ರೋಗಿಗಳಿಗೆ ಹಾಲು, ಬ್ರೆಡ್, ಹಣ್ಣು ಸೀರೆ ವಿತರಣೆ
Milk, bread, fruits and sarees distributed to patients
ಕಂಪ್ಲಿ 24: ಸಮಾಜ ಸೇವೆಯೊಂದಿಗೆ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಯುವ ನಾಯಕ ವಿ.ವಿವೇಕ್‌ಗೌಡ ಅವರ ಜನ್ಮದಿನದ ಅಂಗವಾಗಿ ಅವರ ಸಮ್ಮುಖದಲ್ಲಿ ಅಭಿಮಾನಿ ಬಳಗದಿಂದ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ಶನಿವಾರ ವಿತರಿಸಿದರು. ನಂತರ ಯುವ ನಾಯಕ ವಾಸು ನಾಯಕ ಮಾತನಾಡಿ, ಚಿಕ್ಕ ವಯಸ್ಸಿನಿಂದಲೇ ಸಮಾಜ ಸೇವೆಯೊಂದಿಗೆ ಜನರ ಪ್ರೀತಿ, ವಿಶ್ವಾಸ ಗಳಿಸುವ ಜೊತೆಗೆ ಸಾಕಷ್ಟು ಮಹಿಳೆಯರಿಗೆ ಚಾರಿಟೇಬಲ್ ಟ್ರದ್ಟ್ ಮೂಲಕ ತರಬೇತಿ ನೀಡುವದೊಂದಿಗೆ ಸ್ವಯಂ ಉದ್ಯೋಗಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.
ಇಂತಹ ಇನ್ನಷ್ಟು ಸೇವೆಗಳ ಮೂಲಕ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದರು. ಈ ಸಂದ ಆಸ್ಪತ್ರೆಯ ಡಾ.ಹಾರಿಕಾ, ಯುವ ಮುಖಂಡರಾದ ಮುದ್ದಾಪುರ ಯಲ್ಲಪ್ಪ, ಮಂಜುನಾಥ್, ಜಡೇಶ, ಸುಂದರ, ಪ್ರವೀಣ, ದುರುಗೇಶ, ರಾಘವೇಂದ್ರ, ಮಂಜು, ತರುಣ್, ವಂಶಿ, ಉಮೇಶ್, ಹರ್ಷ, ಆಕಾಶ, ಮರಿಸ್ವಾಮಿ, ರಾಜ, ರಮೇಶ, ರಘು, ತಿಪ್ಪೇಸ್ವಾಮಿ, ರವಿ, ತಿಮಪ್ಪ, ನಾಗ ಸೇರಿದಂತೆ ಇತರರು ಇದ್ದರು. ನಂತರ ಇಲ್ಲಿನ 4ನೇ ವಾರ್ಡಿನಲ್ಲಿ ದೇವದಾಸಿ ಮಹಿಳೆಯರಿಗೆ ಸೀರೆ ವಿತರಿಸಿದರು.
ಪವಿತ್ರಾ ಚಾರಿಟೇಬಲ್ : ಪಟ್ಟಣದ ಎಂ.ಡಿ.ಕ್ಯಾಂಪಿನ ಶಿರಡಿ ಸಾಯಿಬಾಬ ದೇವಸ್ಥಾನ ಬಳಿಲ್ಲಿರುವ ಪವಿತ್ರ ಚಾರಿಟೇಬಲ್ ಟ್ರಸ್ಟ್ ಕೋಳೂರು ವತಿಯಿಂದ ಯುವ ನಾಯಕ ವಿ.ವಿವೇಕ್ ಗೌಡ ಅವರ ಜನ್ಮದಿನದ ಅಂಗವಾಗಿ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಜನ್ಮದಿನವನ್ನು ಶನಿಚಾರ ಆಚರಿಸಿದರು. ಜನ್ಮದಿನದ ನಿಮಿತ್ಯ ಮಹಿಳೆಯರಿಗೆ ಹತ್ತು ದಿನಗಳ ಕಾಲ ಉಚಿತವಾಗಿ ತರಬೇತಿ ನೀಡಿದರು. ಮತ್ತು ಉಚಿತವಾಗಿ ಸೀರೆ ಕುಚ್ ಅನ್ನು ನೀಡಿದರು. ಈ ಸಂದರ್ಭದಲ್ಲಿ ಟ್ರಸ್ಡ್ ಅಧ್ಯಕ್ಷೆ ವಿ.ಪವಿತ್ರಗೌಡ, ಉಪಾಧ್ಯಕ್ಷ ವಿ.ಶಿವನಗೌಡ ಸೇರಿದಂತೆ ಮಹಿಳಾ ಮಣಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 