ಮೊಬೈಲ್ಗಳು ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಲಿ, ಸಮಯ ಕಸಿಯುವ ಸಾಧನವಾಗಬಾರದು

ಮೊಬೈಲ್ಗಳು ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಲಿ, ಸಮಯ ಕಸಿಯುವ ಸಾಧನವಾಗಬಾರದು  Mobile phones should aid students' learning, not become devices that steal their time

ಲೋಕದರ್ಶನ ವರದಿ 

ಬೆಳಗಾವಿ, ಸೆ. 4: ಮೊಬೈಲ್ ಫೋನ್ಗಳು ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಬೇಕೇ ಹೊರತು, ಅವರ ಸಮಯ ಮತ್ತು ಏಕಾಗ್ರತೆಯನ್ನು ಕಸಿದುಕೊಳ್ಳುವ ಸಾಧನವಾಗಬಾರದು ಎಂದು ಸ್ವಾಮಿ ಮೋಕ್ಷಾತ್ಮಾನಂದಜಿ ಮಹಾರಾಜ ಹೇಳಿದರು.  

ಉದಯಭಾಗದ ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ರಿಸರ್ಚ್‌ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಶುಭಾರಂಭ 2ಏ26’ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ತಂತ್ರಜ್ಞಾನ ಇಂದಿನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಅದರ ಸದುಪಯೋಗದಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಮೊಬೈಲ್ನ ಅತಿಯಾದ ಬಳಕೆ ವಿದ್ಯಾರ್ಥಿಗಳ ಏಕಾಗ್ರತೆ, ಸಮಯ ನಿರ್ವಹಣೆ ಹಾಗೂ ಅಧ್ಯಯನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಆದ್ದರಿಂದ ಮೊಬೈಲ್ ಬಳಕೆಗೆ ಮಿತಿ ಹಾಕಿಕೊಂಡು, ಅದನ್ನು ಶಿಕ್ಷಣ, ಜ್ಞಾನಾರ್ಜನೆ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಬಳಸಬೇಕು ಎಂದು ಸಲಹೆ ನೀಡಿದರು.  

ವಿದ್ಯಾರ್ಥಿಗಳಾದ ಜಯಶಿವರಾಯ್ ಬಿ. ಹಾಗೂ ಸಾಕ್ಷಿ ಕಿತ್ತೂರ್ಕರ್ ತಮ್ಮ ಅನುಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪ್ರೊ. ಜಸ್ಮಿತ್ ಚರಂತಿಮಠ, ಡಾ. ವಿರೂಪಾಕ್ಷ ಬಿ. ದಲಾಲ್, ಡಾ. ಪ್ರಕಾಶ್ ಸೋನವಾಳ್ಕರ್, ಕರ್ನಲ್ ಜಾನಿ, ಪ್ರೊ. ಜಿ.ಎಸ್‌. ಪಾಟೀಲ, ಪ್ರೊ. ಪ್ರಿಯದರ್ಶಿನಿ ಉದಪುಡಿ ಸೇರಿದಂತೆ ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.