ಎಲ್ಲ ಸಮಸ್ಯೆಗಳಿಗೆ ಧ್ಯಾನವೇ ಪರಿಹಾರ: ಶ್ರೀ ರೇವಣಸಿದ್ದೇಶ್ವರ ಮಹಾರಾಜರು
Meditation is the solution to all problems: Sri Revanasiddheshwar Maharaj
ಶಿವಾಪೂರ, 15 : ಸಮೀಪದ ಇಟ್ನಾಳ ಗ್ರಾಮದಲ್ಲಿ ಕರ್ನಾಟಕ ಏಕೀಕರಣ ಪುರಸ್ಕೃತ ಇಂಚಗೇರಿ ಮಠದ ಸದ್ಗುರುಗಳು ಶ್ರೀ ಮಾಧವಾನಂದ ಪ್ರಭುಜಿಯವರ ಮಂದಿರ ಲೋಕಾರೆ್ಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಗುರುಗಿಂತ ಶ್ರೇಷ್ಠ ಈ ಜಗತ್ತಿನಲ್ಲಿ ಯಾರು ಇಲ್ಲ, ಪರಮಾತ್ಮನಿಗೆ ಯಾವ ಗುಡಿ ಗುಂಡಾರಗಳ ಅವಶ್ಯಕತೆ ಇಲ್ಲ ಸ್ಮರಣೆ ಮಾಡುವವರ ಅಂತರಂಗದಲ್ಲಿ ಪರಮಾತ್ಮ ನೀರುತ್ತಾನೇ,
ಇಂತಹ ಮಂದಿರಗಳನ್ನು ಕಟ್ಟಿ ಪ್ರತಿದಿನ ಭಜನೆ ಉಪಾಸನೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಏರಿ್ಡಸಿ ಅದರಲ್ಲಿ ಬಾಗಿಯಾಗುವುದರಿಂದ ಭಕ್ತರು ಪರಿವರ್ತನೆಯಾಗಿ ಕಾಯಾ ವಾಚಾ ಮನಸ್ಸಿನಿಂದ ಪರಿಶುದ್ಧತೆಯಿಂದ ಬದುಕಿದ್ದದಾದರೆ ಪರಮಾತ್ಮ ಎಲ್ಲ ಕೆಲಸ ಕಾರ್ಯಗಳನ್ನು ಸರಳ ಮಾಡುತ್ತಾನೆ, ಮನಸ್ಸಿನ ಹೊಯ್ದಾಟವೇ ಮಹಾರೋಗ ಮನ ಶಾಂತಿಯೆ ದಿವ್ಯ ಓಷಧಿ ಪ್ರತಿಯೊಬ್ಬರು ಗುರು ಉಪದೇಶ ಪಡೆದು ಪರಿಶುದ್ಧತೇಯಿಂದ ಧ್ಯಾನ ಮಾಡಿದರೆ ಪರಮಾತ್ಮನನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಶ್ರೀ ಮಾಧವಾನಂದ ದಿನ ದರ್ಶಿಕೆ ಬಿಡುಗಡೆ ಗೊಳಿಸಿದರು ವೇದಿಕೆಯಲ್ಲಿ ಸಾನಿಧ್ಯ ವಹಿಸಿದ್ದ ನಂದಗಾಂವ್ ಮಹಾದೇವ ಮಹಾರಾಜರು, ಶೇಗುನಸಿಯ ಹಣಮಂತ ಮಹಾರಾಜರು, ಶಂಕರ್ಪಮಹಾರಾಜರು, ರಾಮಣ್ಣ ಮಹಾರಾಜರು, ವಸಂತ ಮಹಾರಾಜರು, ಶಶಿಕಾಂತ ಶಿವನೂರ ಮಹಾರಾಜರು, ತಮ್ಮನ್ನ ಮಹಾರಾಜರು ಮಾತನಾಡಿದರು, ದಾಸಭೋದ ವಾಚನ, ಪುಷ್ಪವೃಷ್ಟಿ, ಮಹಾ ಮಂಗಳಾರತಿ, ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತ್ತು.
ಈ ಸಂದರ್ಭದಲ್ಲಿ ಗ್ರಾಮದ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು ಸೇರಿದಂತೆ ಸಮಸ್ತ ಗ್ರಾಮಸ್ಥರು,ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹುಬ್ಬಳ್ಳಿಯಿಂದ ಇಂಚಗೇರಿ ಮಠಕ್ಕೆ ಹೋರಟ ದಿಂಡಿ ಪಲ್ಲಕ್ಕಿ ಪಾದಯಾತ್ರಿಕರು ಉಪಸ್ಥಿತರಿದ್ದರು. ನಿರುಪನೇ ಹಾಗೂ ವಂದನಾರೆ್ನಯನ್ನು ವಿಎಲ್ ಘಂಟಿ ಮಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 