ಕಾಂಗ್ರೇಸ್ ಅಧಿವೇಶನ ಕಾರ್ಯಕ್ರಮ ಕುರಿತು ಮುಖಂಡರ, ಕಾರ್ಯಕರ್ತರ ಸಭೆ
ಮುದ್ದೇಬಿಹಾಳ,18: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನದಿಂದ ಮೊಟಕುಗೊಂಡಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭ “ಗಾಂಧಿ ಭಾರತ’ ಕಾರ್ಯಕ್ರಮ ಇದೇ ಜ, 21 ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಅತ್ಯಂತ ಅದ್ದೂರಿಯಿಂದ ಅನಾವರಣಗೊಳ್ಳಲಿದೆ ಕಾರಣ ಮತಕ್ಷೇತ್ರದ ಎಲ್ಲ ಕಾರ್ಯಕರ್ತರು, ಪಕ್ಷದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವ ಮೂಲಕ ಯಶಸ್ವಿಗೆ ಸಹಕರಿಸಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಕರೆ ನೀಡಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ತಮ್ಮ ಗ್ರಹ ಕಚೇರಿಯಲ್ಲಿ ಜ, 21 ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ನಡೆಯುವ ಕಾಂಗ್ರೇಸ್ ಅಧಿವೇಶನ ಕಾರ್ಯಕ್ರಮ ಕುರಿತು ಕಾಂಗ್ರೇಸ್ ಪಕ್ಷದ ಮುಖಂಡರ, ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬೆಳಗಾವಿಯ ಗಲ್ಲಿ ಗಲ್ಲಿಗಳಲ್ಲಿ ಮಹಾತ್ಮಗಾಂಧಿ ಹೆಜ್ಜೆ ಗುರುತುಗಳನ್ನು ನೆನಪಿಸುವ ಸ್ವಾತಂತ್ರ್ಯ ಹೋರಾಟದ ಸನ್ನಿವೇಶವನ್ನು ಜನರಿಗೆ ಪರಿಚಯಿಸುವ ಉದ್ದೇಶ ಇದಾಗಿದೆ. ಮಾತ್ರವಲ್ಲದೇ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯಿಂದಾಗಿ ಸರಕಾರ ದೀವಾಳಿಯಾಗಿದೆ ಎಂಬ ವಿರೋಧ ಪಕ್ಷದವರು ಟೀಕಿಸುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಐದು ಬಹುಮುಖ್ಯ ಗ್ರಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಯಲ್ಲಿ ಯಾವೂದೇ ತೊಂದರೆಯಾಗಿಲ್ಲ. ಆದರೇ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಯಾವೂದೇ ಹಣಕಾಸು ಇಲಾಖೆಯ ಪರವಾನಿಗೆ ಇಲ್ಲದೇ ಬೇಕಾಬಿಟ್ಟಿ ಕಾಮಗಾರಿ ಹೆಸರಲ್ಲಿ ಗುತ್ತಿಗೆದಾರರ ಬಾಕಿ ಬಿಲ್ಲ್ ಗಳನ್ನು ಉಳಿಸಿಕೊಂಡಿದ್ದರಿಂದ ಕೊಂಚ ತೊಂದರೆಯಾಗಿದೆ ವಿನಃ ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳಿಂದಲ್ಲ ಇಂತಹ ಸುಳ್ಳು ಹೇಳಿಕೆ ಹೇಳುವ ಮೂಲಕ ಜನರಿಗೆ ತಪ್ಪು ದಾರಿ ತುಳಿಸುವಂತೆ ಮಾಡುವ ವಿರೋಧ ಪಕ್ಷದವರ ಟೀಕೆಗಳನ್ನು ಜನರು ಗಂಭ ಈರವಾಗಿ ಪರಿಗಣ ಇಸದೇ ಉತ್ತಮ ಜನಪರ ಆಡಳಿತ ನೀಡುತ್ತಿರುವ ನಮ್ಮ ಸರಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅರಿವೂ ಮೂಡಿಸುವಲ್ಲಿ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯಕರ್ತರು ಮುಂದಾಗಬೇಕು ಎಂದರು.
ಸಧ್ಯ ಬೆಳಗಾಂವಿ ಕಾಂಗ್ರೇಸ್ ಅಧಿವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ, ಕೇಂದ್ರದ ವಿರೋಧ ಪಕ್ಷದ ನಾಯಕ ರಾಹುಲ ಗಾಂಧಿ, ಮುಖ್ಯಮಂತ್ರಿ ಸಿದ್ರಾಮಯ್ಯನವರು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಸಚಿವರು, ಎಲ್ಲ ಮತಕ್ಷೇತ್ರದ ಕಾಂಗ್ರೇಸ್ ಶಾಸಕರು ಮುಖಂಡರು ಬಾಗವಹಿಸಲಿದ್ದಾರೆ ಕಾರಣ ಬೆಳಗಾಂವಿ ಅಧಿವೇಶನಕ್ಕೆ ತೆರಳಲು ಮತಕ್ಷೇತ್ರದಿಂದ ಸುಮಾರು 80ರಿಂದ 100 ವಾಹನಗಳ ವ್ಯವಸ್ಥೆ ಮಾಡಲಾಗಿದೆ ಈ ವೇಳೆ ಮಹಿಳೆಯರಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಕೈಗೊಳ್ಳಲಾಗಿದೆ.ಈ ವೇಳೆ ತಾಳಿಕೋಟಿ ಮತ್ತು ಮುದ್ದೇಬಿಹಾಳದಿಂದ ಒಟ್ಟು ಮತಕ್ಷೇತ್ರದಿಂದ ಒಂದು ಸಾವಿರಕ್ಕೂ ಹೆಚ್ಚು ಜನ ಬೆಳಗಾಂವಿಗೆ ತೆರಳಲು ಸಿದ್ದತೆ ಕೈಗೊಳ್ಳಲಾಗಿದೆ ಎಂದರು.
ಈ ವೇಳೆ ಅಪಝಲಪೂರ ಶಾಸಕ ಎಂ ಎ ಪಾಟೀಲ ಅವರು ಮಾತನಾಡಿ ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ)ಯವರು ಕಳೇದ ಮತಕ್ಷೇತ್ರದಿಂದ 6 ಬಾರಿ ಭರ್ಜರಿ ಗೆಲುವು ಸಾಧಿಸಿದ್ದಲ್ಲದೇ ಪಕ್ಷದ ಹಲವಾರು ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಸರಳ ಹಾಗೂ ಹಿರಿಯ ಅನುಭವಿ ರಾಜಕಾರಿಣಿಯಾಗಿದ್ದಾರೆ ಅವರ ಶಕ್ತಿ ಮತ್ತು ಪಕ್ಷದ ಸಂಘಟನೆ ಬಗ್ಗೆ ಹೆಚ್ಚೇನು ಹೇಳಲು ಸಾಧ್ಯವಿಲ್ಲ ಆದರೇ ವರಿಷ್ಠರು ನಮಗೆ ಉಸ್ತುವಾರಿಯಾಗಿ ಕಳುಹಿಸಿದ್ದರಿಂದ ನನ್ನ ಜವಾಬ್ದಾರಿಯುತ ಸ್ಥಾನ ತುಂಬಲ ಮಾತ್ರ ಬಂದಿದ್ದೇನೆ ಯಾವೂದೇ ವೈಮನಸ್ಸುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಪಕ್ಷದ ಶಕ್ತಿ ಬಲಪಡಿಸಲು ಕಾರ್ಯಕ್ರಮದಲ್ಲಿ ಎಲ್ಲರೂ ಬಾಗವಹಿಸುವ ಮೂಲಕ ಯಶಸ್ವಿಗೆ ಶ್ರಮೀಸೊಣ ಎಂದರು.
ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ತಾಲೂಕಾ ಸರಕಾರಿ ಗ್ಯಾರಂಟಿ ಯೋಜನೆಗಳ ಸಮೀತಿಯ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಮುಖಂಡರಾದ ಮತೀನ ಪಟೇಲ, ಸಿದ್ದಣ್ಣ ಮೇಟಿ, ಕಾಮರಾಜ ಬಿರಾದಾರ, ವಾಯ್ ಎಚ್ ವಿಜಯಕರ, ಲಕ್ಷ್ಮಣ ಚವ್ಹಾಣ, ಬಾಪುಗೌಡ ಪೀರಾಪೂರ, ರಾಜುಗೌಡ ರಾಯಗೊಂಡ, ತಿಪ್ಪಣ್ಣ ದೊಡಮನಿ, ಸಿ ಜಿ ವಿಜಯಕರ, ಸುರೇಶ ಪಾಟೀಲ,ಸ್ಥಾಯಿ ಸಮೀತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಸಂಗನಗೌಡ ಪಾಟೀಲ, ಗೋಪಿ ಪಡಿವಾಳರ, ಸೇರಿದಂತೆ ಹಲವರು ಇದ್ದರು,