ಪುರುಷರು ಹಾಗೂ ಮಹಿಳೆ ಕಾಣೆ
Men and women missing
ಹಾವೇರಿ 07 : ಶಿಗ್ಗಾಂವ ತಾಲೂಕು ಹಳೇಬಂಕಾಪೂರ ನಿವಾಸಿ 47 ವರ್ಷದ ಮಾಬೂಲಿ ಮರ್ದಾನಸಾಬ ಮುಲ್ಲಾನವರ 8 ಮಾರ್ಚ್2025, ಬಂಕಾಪುರದ 48 ವರ್ಷದ ಮಂಜುನಾಥ ಸಿದ್ದಪ್ಪ ಬಳಿಗಾರ 28 ಎಪ್ರಿಲ್ 2025 ರಂದು, ಮದ್ಯಪ್ರದೇಶ ರಾಜ್ಯ 30 ವರ್ಷದ ಅರ್ಜುನ ಭಗವಾನಸಿಂಗ್ 19 ಅಕ್ಟೋಬರ್ 2025 ರಂದು ಬಂಕಾಪೂರ ಟೋಲ್ ನಾಕಾದಿಂದ ಹಾಗೂ ಗುಡ್ಡದಚನ್ನಾಪೂರ ನಿವಾಸಿ 70 ವರ್ಷದ ಭರಮವ್ವ ಬಸಪ್ಪ ವಾಲಿಕಾರ 11 ಅಕ್ಟೋಬರ್ 2025 ರಂದು ಕಾಣೆಯಾಗಿರುವುದಾಗಿ ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕಾಣೆಯಾದ ಮಾಬೂಲಿ 5.6 ಅಡಿ ಎತ್ತರ, ದುಂಡು ಮುಖ, ದಪ್ಪಮೂಗು, ಗೋದಿಕೆಂಪು ಮೈಬಣ್ಣ ಹೊಂದಿದ್ದು, ಕನ್ನಡ, ಉರ್ದು ಹಾಗೂ ಹಿಂದಿ ಮಾತನಾಡುತ್ತಾನೆ. ಮಂಜುನಾಥ 5 ಅಡಿ ಎತ್ತರ, ಸಾಧಾರಣಮೈಕಟ್ಟು, ಗೋದಿಗೆಂಪು ಮೈಬಣ್ಣ, ನೀಟಾದ ಮೂಗು ಹೊಂದಿದ್ದು, ಕನ್ನಡ ಹಾಗೂ ಹಿಂದಿ ಮಾತನಾಡುತ್ತಾನೆ. ಅರ್ಜುನ್ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಸಾದಗಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಎದೆಯ ಮೇಲೆ ಹಿಂದಿಯಲ್ಲಿ ತೇರೆ ನಾಮ ಅಂತಾ ಟ್ಯಾಟೋ ಇರುತ್ತದೆ ಹಾಗೂ ಹಿಂದಿ ಮಾತನಾಡುತ್ತಾನೆ. ಭರಮವ್ವ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಸಾದಗಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಮಾಡುತ್ತಾಳೆ ಎಂದು ಬಂಕಾಪುರ ಪೊಲೀಸ್ ಠಾಣೆ ಆರಕ್ಷಕ ನೀರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 