆ1956ರಲ್ಲಿ ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದ ನಾಗ್ಪುರದ ಈ ತಾಣ ಇಂದು ಜಗತ್ತಿನ ಬೌದ್ಧ ನಕ್ಷೆಯಲ್ಲಿ ಭಾರತೀಯ ಗರ್ವದ ಬಿಂದು. ಸ್ಥಳೀಯ ಮೂಲಸೌಕರ್ಯ, ಸಾಂಸ್ಕೃತಿಕ ಕೇಂದ್ರಗಳು, ಸಂಶೋಧನಾ ವೃತ್ತಿಗಳು ಇವುಗಳು ದೀಕ್ಷಾಭೂಮಿಯನ್ನು ವಿಶ್ವಮಟ್ಟದ ತೀರ್ಥವನ್ನಾಗಿ ಮರುಶಿಲ್ಪಗೊಳಿಸುತ್ತಿವೆ.
3. ದೆಹಲಿಯ ಮಹಾಪರಿನಿರ್ವಾಣ ಸ್ಥಳ - ರಾಷ್ಟ್ರದ ಆತ್ಮಪರೀಶೀಲನೆಯ ಕೊಠಡಿ26, ಅಲಿಪುರ ರಸ್ತೆಯ ಮನೆ ಅಂಬೇಡ್ಕರ್ ಅವರ ಚಿಂತನೆಗಳ ಅಂತಿಮ ಆಶ್ರಯ.ಇಂದು ಅದು ಕೇವಲ ಸ್ಮಾರಕವಲ್ಲ; ಒಬ್ಬ ನಾಯಕನ ಆತ್ಮಸಾಕ್ಷಿಯನ್ನು ರಾಷ್ಟ್ರಕ್ಕೆ ಪರಿಚಯಿಸುವ ಅಧ್ಯಯನ ಕೇಂದ್ರ. ಇದು ಯುವಕರಿಗೆ ಸಂವಿಧಾನದ ಮೂಲಭಾವಗಳತ್ತ ಕರೆದೊಯ್ಯುವ ಜೀವಂತ ಪಾಠಶಾಲೆ.4. ಚೈತ್ಯಭೂಮಿ - ಅಂತಿಮ ವಿಶ್ರಾಂತಿ, ಅನಂತ ಪ್ರೇರಣೆಮುಂಬೈನ ಸಮಾಧಿ ಸ್ಥಳಕ್ಕೆ ವರ್ಷಕ್ಕೆ ಲಕ್ಷಾಂತರ ಜನರು ಬರುತ್ತಾರೆ. ಮೋದಿಜಿ ಸರ್ಕಾರ ಇಲ್ಲಿ ಸೃಷ್ಟಿಸಿರುವ ಮೂಲಸೌಕರ್ಯ ಭಕ್ತರಿಗೆ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಸಮಾನವಾಗಿ ಸ್ಪೂರ್ತಿ ನೀಡುತ್ತದೆ.5. ಲಂಡನ್‌ನ ಶಿಕ್ಷಣ ಭೂಮಿ - ವಿಶ್ವ ಮಟ್ಟದಲ್ಲಿ ಅಂಬೇಡ್ಕರ್ ಯೂರೋಪಿನ ಹೃದಯಭಾಗದಲ್ಲಿರುವ ಈ ಮನೆ ಈಗ ಭಾರತದ ಶೈಕ್ಷಣಿಕ ಸಂಕೇತ.
ವಿದೇಶದಲ್ಲಿ ಭಾರತೀಯ ಪರಂಪರೆಯನ್ನು ಉಳಿಸಿ ಪ್ರದರ್ಶಿಸಿದ ಈ ಕಾರ್ಯವು ಅಂಬೇಡ್ಕರ್ ಅವರ ಚಿಂತನೆಯ ವಿಶ್ವಮಟ್ಟದ ಗೌರವವನ್ನು ಮರುಸ್ಥಾಪಿಸಿದೆ. ಮೋದಿಜಿ ಸರ್ಕಾರದ ಗೌರವ - ಅಂಬೇಡ್ಕರ್ ರವರ ವಿಚಾರ ವಿಶ್ವಮಟ್ಟದ ಶಕ್ತಿ ಎಂದು ತೋರಿದ ಕೇಂದ್ರ ಸರ್ಕಾರ ಇಷ್ಟು ವರ್ಷಗಳಿಂದ ಅಂಬೇಡ್ಕರ್ ಅವರ ಹೆಸರನ್ನು ರಾಜಕೀಯ ಘೋಷಣೆಯಾಗಿ ಬಳಸಿದ ಅನೇಕರು ಇದ್ದರೂ, ಅವರ ಪರಂಪರೆಯನ್ನು ಭೌತಿಕವಾಗಿ, ಶೈಕ್ಷಣಿಕವಾಗಿ, ವಿಶ್ವ ಮಟ್ಟದಲ್ಲಿ ಸಂರಕ್ಷಿಸಿದ ಸರ್ಕಾರ ಎಂದರೆ ಅದು ಈಗಿನ ಕೇಂದ್ರ ಸರ್ಕಾರ.ಸಂವಿಧಾನಿಕ ಮೌಲ್ಯಗಳಿಗೆ ಶಿಕ್ಷಣ ಮತ್ತು ಜಾಗೃತಿಯ ಮೂಲಕ ಬಲ ನೀಡುವುದು,ಸಾಮಾಜಿಕ ನ್ಯಾಯದ ಯೋಜನೆಗಳನ್ನು ಬಲಪಡಿಸುವುದು,ದುರ್ಬಲ ವರ್ಗಗಳಿಗೆ ಅನ್ವಯಿಸುವ ನೇರ ನೀತಿಗಳ ಅನುಷ್ಠಾನ ಇವೆಲ್ಲವೂ ಅಂಬೇಡ್ಕರ್ ತತ್ವಗಳಿಗೆ ನೇರ ಅನ್ವಯ.ಪಂಚತೀರ್ಥಗಳು ಈ ಪ್ರಯತ್ನಗಳ ದೃಶ್ಯರೂಪ. ಚಿಂತನೆಗೆ ಮಾಡಿದ ಸ್ಮಾರಕ, ಭವಿಷ್ಯಕ್ಕೆ ಮಾಡಿದ ಹೂಡಿಕೆಸ್ಮಾರಕಗಳು ಇಟ್ಟಕಗಳಿಂದ ನಿರ್ಮಾಣವಾಗುತ್ತವೆ; ಆದರೆ ಪರಂಪರೆ ಚಿಂತನೆಗಳಿಂದ ನಿರ್ಮಾಣವಾಗುತ್ತದೆ.
ಅಂಬೇಡ್ಕರ್ ಅವರ ಚಿಂತನೆಗಳನ್ನೂ, ಅವರ ಹೋರಾಟಗಳನ್ನೂ, ಅವರ ಕನಸುಗಳನ್ನೂ ಜೀವಂತವಾಗಿಡಲು ರಾಷ್ಟ್ರ ಮಟ್ಟದಲ್ಲಿ ಇಷ್ಟು ದೊಡ್ಡ ಮಟ್ಟದ ಯೋಜನೆಯನ್ನು ಕೈಗೊಂಡಿರುವುದು ಭಾರತ ತನ್ನ ನೈತಿಕ ಜವಾಬ್ದಾರಿಯನ್ನು ಅರಿತುಕೊಂಡಿರುವುದಕ್ಕೆ ಸಾಕ್ಷಿ. ಇಂತಹ ಮಹತ್ಕಾರ್ಯಕ್ಕೆ ಪಣತೊಟ್ಟು ರಾಷ್ಟ್ರಕ್ಕೆ ಸಮರ್ಿಸಿದ ನರೇಂದ್ರ ಮೋದಿಜಿ ಅವರ ಕಾರ್ಯ ಅವರ ಕಾರ್ಯವೈಕರಿಗೆ ಹೇಳಿದ ಕೈಗನ್ನಡಿ.ಪಂಚತೀರ್ಥಗಳು ಮಾತ್ರ ಇತಿಹಾಸದ ಮರುನಿರ್ಮಾಣವಲ್ಲಅದು ಸಾಮಾಜಿಕ ನ್ಯಾಯದ ನವಯುಗದ ಶಿಲಾನ್ಯಾಸ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 