ನಾಗನೂರು ರುದ್ರಾಕ್ಷಿ ಮಠದ ಯುವ ವಿಜ್ಞಾನಿ ಕೇಂದ್ರಕ್ಕೆ ಸಚಿವ ಎಂ ಬಿ ಪಾಟೀಲ ಚಾಲನೆ

ನಾಗನೂರು ರುದ್ರಾಕ್ಷಿ ಮಠದ ಯುವ ವಿಜ್ಞಾನಿ ಕೇಂದ್ರಕ್ಕೆ ಸಚಿವ ಎಂ ಬಿ ಪಾಟೀಲ ಚಾಲನೆ Minister M B Patil inaugurates the Young Scientist Center at Naganur Rudrakshi Mutt

 ಬೆಳಗಾವಿ, 08 : ಇಲ್ಲಿನ ನಾಗನೂರು ರುದ್ರಾಕ್ಷಿ ಮಠದ ವತಿಯಿಂದ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಹಾಗೂ ತರಬೇತಿ ನೀಡುವ ಉದ್ದೇಶದಿಂದ ನಿರ್ಮಿಸಿರುವ ‘ಸ್ಟೆಮ್‌-ಎಚ್‌’ (ಖಖಿಇಂಒ-ಊ) ಯುವವಿಜ್ಞಾನಿ ಕೇಂದ್ರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸೋಮವಾರ ಉದ್ಘಾಟಿಸಿದರು.  ಮಠದ ಲಿಂಗೈಕ್ಯ ಡಾ.ಶಿವಬಸವ ಮಹಾಸ್ವಾಮಿಗಳ 136ನೇ ಜಯಂತಿ ಮಹೋತ್ಸವದಲ್ಲಿ ಅವರು ಪಾಲ್ಗೊಂಡಿದ್ದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಳಗಾವಿ ಭಾಗದಲ್ಲಿ ನಾಗನೂರು ರುದ್ರಾಕ್ಷಿ ಮಠಕ್ಕೆ ಭವ್ಯ ಪರಂಪರೆ ಇದೆ. ಬೆಳಗಾವಿ ರೈಲ್ವೇ ನಿಲ್ದಾಣಕ್ಕೆ ಶಿವಬಸವ ಶ್ರೀಗಳ ಹೆಸರು ಇಡಲು ಕೇಂದ್ರಕ್ಕೆ ಶಿಪ್ಪಾರಸ್ಸು ಮಾಡಲಾಗಿದೆ. ಕೇಂದ್ರದಿಂದ ಆದಷ್ಟು ಬೇಗ ಅಧಿಕೃತವಾಗಿ ಬೆಳಗಾವಿ ರೈಲು ನಿಲ್ದಾಣಕ್ಕೆವ ಶ್ರೀಗಳ ಹೆಸರು ಘೋಷಣೆ ಆಗಲಿದೆ, ದಾಸೋಹ ತತ್ತ್ವದಲ್ಲಿ ನಂಬಿಕೆ ಇಟ್ಟಿರುವ ಮಠವು ಈಗ ಆಧುನಿಕ ಜ್ಞಾನಶಾಖೆಗಳ ಕಡೆಗೆ ಗಮನ ಹರಿಸಿರುವುದು ಸ್ವಾಗತಾರ್ಹವಾಗಿದೆ. ನಮ್ಮ ಯುವಜನರು ಇಂತಹ ಧಾರೆಗಳಿಗೆ ತೆರೆದುಕೊಳ್ಳುವುದು ಅಗತ್ಯವಾಗಿದೆ. ಇದಕ್ಕೆ ನಾಗನೂರು ರುದ್ರಾಕ್ಷಿ ಮಠವು ಮುಂದಾಗಿ, ಈ ಕೇಂದ್ರವನ್ನು ಆರಂಭಿಸಿರುವುದು ಹೊಸ ಅಧ್ಯಾಯವಾಗಿದೆ’ ಎಂದಿದ್ದಾರೆ.  

ಯುವ ವಿಜ್ಞಾನಿಗಳ ಕೇಂದ್ರದಲ್ಲಿ ಮೂಲವಿಜ್ಞಾನ, ರೋಬೋಟಿಕ್ಸ್‌, ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ ತಂತ್ರಜ್ಞಾನ, 3ಡಿ ಪ್ರಿಂಟಿಂಗ್ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆ ಮತ್ತು ತರಬೇತಿಗೆ ಅವಕಾಶವಿರುವುದು ಒಳ್ಳೆಯ ಉಪಕ್ರಮವಾಗಿದೆ. ಇಂತಹ ಕೇಂದ್ರಗಳು ರಾಜ್ಯದ ಪ್ರತೀ ಜಿಲ್ಲೆಗಳಲ್ಲೂ ಆರಂಭವಾಗಬೇಕಾದ ಅಗತ್ಯವಿದೆ. ಶ್ರೀಮಠದ ಈ ಕೆಲಸವನ್ನು ಮೇಲ್ಪಂಕ್ತಿಯಾಗಿ ಸ್ವೀಕರಿಸಬೇಕು ಎಂದು ಅವರು ನುಡಿದಿದ್ದಾರೆ.  

ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ, ಅನ್ನ ನೀಡುವ ಶ್ರೇಷ್ಠ ಕಾರ್ಯ ಮಾಡಿದೆ. ದಾಸೋಹ ಬಹಳ ಮಠದಲ್ಲಿ ಆಗುತ್ತಿತ್ತು, ಆದರೆ ದಾಸೋಹದ ಜೊತೆ ವಿದ್ಯಾರ್ಥಿ ನಿಲಯ ಆರಂಭಿಸಿದ್ದು, ಶಿವಬಸವ ಶ್ರೀಗಳು, ಇದರ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲ ನೀಡಿದ್ದು ನಾಗನೂರು ಮಠ. ಗಡಿಯಲ್ಲಿ ಕನ್ನಡ ಉಳಿದಿದೆ ಎಂದರೆ ಅಕದಕ್ಕೆ ನಾಗನೂರು ಮಠ ಕಾರಣ. ಕರ್ನಾಟಕ ಏಕೀಕರಣಕ್ಕೆ ದೊಡ್ಡ ಕೊಡುಗೆ ನೀಡಿದ್ದು ನಾಗನೂರು ಮಠ. ವಚನ ಸಾಹಿತ್ಯ, ಬಸವ ಸಾಹಿತ್ಯ ಉಳಿದ್ದು ಪ.ಗೂ ಹಳಕಟ್ಟಿ ಅವರಿಂದ  ಎಂದು ಇದೇ ವೇಳೆ ಪಗೂ ಹಳಕಟ್ಟಿಯವರ ಸೇವೆ ನೆನೆದರು.  ನಾಗನೂರು ಮಠ ಮಾಡಿದ ನಾಡಿನ ಸೇವೆ ಗುರುತಿಸಿ ರಾಜ್ಯೋತ್ವವ ಪ್ರಶಸ್ತಿ ನೀಡಿಲಾಗಿದೆ. ಸರ್ಕಾರದಿಂದ ನೀಡುವ ಸಹಕಾರ ನೀಡಲು ಸಚಿವನಾಗಿ ನಾವು ಸಿದ್ದರಿದ್ದೇವೆ  ಎಂದು ಭರವಸೆ ನೀಡಿದರು.  

ಕಾರ್ಯಕ್ರಮದ ದಿವ್ಯ ಸಾನಿಧ್ಯದಲ್ಲಿ ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶ್ರೀಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಮಹಾಸ್ವಾಮಿ, ಧಾರವಾಡದ ಮುರುಘಾ ಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಬೆಟ್ಟದಪುರದ ಸಲೀಲಾಖ್ಯ ವಿರಕ್ತ ಮಠದ ಶ್ರೀ ಚೆನ್ನಬಸವ ದೇಶಿಕೇಂದ್ರ ಮಹಾಸ್ವಾಮಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಟಿಯು ಕುಲಸಚಿವ ಡಾ.ಪ್ರಸಾದ್ ರಾಮಪುರೆ, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಉದ್ಯಮಿ ಡಾ.ಬಸನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.