ಸ್ಮರಣಾರ್ಥ ದತ್ತಿ ಕಾರ್ಯಕ್ರಮ
Memorial Endowment Program
ಧಾರವಾಡ 17: ಕಿತ್ತೂರ ನಾಡಿನ ಮೊದಲ ಇತಿಹಾಸ ಸಂಶೋಧಕರಾದ ದೊಡ್ಡಭಾವೆಪ್ಪ ಮೂಗಿ ಕಿತ್ತೂರಿನ ಇತಿಹಾಸದ ವಿಶ್ವಕೋಶದಂತಿದ್ದರು ಎಂದು ಯರಗಟ್ಟಿ ಸರಕಾರಿ ಪ್ರಥಮ ದರ್ಜೆಯ ಪ್ರಾಧ್ಯಾಪಕರಾದ ರಾಜಶೇಖರ ಬಿರಾದಾರ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ದೊಡ್ಡಭಾವೆಪ್ಪ ಮೂಗಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಹೃದಯವಂತ ಸಂಶೋಧಕ ದೊಡ್ಡಭಾವೆಪ್ಪ ಮೂಗಿ ವಿಷಯ ಕುರಿತು ಮಾತನಾಡಿದರು ದೊಡ್ಡಭಾವೆಪ್ಪ ಮೋದಿಯವರು ಬಾಲ್ಯದಿಂದಲೇ ಕಿತ್ತೂರ ಸಂಸ್ಥಾನದ ವೀರಗಾಥೆ ರಾಜರುಗಳ ಸ್ವಾಭಿಮಾನದ ಧೈರ್ಯದ ಕಥೆಗಳನ್ನು ಕೇಳುತ್ತಲೇ ಬೆಳೆದವರು. ಹೃದಯವಂತರಾದ ದೊಡ್ಡ ಭಾವೆಪ್ಪನವರು ಒಬ್ಬ ಸಂಶೋಧಕನಲ್ಲಿರಬಹುದಾದ ಚಿಕಿತ್ಸಕತೆ ಕುತೂಹಲ ಪ್ರವೃತ್ತಿ ಹೊಂದಿದವರಾಗಿದ್ದರು. ಕಿತ್ತೂರಿನ ಇತಿಹಾಸ ತಿಳಿಯಲು ತಲಸ್ಪರ್ಶ ಅಧ್ಯಯನ ಮಾಡಿದರು. ಹಳ್ಳಿ-ಹಳ್ಳಿಗಳಿಗೂ ಸಂಚರಿಸಿ ಕಾಗದಪತ್ರಗಳನ್ನು ಪೂರಕ ದಾಖಲೆಗಳನ್ನು ಸಂಗ್ರಹಿಸಿದರು. ಜನಪದರಿಂದ ಲಾವಣಿ, ಗೀಗೀ ಪದಗಳನ್ನು ಹಾಡಿಸಿ ದಾಖಲೆ ರೂಪದಲ್ಲಿ ಸಂಗ್ರಹಿಸಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನೀಡಿದರು. ಆದರೆ ಕಿತ್ತೂರಿನ ಇತಿಹಾಸದ ಸಮಗ್ರ ಸಾಹಿತ್ಯ ಇನ್ನೂ ಪ್ರಕಟವಾಗದೇ ಉಳಿದಿದ್ದು ವಿಪರ್ಯಾಸ.
ದೊಡ್ಡಭಾವೆಪ್ಪ ಮೂಗಿ ಒಬ್ಬ ಇತಿಹಾಸ ಸಂಶೋಧಕರು ಮಾತ್ರವಲ್ಲ. ಮಹಾನ್ ದೇಶಭಕ್ತರು ಗಾಂಧೀಜಿ ಹಾಗೂ ಸುಭಾಸಚಂದ್ರ ಭೋಸರಿಂದ ಸ್ಫೂರ್ತಿಗೊಂಡ ಅವರು ದೇಶದ ಏಕತೆ ಹಾಗೂ ಸಮಗ್ರತೆಯ ಚಿಂತನೆಗಳನ್ನು ಹೊಂದಿದ್ದರು. ಕಿತ್ತೂರಿಗೆ ಸಂಬಂಧಿಸಿದ ಅನೇಕ ಗ್ರಂಥಗಳನ್ನು ಪ್ರಕಟಿಸಿದ ಇವರು ಇತಿಹಾಸದ ಸಂಶೋಧಕನಾಗಿ ಉರ್ದು ಮರಾಠಿ ಭಾಷೆಗಳನ್ನು ಅಧ್ಯಯನ ಮಾಡಬೇಕಾಯಿತು. ಮೂಗಿಯವರು ಸುಸಂಸ್ಕೃತ ಸಂಸಾರವುಳ್ಳ ಶರಣ ಸಂಸ್ಕೃತಿಯ ಮನೆತನ ದಾನಧರ್ಮದ ಕಾರ್ಯಗಳಲ್ಲಿ ಸದಾ ಎತ್ತಿದ ಕೈ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಮಲ್ಲಿಕಾರ್ಜುನ ಪಾಟೀಲ , ಕಿತ್ತೂರ ಸಂಸ್ಥಾನ ಮಲ್ಲಸರ್ಜ ದೇಸಾಯಿ ಹಾಗೂ ಅಲ್ಲಪ್ಪಗೌಡ ದೇಸಾಯಿ ಅವರ ಆಡಳಿತದಲ್ಲಿ ವೈಭವಯುವಗಿತ್ತೆಂದು ಹೇಳಿ ಕಿತ್ತೂರಿನ ಆಂತರಿಕ ಆಡಳಿತ ವ್ಯವಸ್ಥೆಯ ಬಗ್ಗೆ ತಿಳಿಸಿದರು.
ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೈಲಹೊಂಗದ ಮೂಗಿಯವರ ಮನೆತನಕ್ಕೆ ತಮ್ಮದೇ ಆದ ಇತಿಹಾಸವಿದೆ. ನಾಡು ಕಟ್ಟಿದವರಲ್ಲಿ ಆ ಮನೆತನದ್ದು ಪಾತ್ರವಿದೆ. ದೊಡ್ಡಭಾವೆಪ್ಪನವರ ಜೀವನದ ಯಶೋಗಾಥೆ ನಮಗೆಲ್ಲಾ ಪ್ರೇರಣೆ ಎಂದು ಹೇಳಿದರು. ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಧ. ಹೊರಕೇರಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ ವಾಡಪ್ಪಿ, ಬಸವಪ್ರಭು ಹೊಸಕೇರಿ, ವೀರಣ್ಣ ಒಡ್ಡೀನ, ಸಿ.ಎಸ್. ಪಾಟೀಲ, ರಾಜೇಂದ್ರ ಸಾವಳಗಿ, ಬಿ.ಡಿ. ಪಾಟೀಲ, ಎಸ್.ಎಚ್. ಪಾಟೀಲ, ಎಂ.ಆರ್. ಮಾಮಲೇದೇಸಾಯಿ, ಶಂಕರಲಿಂಗ ಶಿವಳ್ಳಿ ಸೇರಿದಂತೆ ಮುಂತಾದವರಿದ್ದರು. ಪ್ರಾರಂಭದಲ್ಲಿ ಶಕುಂತಲಾ ಹಾದಿಮನಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಗುರುಬಸವ ಮಹಾಮನೆ, ಅಲ್ಲಮಪ್ರಭು ಕಡಕೋಳ, ಬಸವರಾಜ ಹೂಗಾರ ಸಂಗೀತಕ್ಕೆ ಸಾಥ್ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 