ನವದೆಹಲಿ, ಡಿ 24 -ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ ಎಂದು ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿದ ಅವರು, 'ಭಾರತ ನಿಮ್ಮ ಎರಡನೇ ಮನೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಔಪಚಾರಿಕ ಭೇಟಿಗೆ ಆಹ್ವಾನಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಚಚರ್ಿಸಲಿದ್ದೇವೆ. ನಾನು ಈ ಆಹ್ವಾನಕ್ಕೆ ಧನ್ಯವಾದ ಸಮಪರ್ಿಸುತ್ತೇನೆ ಮತ್ತು ಸೂಕ್ತ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದೇನೆ' ಎಂದಿದ್ದಾರೆ.
' ಇಂದು ಮಧ್ಯಾಹ್ನ ನನ್ನ ಅತ್ಮೀಯ ಸ್ನೇಹಿತ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಪ್ರಾಥಮಿಕ ಫಲಿತಾಂಶದಲ್ಲಿ ವಿಜೇತರಾಗಿರುವುದಕ್ಕೆ ಆಭಿನಂದನೆ ಸಲ್ಲಿಸಿದ್ದಾರೆ' ಎಂದರು.