ಸಚಿವ ಸತೀಶ ಜಾರಕಿಹೊಳಿ ಕಾಗವಾಡ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಿದ್ದಾರೆ: ಶಾಸಕ ಕಾಗೆ

ಸಚಿವ ಸತೀಶ ಜಾರಕಿಹೊಳಿ ಕಾಗವಾಡ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಿದ್ದಾರೆ: ಶಾಸಕ ಕಾಗೆ Minister Satish Jarkiholi has provided special support for the development of Kagawad constituency:

ಸಚಿವ ಸತೀಶ ಜಾರಕಿಹೊಳಿ ಕಾಗವಾಡ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಿದ್ದಾರೆ: ಶಾಸಕ ಕಾಗೆ 

          ಅಥಣಿ 29: ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಉಸ್ತೂವಾರಿ ಸಚಿವ ಸತೀಶ ಜಾರಕಿಹೊಳಿ ಕಾಗವಾಡ ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಸಿದ್ದಾರೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. ಅವರು ಶೇಡಬಾಳ ಪಟ್ಟಣದಲ್ಲಿ 4367 ಲಕ್ಷ ರೂ.ಅನುದಾನದಲ್ಲಿ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ಪೌರಾಡಳಿತ ಇಲಾಖೆ ಆಶ್ರಯದ  ಅಮೃತ 2.0 ಯೋಜನೆಯಡಿ ಮಂಜೂರಾದ  ಕೃಷ್ಣಾ ನದಿ ಮೂಲದಿಂದ ಕಾಗವಾಡ, ಶೇಡಬಾಳ, ಉಗಾರ ಖುರ್ದ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.          

       ಸಚಿವ ಸತೀಶ ಜಾರಕಿಹೊಳಿಯವರು ಈಗಾಗಲೇ ಕಾಗವಾಡ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನವನ್ನು ರಸ್ತೆ ಕಾಮಗಾರಿ ಯೋಜನೆಗಳಿಗೆ ಕೊಟ್ಟಿದ್ದು, ಈ ಎಲ್ಲ ಕಾಮಗಾರಿಗಳು ಮುಕ್ತಾಯ ಹಂತ ತಲುಪಿವೆ ಎಂದ ಅವರು ಕಾಗವಾಡ ಕ್ಷೇತ್ರದ ಸಮಸ್ಯೆಗಳ ಬಗೆಗೆ ಮತ್ತು ಇಲ್ಲಿಯ ಬೇಡಿಕೆಗಳ ಕುರಿತು  ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರು ತಮ್ಮ ತಂದೆ ಸಚಿವ ಸತೀಶ ಜಾರಕಿಹೊಳಿಯವರ ಗಮನಕ್ಕೆ ತಂದು ಇನ್ನಷ್ಟು ಅನುದಾನ ಮಂಜೂರು ಮಾಡಿಸಬೇಕು ಎಂದು ಸಂಸದರಲ್ಲಿ ಶಾಸಕ ರಾಜು ಕಾಗೆ ಮನವಿ ಮಾಡಿದರು.           ಶೇಡಬಾಳ ಪಟ್ಟಣ ಸೇರಿದಂತೆ ಕಾಗವಾಡ ಮತಕ್ಷೇತ್ರದಲ್ಲಿ ಎಲ್ಲ ಧರ್ಮ, ಜನ, ಜಾತಿ, ಮತ, ಪಂಥ ಎನ್ನದೆ ಎಲ್ಲರಿಗೂ ಸಮಾನವಾಗಿ ಜನಪರ ಹಾಗೂ ಅಭಿವೃದ್ಧಿ ಪರ ಕಾರ್ಯಗಳನ್ನು ಅನುಷ್ಠಾನಗೊಳಿಸಿರುವೆ ಎಂದ ಅವರು ಕ್ಷೇತ್ರದ ಜನರೂ ಕೂಡ ಯಾವುದೇ ಧರ್ಮ, ಜಾತಿ ಎಂದು ಭೇದ ಮಾಡದೇ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಜನ ಪ್ರತಿನಿಧಿಗಳಿಂದ ಯೋಜನೆಗಳನ್ನು ಅನುಷ್ಠಾನ ಗೊಳಿಸಿಕೊಳ್ಳಿ ಚುನಾವಣೆ ಬಂದಾಗ ರಾಜಕೀಯ ಮಾಡಿ ಉಳಿದ ದಿನ ರಾಜಕೀಯದಿಂದ ದೂರ ಉಳಿದು ಅಭಿವೃದ್ಧಿಗಾಗಿ ಶ್ರಮಿಸಿ  ಎಂದು ಮನವಿ ಮಾಡಿದರು.           ಅಮೃತ 2.0 ಯೋಜನೆಯಡಿ ಶೇಡಬಾಳ, ಕಾಗವಾಡ, ಉಗಾರ ಖುರ್ದ ಗ್ರಾಮಗಳಿಗೆ ಶುದ್ಧವಾದ ಕುಡಿಯುವ ನೀರು ಪೂರೈಕೆ  ಆಗುತ್ತದೆ ಈ ಯೋಜನೆಯ ಅನುಷ್ಠಾನಕ್ಕೆ ಈ ಎಲ್ಲ ಪಟ್ಟಣಗಳ ಸಾರ್ವಜನಿಕರು ಸಹಕಾರ ಮಾಡಬೇಕು ಎಂದು ಮನವಿ ಮಾಡಿದರು.  

       ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಕಾಗವಾಡ ಕ್ಷೇತ್ರದ ಜನರ ಕಾಳಜಿ ವಹಿಸುತ್ತಿರುವ ಶಾಸಕ ರಾಜು ಕಾಗೆ ಜನಪರ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಶಾಸಕರ ಕಾರ್ಯಗಳಿಗೆ ಸಂಸದಳಾಗಿ ನಾನು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.  ಶೇಡಬಾಳ ಗ್ರಾಮದ ಗ್ರಾಮಸ್ಥರು ಸಿಸಿ ಕ್ಯಾಮರಾಗಳನ್ನು  ಗ್ರಾಮದಲ್ಲಿ ಅಳವಡಿಸಲು ಅನುದಾನ ಕೇಳಿದ್ದು, ಈ ಕಾರ್ಯಕ್ಕೆ ಅನುದಾನ ಕೊಡುವುದಾಗಿ ಸಂಸದರು ಹೇಳಿದ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ  ಕಾಗವಾಡ ಕ್ಷೇತ್ರದ ಅಭಿವೃದ್ಧಿಗೆ ಕೊಡುವುದಾಗಿ ಹೇಳಿದರು. ಇದಕ್ಕೂ ಮೊದಲು ಶಾಸಕ ರಾಜು ಕಾಗೆ ಮುಸ್ಲಿಂ ಸಮಾಜದ ಸಮಯದಾಯ ಭವನ, ವಿಠ್ಠಲ್ ರುಕ್ಮಿಣಿ ದೇವಸ್ಥಾನ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದರು.      ಶೇಡಬಾಳ ಪಟ್ಟಣ ಪಂಚಾಯತ ಅಧ್ಯಕ್ಷ  ಉತ್ಕರ್ಷ ಪಾಟೀಲ, ಪಿ.ಎಸ್‌.ಐ ರಾಘವೇಂದ್ರ ಖೋತ,  ಕುಡಿಯುವ ನೀರು ಪೂರೈಕೆ, ಒಳ ಚರಂಡಿ ಮಂಡಳಿಯ ಆರ್‌.ಕೆ.ಉಮೇಶ, ಗುತ್ತಿಗೆದಾರ ಸಹ್ಯಾದ್ರಿ ಕನ್ಸಟ್ರಕ್ಷನ್ಸ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸತ್ಯಜಿತ ನಲವಡೆ,  ಕಾಂಗ್ರೆಸ್ ಮುಖಂಡರಾದ ವಿನೋದ ಬರಗಾಲೆ, ರಮೇಶ ಸಿಂದಗಿ, ಸಮುದಾಯ ಭವನ ಗುತ್ತಿಗೆದಾರ ಜ್ಯೋತಿಬಾ ಚವ್ಹಾಣ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.