ವಿವಿಧ ಬಗೆಯ ವಿನ್ಯಾಸದ ಮೆಹೆಂದಿ ಪ್ರದರ್ಶನ
Mehendi exhibition of various designs
ಕಂಪ್ಲಿ 11: ನಾಡಿನ ಕಲೆ, ಸಂಸ್ಕೃತಿಯಲ್ಲಿ ಒಂದಾದ ಮೆಹೆಂದಿಯೂ ಶುಭದ ಸಂಕೇತವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಅವರ ಧರ್ಮಪತ್ನಿ ಶ್ರೀದೇವಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಬಿಎಸ್‌ವಿ ಶಾಲೆಯಲ್ಲಿ ಕಂಪ್ಲಿ ಉತ್ಸವದ ಹಿನ್ನಲೆ ಬುಧವಾರ ಹಮ್ಮಿಕೊಂಡಿದ್ದ ಮೆಹೆಂದಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಸೃಜನಸೀಲತೆ ಮತ್ತು ಸಾಂಪ್ರದಾಯ ಕೌಶಲ್ಯಗಳನ್ನು ಪ್ರದರ್ಶಿಸುವ ರೋಮಾಂಚನ ಕಾರ್ಯಕ್ರಮವಾಗಿದೆ. ಮಹಿಳೆಯರ ಕಲೆಗೆ ಇದೊಂದು ಮುಖ್ಯ ವೇದಿಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಡಿಪಿಒ ಪ್ರದೀಪ್, ಪುರಸಭೆಯ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಸಮುದಾಯ ಸಂಘಟನಾಧಿಕಾರಿ(ಕಂದಾಯ ನೀರೀಕ್ಷಕಿ) ಜಯಲಕ್ಷ್ಮೀ, ಅಂಗನವಾಡಿ ಮೇಲ್ವಿಚಾರಕಿ ಲತೀಫಾ ಬೇಗಂ,
ಇಲ್ಲಿನ ಮೆಹೆಂದಿ ಸ್ಪರ್ಧೆಯಲ್ಲಿ ನಾಡಿನ ವಿವಿಧ ಬಗೆಯ ವಿನ್ಯಾಸದ ಮೆಹೆಂದಿಯಲ್ಲಿ ಕಂಗೊಳಿಸುತ್ತಿರುವುದು ಕಂಡು ಬಂತು. ಇಲ್ಲಿನ ಮೆಹೆಂದಿ ಚಿತ್ತಾರಗಳು ನೋಡುಗರ ಆಕರ್ಷಣೆಗೆ ಪಾತ್ರವಾದವು.
ಇಲ್ಲಿನ ಸ್ಪರ್ಧೆಯಲ್ಲಿ ಬಿ.ಕೆ.ಸಲ್ಮಾನಾಜ್ ಪ್ರಥಮ ಸ್ಥಾನದೊಂದಿಗೆ ಬಹುಮಾನದೊಂದಿಗೆ ಪ್ರಶಸ್ತಿ ಪ್ರಮಾಣ ಪತ್ರ ಪಡೆದುಕೊಂಡರು. ಆಫ್ರೀನ್ ಇವರು ದ್ವೀತಿಯ ಸ್ಥಾನ ಹೊಂದಿದರು. ಕೌಸರ್(ಗೌಸಿಯಾ) ಇವರು ತೃತೀಯ ಸ್ಥಾನದೊಂದಿಗೆ ಪ್ರಶಸ್ತಿ ಪತ್ರ ಪಡೆದುಕೊಂಡರು. ಉಳಿದ ಸ್ಪರ್ಧಿಗಳಿಗೆ ಸಮಧಾನಕರ ಬಹುಮಾನ ನೀಡಲಾಯಿತು. ವಿದ್ಯಾರ್ಥಿನಿಯರು, ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 