ನಗರದಲ್ಲಿ ಸಂಚಾರಿ ಗಣೇಶ ಮೂರ್ತಿ ವಿಸರ್ಜನಾ ವಾಹನ ವ್ಯವಸ್ಥೆ
Mobile Ganesh idol immersion vehicle system in the city
ನಗರದಲ್ಲಿ ಸಂಚಾರಿ ಗಣೇಶ ಮೂರ್ತಿ ವಿಸರ್ಜನಾ ವಾಹನ ವ್ಯವಸ್ಥೆ
ಹಾವೇರಿ 29 : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸಾರ್ವಜನಿಕ ಹಿತದೃಷ್ಟಿ ಹಾಗೂ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಗಣೇಶನ ಮೂರ್ತಿಗಳನ್ನು ಪಟ್ಟಣದ ಹತ್ತಿರವಿರುವ ಕೊಳ, ಕೆರೆ, ಬಾವಿ ಮತ್ತು ನದಿ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಯಂತ್ರಿಸಲು ತಾತ್ಕಾಲಿಕವಾಗಿ “ಸಂಚಾರಿ ಗಣೇಶ ಮೂರ್ತಿ ವಿಸರ್ಜನಾ ವಾಹನವನ್ನು” ಹಾವೇರಿ ನಗರದ ಆಯ್ದ ಪ್ರದೇಶಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕರಾಮಾನಿಂ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್ ಅವರು ತಿಳಿಸಿದ್ದಾರೆ.
ಗಣೇಶನ ಮೂರ್ತಿಗಳನ್ನು ವಿವಿಧ ಜಲಮೂಲಗಳಲ್ಲಿ ವಿಸರ್ಜಿಸಿ ಅಲ್ಲಿನ ಪರಿಸರ ಹಾಗೂ ಜಲಮೂಲಗಳನ್ನು ಕಲುಷಿತಗೊಳ್ಳುವುದನ್ನು ನಿಯಂತ್ರಿಸಲು “ಸಂಚಾರಿ ಗಣೇಶ ಮೂರ್ತಿ ವಿಸರ್ಜನಾ ವಾಹನ”ದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಗಣೇಶನ ಮೂರ್ತಿಗಳನ್ನು ಮಂಡಳಿಯು ಆಯೋಜಿಸಿದ ಸಂಚಾರಿ ವಾಹನದ ಉಪಯೋಗವನ್ನು ಪಡೆದು ಅದರಲ್ಲಿಯೇ ಗಣೇಶನ ಮೂರ್ತಿಗಳನ್ನು ವಿಸರ್ಜಿಸಿ ಪರಿಸರ ಮಾಲಿನ್ಯ ತಡೆಗಟ್ಟಲು ಸಹಕರಿಸಲು ಮನವಿ ಮಾಡಿಕೊಂಡಿದ್ದಾರೆ.
ಸಂಚಾರಿ ಗಣೇಶ ಮೂರ್ತಿ ವಿಸರ್ಜನಾ ವಾಹನದ ಮಾರ್ಗದ ವಿವರ: ಪಿ. ಡಬ್ಲ್ಯೂ. ಡಿ. ಕ್ವಾರ್ಟರ್ಸ್ಸ (ಎಮ್. ಜಿ. ಬ್ಯಾಂಕ್ ಹತ್ತಿರ) ದಿ. 31-08-2025ರ ಸಾಯಂಕಾಲ 6.00 ರಿಂದ 8.30 ರ ರವರೆಗೆ. ಹಾಗೂ ಪುರದ ಓಣಿ ಮತ್ತು ಏಲಕ್ಕಿ ಓಣಿ (ಜೈನ ದೇವಸ್ಥಾನದ ಹತ್ತಿರ) ರಾತ್ರಿ 8.45 ರಿಂದ 10.00ರ ವರೆಗೆ ವ್ಯವಸ್ಥೆ ಮಾಡಲಾಗಿದೆ.
ವಿಶೇಷ ಆಧಾರ್ ಸಿಡಿಂಗ್ ಅಭಿಯಾನ
ಹಾವೇರಿ 29 : ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರೋತ್ಸಾಹ ಧನವನ್ನು ಸಮಯಕ್ಕೆ ಸರಿಯಾಗಿ ವಿತರಣೆಯಾಗಲು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ(ಎಸ್.ಎಸ್.ಪಿ) ಮೂಲಕ ಅನುಷ್ಠಾನಗೊಳಿಸಲು ಹಾಗೂ ಆಧಾರ ಸೀಡಿಂಗ್ ಆಗದೇ ಇರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಮಸ್ಯೆ ಪರಿಹರಿಸಿಕೊಳ್ಳಲು ಆಗಸ್ಟ್ 25 ರಿಂದ ಸೆಪ್ಟೆಂಬರ್ 7ರವರೆಗೆ ವಿಶೇಷ ಆಧಾರ್ ಸೀಡಿಂಗ್ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾವೇರಿ, ರಾಣೇಬೆನ್ನೂರ, ಬ್ಯಾಡಗಿ, ಸವಣೂರ, ಹಿರೇಕೆರೂರ, ಹಾನಗಲ್ಲ ಮತ್ತು ಶಿಗ್ಗಾಂವ್ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು. ಎಲ್ಲಾ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವಿಶೇಷ ಆಧಾರ್ ಸೀಡಿಂಗ್ ಅಭಿಯಾನದ ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೀಕ್ಷಾ ಭೂಮಿ ಯಾತ್ರೆಗೆ ಅರ್ಜಿ ಆಹ್ವಾನ
ಹಾವೇರಿ 29 : ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾ ಭೂಮಿಯಲ್ಲಿ ಅಕ್ಟೋಬರ್ 2 ರಂದು ಜರುಗುವ ಪ್ರವರ್ತನಾ ದಿನಕ್ಕೆ(ವಿಜಯದಶಮಿ ದಿನದಂದು) ದಿಕ್ಷಾ ಭೂಮಿಗೆ ಅರ್ಹ ಯಾತ್ರಾರ್ತಿಗಳನ್ನು ಆಯ್ಕೆ ಮಾಡಿ ಕೆ.ಎಸ್.ಆರ್.ಟಿ.ಸಿ. ಬಸ್‌ಗಳ ಮೂಲಕ ಕಳುಹಿಸಲು ಡಾ.ಬಿ.ಆರ್.ಅಂಬೇಡ್ಕರ ಅನುಯಾಯಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಯಾತ್ರಾರ್ಥಿಗಳು ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಹೊಂದಿರಬೇಕು ಹಾಗೂ 18 ವರ್ಷ ಮೆಲ್ಪಟ್ಟವರಾಗಿರಬೇಕು. ಎಸ್.ಸಿ. ಮತ್ತು ಎಸ್.ಟಿ. ಸಮುದಾಯಕ್ಕೆ ಸೇರಿದವರಾಗಿರಬೇಕು. ಇತರೆ ಸಮುದಾಯದ ಜನರು ಬಿ.ಆರ್.ಅಂಬೇಡ್ಕರ್ ಅನುಯಾಯಿಗಳು ಸಹ ಯಾತ್ರೆ ಕೈಗೊಳ್ಳಬಹುದು.
ರಾಜ್ಯದ ಆಯಾ ಜಿಲ್ಲೆಗಳಿಂದಲೇ ನಾಗಪುರಕ್ಕೆ ಹೋಗಿ ಬರಲು ತಗಲುವ ಪ್ರಯಾಣದ ವೆಚ್ಚವನ್ನು ಮಾತ್ರ ಸರ್ಕಾರದಿಂದ ಭರಿಸಲಾಗುವುದು, ವಸತಿ ಮತ್ತು ಭೋಜನಾ ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸಬೇಕು. ಜಿಲ್ಲಾ ಮಟ್ಟದಲ್ಲಿ ಅರ್ಹ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಈಗಾಗಲೇ ಸರ್ಕಾರದ ವೆಚ್ಚದಲ್ಲಿ ಒಮ್ಮೆ ನಾಗಪುರದ ದೀಕ್ಷಾ ಭೂಮಿಗೆ ಪ್ರವಾಸ ಮಾಡಿದವರು ಎರಡನೇ ಬಾರಿ ಈ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ ಹಾಗೂ ಸರ್ಕಾರಿ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ಸೇವೆಯಲ್ಲಿರುವವರು ಅರ್ಹರಲ್ಲ. ಒಂದು ಕುಟುಂಬದಲ್ಲಿ ಇಬ್ಬರು ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದು, ಅರ್ಜಿದಾರರು ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಪ್ರತಿಗಳನ್ನು ಆನ್‌ಲೈನ್ ಅರ್ಜಿಯಲ್ಲಿ ಅಪ್‌ಲೋಡ್ ಮಾಡಬೇಕು.
ಆಸಕ್ತರು ದಿನಾಂಕ 09-09-20255ಳಗಾಗಿ ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಣಣಠಿ:/ತಿಜಡಿತಛಿ.ಞಚಿಡಿಟಿಚಿಣಚಿಞಚಿ.ರಠ.ಟಿ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಅರ್ಜಿ ನಮೂನೆ ಹಾಗೂ ಅವಶ್ಯಕ ದಾಖಲಾತಿಗಳನ್ನು ತಾಲೂಕುಗಳ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ಹಾವೇರಿ ವಿಳಾಸಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಣಣಠಿ:/ತಿಜಡಿತಛಿ.ಞಚಿಡಿಟಿಚಿಣಚಿಞಚಿ.ರಠ.ಟಿ ಅಥವಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ದೂ.08375-249292 ಅಥವಾ ಸಂಬಂಧಿಸಿದ ತಾಲೂಕುಗಳ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಅವರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಝಡ್.ಇ.ಡಿ.,ಲೀನ್ ಯೋಜನೆ ಹಾಗೂ ರಫ್ತು ಕುರಿತು ಒಂದು ದಿನ ಅರಿವು ಕಾರ್ಯಕ್ರಮ
ಹಾವೇರಿ 29 : ಭಾರತವು ಕೃಷಿ ಪ್ರದಾನ ರಾಷ್ಟ್ರವಾಗಿದೆ, ಕೃಷಿಯು ರೈತರ ಬೆನ್ನೆಲುಬಾಗಿದ್ದು ಅತೀ ಹೆಚ್ಚು ಕೃಷಿಯನ್ನೇ ಅವಲಂಬಿಸಿದ್ದೇವೆ ಕೃಷಿಯ ಜೊತೆಗೆ ಕೈಗಾರಿಕೆಗೂ ಮಹತ್ವ ನೀಡುವುದು ಇಂದಿನ ದಿನಮಾನದಲ್ಲಿ ಅತೀ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಹೇಳಿದರು.
ನಗರದ ಹೋಟೆಲ್ ಶಿವಾ ರೆಸಿಡೆನ್ಸಿಯಲ್ಲಿ ಶುಕ್ರವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾವೇರಿ ಹಾಗೂ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇವರ ಸಹಯೋಗದಲ್ಲಿ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು" (ಖಂಒಕ) ಯೋಜನೆಯಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಝಡ್.ಇ.ಡಿ./ಲೀನ್ ಯೋಜನೆ ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಚೀನಾ ರಾಷ್ಟ್ರವು ಎಂಎಸ್‌ಎಂಇ ಸೆಕ್ಟರನಲ್ಲಿ ಅತೀ ಹೆಚ್ಚು ಸಾಧನೆ ಮಾಡಿದೆ 6.5 ಕೋಟಿ ಎಂಎಸ್‌ಎಂಇ ಹೊಂದಿದ್ದಾರೆ ಹಾಗೆಯೇ ನಮ್ಮ ದೇಶದಲ್ಲೂ ಎಂಎಸ್‌ಎಂಇ ಗಳಿಗೆ ಹೆಚ್ಚು ಮಹತ್ವ ನೀಡಬೇಕು. ಭಾರತದಲ್ಲಿ ಇಂದು13 ಲಕ್ಷ ಎಂಎಸ್‌ಎಂಇ ಗಳು ನೋಂದಣಿಯಾಗಿವೆ, ಹಾವೇರಿ ಜಿಲ್ಲೆಯಿಂದ 8 ಸಾವಿರ ಎಂಎಸ್‌ಎಂಇಗಳು ನೋಂದಣಿಯಾಗಿವೆ. ದೇಶದಲ್ಲಿ 600 ಕ್ಕಿಂತಲೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಾರೆ ಎಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ಓಷದಿ ಉಪಕರಣಗಳವರೆಗೆ ವಸ್ತುಗಳು ಇಂದು ದೇಶಿಯವಾಗಿ ಉತ್ಪಾದನೆಯಾಗುತ್ತಿವೆ ಇಂತಹ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡಬೇಕು. ಯಾವ ದೇಶಗಳಲ್ಲಿ ಮಾರಾಟಕ್ಕೆ ಅವಕಾಶಗಳಿವೆ, ರಿಯಾಯಿತಿಗಳು ಏನು, ಉತ್ಪನ್ನಗಳ ಕೋಡ್, ಗುಣಮಟ್ಟದ ಪ್ಯಾಕಿಂಗ್ ವಿಧಾನ, ಪರವಾನಗಿ ಇವೆಲ್ಲವುಗಳ ಅರಿವನ್ನು ಎಂಎಸ್‌ಎಂಇ ಗಳು ಉದ್ಯಮಿಗಳಿಗೆ ಮೂಡಿಸಲು ನೇರವಾಗಿವೆ ಎಂದರು.
ಎಂಎಸ್‌ಎಂಇ ಗಳಿಂದ ಇಂದು ದೇಶದಲ್ಲಿ ಸಾಕಷ್ಟು ಅವಕಾಶಗಳಿದ್ದು ಇಲ್ಲಿ ಜನರು ಉದ್ಯೋಗವಕಾಶಗಳನ್ನು ಹೆಚ್ಚಿಗೆ ಪಡೆದುಕೊಳ್ಳಬಹುದು ಬೃಹತ್ ಉದ್ಯಮಗಳಲ್ಲಿ ನಾವುಗಳು ಅಷ್ಟಾಗಿ ಉದ್ಯೋಗಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಇಂತಹ ಉದ್ಯಮಗಳಲ್ಲಿ ಆಟೋ ಮಷೀನ್ ಬಳಕೆ ಹೆಚ್ಚಿಗೆ ಇರುವುದರಿಂದ ಮಾನವ ಸಂಪನ್ಮೂಲಗಳ ಬಳಕೆ ತುಂಬಾನೇ ಕಡಿಮೆ ಇರುತ್ತದೆ ಹೀಗಾಗಿ ಹೆಚ್ಚು ಹೆಚ್ಚು ಎಂಎಸ್‌ಎಂಇ ಗಳನ್ನು ಸ್ಥಾಪಿಸಿಕೊಳ್ಳುವುದರ ಮೂಲಕ ಕೈಗಾರಿಕಾ ವಲಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷರಾದ ರವಿ ಮೇನಸಿನಕಾಯಿ ಮಾತನಾಡಿ, ಲೀನ್ ಯೋಜನೆಗಳು ಕೈಗಾರಿಕೋದ್ಯಮ ಹಾಗೂ ಇತರೆ ವ್ಯಾಪಾರಿಗಳಿಗೆ ಸಹಕಾರಿಯಾಗಿದೆ. ಜಿಲ್ಲೆಯ ಉದ್ಯಮಿಗಳು ಇದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಶೋಕ ಪ್ಯಾಟಿ ಮಾತನಾಡಿ, ಲೀನ್ ಯೋಜನೆಗಳು ಕೈಗಾರಿಕೆ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಲೀನ್ ಹೆಚ್ಚು ಅನುಕೂಲವಾಗಿದೆ ಎಂದರು.
ಬಳಿಕ ಧಾರವಾಡ ವಿ ಟಿ ಪಿ ಸಿ ಉಪ ನಿರ್ದೇಶಕರಾದ ಟಿ ಎಸ್ ಮಲ್ಲಿಕಾರ್ಜುನ ಮಾತನಾಡಿ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರವು ಕರ್ನಾಟಕ ಸರ್ಕಾರದ ಅಂಗ ಸಂಸ್ಥೆಯಾಗಿದೆ ಇದು ಕರ್ನಾಟಕದಲ್ಲಿ ರಫ್ತು ಉತ್ತೇಜನಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತದೆ ಇಡೀ ಭರದಲ್ಲಿಯೇ ಕರ್ನಾಟಕವು ಐ ಟಿ ಮತ್ತು ಸರ್ವಿಸ್ ರಫ್ತುವಿನಲ್ಲಿ ಪ್ರಥಮ ಸ್ಥಾನದಲ್ಲಿದೆ. ದೇಶದ ಒಟ್ಟು ರಫ್ತುವಿನಲ್ಲಿ ಕರ್ನಾಟಕವು ಪ್ರತಿಶತ 40ಅ ರಷ್ಟು ಐ ಟಿ ಮತ್ತು ಸರ್ವಿಸ್ ಗಳನ್ನು ರಫ್ತು ಮಾಡುತ್ತದೆ. ಇನ್ನೂ ವಸ್ತುಗಳ ರಫ್ತುವಿನಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ 4 ನೇ ಸ್ಥಾನದಲ್ಲಿದೆ. ರಾಜ್ಯದ 31 ಜಿಲ್ಲೆಗಳಿಂದಲೂ ವಿವಿಧ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. 2024-25 ನೇ ಸಾಲಿನಲ್ಲಿ ಹಾವೇರಿ ಜಿಲ್ಲೆಯಿಂದ ರೂ. 570 ಕೋಟಿ ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ ಜಿಲ್ಲೆಯಿಂದ ಮುಖ್ಯವಾಗಿ ಚಿಲ್ಲಿ ಪೌಡರ್, ತರಕಾರಿ ಮುಂತಾದ ಪದಾರ್ಥಗಳನ್ನು ರಫ್ತು ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಗ್ರಣೀಯ ವ್ಯವಸ್ಥಾಪಕರು ಪ್ರಭುದೇವ ಎಸ್. ಜಿ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಕ ಏನ್ ಭಾಸ್ಕರ್, ಜಂಟಿ ಕಾರ್ಯದರ್ಶಿ ಕೇಶವ ಮೂರ್ತಿ, ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್ ಬಿರಾದಾರ, ಕಾಸಿಯ ಪ್ಯಾನೆಲ್ ಅಧ್ಯಕ್ಷರಾದ ಗೀರೀಶ್ ಎಫ್ ನಲವಡಿ, ಸಿ ಹೆಚ್ ಅಂಗಡಿ ಹಾಗೂ ಇತರರು ಉಪಸ್ಥಿತರಿದ್ದರು.
ಕೆಲಸದ ಸ್ಥಳಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಕಡ್ಡಾಯ
ಹಾವೇರಿ 29 : ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಸಂಸ್ಥೆಗಳು, ಉದ್ದಿಮೆಗಳು, ಕಾರ್ಖಾನೆಗಳು ಪ್ರತಿ ಸಂಸ್ಥೆಯ ಮಾಲೀಕರು ತಮ್ಮ ಸಂಸ್ಥೆಯಲ್ಲಿ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ ಮತ್ತು ನಿವಾರಿಸುವಿಕೆ) ಅಧಿನಿಯಮ-2013 ವನ್ನು ಅನುಷ್ಠಾನಗೊಳಿಸಿ ಸೆಕ್ಷೆನ್-4 ರನ್ವಯ “ಆಂತರಿಕ ದೂರು ಸಮಿತಿ” ರಚನೆ ಮಾಡಬೇಕು ಎಂದು ಜಿಲ್ಲಾಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ವೊಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನದಂತೆ 10 ಅಥವಾ 10ಕ್ಕಿಂತ ಹೆಚ್ಚು ಮಹಿಳಾ ಕಾರ್ಮಿಕರನ್ನು ಹೊಂದಿರುವ ಎಲ್ಲಾ ವಾಣಿಜ್ಯ ಸಂಸ್ಥೆಗಳು, ಉದ್ದಿಮೆಗಳು, ಕಾರ್ಖಾನೆಗಳು ಪ್ರತಿ ಸಂಸ್ಥೆಯ ಮಾಲೀಕರು ತಮ್ಮ ಸಂಸ್ಥೆಯಲ್ಲಿ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ ಮತ್ತು ನಿವಾರಿಸುವಿಕೆ) ಅಧಿನಯಮ-2013 ಕಡ್ಡಾಯವಾಗಿ ಅನುಷ್ಠಾನಗೊಳಿಸಿ ಕೆಲಸ ಮಾಡುವ ಸ್ಥಳದಲ್ಲಿ ಸೆಕ್ಷೆನ್-4 ರನ್ವಯ “ಆಂತರಿಕದೂರು ಸಮಿತಿ” ರಚನೆ ಮಾಡುವುದು ಕಡ್ಡಾಯವಾಗಿದೆ.
ಈಗಾಗಲೇ ಆಂತರಿಕ ದೂರು ಸಮಿತಿ ರಚಿಸಿದ ಸಂಸ್ಥೆಯವರು ಹಾಗೂ ಮುಂದೆ “ಆಂತರಿಕ ದೂರು ಸಮಿತಿ” ರಚಿಸುವ ಸಂಸ್ಥೆಯವರು ಸಮಿತಿ ರಚನೆ ಮಾಡಿದ ಆದೇಶದ ಪ್ರತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಗೆ ಹಾಗೂ ಕಾರ್ಮಿಕ ಅಧಿಕಾರಿಗಳ ಕಚೇರಿ ರೂಮ್ ನಂ-28, ‘ಬಿ’ ಬ್ಲಾಕ್, 3ನೇ ಮಹಡಿ ಜಿಲ್ಲಾಡಳಿತ ಭವನ ದೇವಗಿರಿ-ಹಾವೇರಿ ಈ ವಿಳಾಸಕ್ಕೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 