ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಜಿಲ್ಲಾ ಮುಖಂಡರ ಹಾಗೂ ಕಾರ್ಯಕರ್ತರ ಸಭೆ

ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಜಿಲ್ಲಾ ಮುಖಂಡರ ಹಾಗೂ ಕಾರ್ಯಕರ್ತರ ಸಭೆ Meeting of district leaders and workers of All India Bahujan Samaj Party


        ಹಾವೇರಿ 11: ದೇಶದಲ್ಲಿ ಹಾಗೂ ರಾಜ್ಯದಲ್ಲಿ ಎಲ್ಲಾ ವರ್ಗದವರ ಪರವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷ ಕ್ರೀಯಾಶೀಲವಾಗುತ್ತಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಹಾವೇರಿ ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ ಹೇಳಿದರು.  ನಗರದ ಪ್ರವಾಸಿ ಮಂದಿರದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಜಿಲ್ಲಾ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. 

         ಬಡವರ ಧ್ವನಿಯಾಗಿ,ದೀನ ದಲಿತರ,ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡುವುದನ್ನು ಸರ್ಕಾರಗಳು ಮರೆಯುತ್ತಿವೆ.  ಭಾರತ ದೇಶದ ಸಂವಿಧಾನ ಕಟ್ಟುಕಡೆಯ ವ್ಯಕ್ತಿಗೂ ಸಮರ​‍್ಕವಾಗಿ ಬದುಕುವ ಹಾಗೂ ಸರ್ಕಾರಗಳ ಸೌಲಭ್ಯ ಒದಗಿಸಲು ಅವಕಾಶ ನೀಡಿದೆ. ಡಾ.ಬಿ ಆರ್ ಅಂಬೇಡ್ಕರ್ ಅವರ ಆಶಯಗಳ ಪಾಲನೆಯೊಂದಿಗೆ ದೇಶದ ಅಭಿವೃದ್ಧಿಗಾಗಿ ಸರ್ಕಾರಗಳು ಕೆಲಸ ಮಾಡಬೇಕು. ಆದರೆ ಈಗ ವ್ಯತರಿಕ್ತ ವಾತಾವರಣ ಉಂಟಾಗಿದೆ.ಎಲ್ಲರ ಧ್ವನಿಯಾಗಿ ಕೆಲಸ ಮಾಡಲು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷ ಸಿದ್ಧವಾಗಿದೆ ಹಾಗೂ ಬದ್ಧವಾಗಿದೆ.ಈ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಪಕ್ಷ ಕಟ್ಟುವ ಕೆಲಸ ಮಾಡೋಣ.ಶೀಘ್ರವಾಗಿ ರಾಜ್ಯ ಮುಖಂಡರು ಪದಾಧಿಕಾರಿಗಳನ್ನು ನೇಮಕ ಮಾಡುವ ಭರವಸೆ ನೀಡಿದ್ದಾರೆ.ಪಕ್ಷಕ್ಕಾಗಿ ನಾವೆಲ್ಲರೂ ದುಡಿಯೋಣ ಎಂದು ಅಶೋಕ ಮರೆಣ್ಣನವರ ಭರವಸೆಯ ಮಾತನಾಡಿದರು. 

          ಮುಖಂಡರಾದ ದಾದಾಪೀರ ಮತ್ತಿಹಳ್ಳಿ,ಗಣೇಶ ಗುತ್ತೆಮ್ಮನವರ,ಲಿಯಾಕತ್ ತಿಳವಳ್ಳಿ ಅವರು ಮಾತನಾಡಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ತತ್ವ ಸಿದ್ದಾಂತಕ್ಕೆ ನಾವೆಲ್ಲರೂ  ಬದ್ಧರಾಗಿ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಶ್ರಮಿಸೋಣ ಎಂದರು. ಸಭೆ ಪ್ರಾರಂಭದ ಮುನ್ನ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಮಾನ್ಯವರ ಕಾನ್ಸಿರಾಮ್ ಜೀ ಅವರ ಭಾವಚಿತ್ರಗಳಿಗೆ ನಮಿಸಿ ಪುಷ್ಪ ಸಲ್ಲಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ವಿಜಯಕುಮಾರ ವಿರಕ್ತಮಠ,ಶಂಭುಲಿಂಗಯ್ಯ ಹನಗೊಡಿಮಠ,ರಾಜಣ್ಣ ಉಪ್ಪಾರ,ಶರೀಪಸಾಬ ಮಂಗಳೂರ,ವಿಜಯಕುಮಾರ ಬೇನಕವಾಡಿ,ಅಲ್ತಾಪ್ ನದಾಫ,ಪ್ರವೀಣಕುಮಾರ ಹತ್ತಿಮತ್ತೂರ,ಮೃತ್ಯಂಜಯ ನೆಲ್ಲೂರ.ರೇಹಮತಲಿ ಶಿಗ್ಗಾಂವ,ಮಹಾದೇವಪ್ಪ ಹುಡೇದ,ಮಹೇಶ ಮಡಿವಾಳರ,ದಾನಪ್ಪ ದೇವಗಿರಿ,ಶರಣಪ್ಪ ದೊಡ್ಡಕರೆಪ್ಪನವರ,ಪುಟ್ಟಪ್ಪ ಸಂಕಟಿ ಹಾಗೂ ಅನೇಕ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು  ಪಾಲ್ಗೊಂಡಿದ್ದರು.