ಕಾಮ, ಕ್ರೋಧಗಳನ್ನು ನಿವಾರಿಸಲು ಮೆಡಿಟೇಶನ ಒಂದೇ ಉಪಾಯ: ಡಾ. ಹುಲಿಕಟ್ಟಿ
Meditation is the only way to overcome lust and anger: Dr. Hulikatti
ಕಾಮ, ಕ್ರೋಧಗಳನ್ನು ನಿವಾರಿಸಲು ಮೆಡಿಟೇಶನ ಒಂದೇ ಉಪಾಯ: ಡಾ. ಹುಲಿಕಟ್ಟಿ
ಬೆಳಗಾವಿ 06: ಶಾರೀರಕ ರೋಗಗಳು ನಾವು ನಿವಾರಣೆ ಮಾಡುತ್ತೇವೆ ಆದರೆ ಮನಸ್ಸಿಗೆ ಕಾಮ, ಕ್ರೋಧ ಮಂತಾದ ರೋಗಗಳನ್ನು ನಿವಾರಿಸಲು ಅಧ್ಯಾತ್ಮ ಮೆಡಿಟೇಶನ ಒಂದೇ ಉಪಾಯ ಎಂದು ಬೆಳಗಾವಿ ಯಳ್ಳೂರ ರೋಡ ಕೆ. ಎಲ್. ಇ ಹಾಸ್ಪಿಟಲ ಎಚ್‌ಓಡಿ ಡಾ. ಕೆ. ಎನ್. ಹುಲಿಕಟ್ಟಿ ಹೇಳಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಶಹಾಪುರ ಸೇವಾಕೇಂದ್ರದ ವತಿಯಿಂದ ದಿ. 6ರವಿವಾರದಂದು ಆಚರಿಸಲಾದ ರಾಷ್ಟ್ರೀಯ ವೈದೈರ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಬೆಳಗಾವಿ ಅವರು ಮಾತನಾಡುತ್ತಿದ್ದರು.
ಬೆಳಗಾವಿ ಅಟೋ ನಗರ ರೂರಲ್ ಆಯುರ್ವೇದ ಹಾಸ್ಪಿಟಲ್ ಪ್ರಿನ್ಸಿಪಾಲ ಡಾ. ಉಜ್ವಲಾ ದೇಶಪಾಂಡೆ ಇವರು ಮಾತನಾಡುತ್ತ ನಾವು ರೋಗಿಗಳು ಯಾವ ಸಮಯಕ್ಕೆ ಬಂದರೂ, ಅವರಿಗೆ ಸೇವೆ ಕೊಡುವುದಕ್ಕೆ ತಯಾರಿರಬೇಕು. ರೋಗಿಗಳು ಗುಣವಾದಾಗಲೇ ನಮಗೆ ನಿಜವಾದ ಆನಂದವಾಗುವದು ಎಂದರು.
ಬೆಳಗಾವಿ ಖಾಸಬಾಗ ಖಾಸಗಿ ವೈದ್ಯ ಡಾ. ಉಲ್ಹಾಸ ಯಡೂರ, ಇವರು ಮಾತನಾಡುತ್ತ ಆಂತರಿಕ ಶುದ್ಧಿ ಹಾಗೂ ಬಾಹ್ಯಾರಿಕ ಶುದ್ಧಿಯಿಂದ ರೋಗಗಳು ದೂರವಾಗುತ್ತವೇ ಎಂದರು.
ಡಾ. ಗೀರೀಶ ಯಡೂರ, ಸಿಎಂಒ, ಕೆ.ಎಲ್.ಇ ಹಾಸ್ಪಿಟಲ್, ಯಳ್ಳೂರ ರಸ್ತೆ, ಬೆಳಗಾವಿ ಇವರು ಮಾತನಾಡುತ್ತ ಪರಿಸರವು, ಪ್ಲಾಸ್ಟಿಕ ಮತ್ತು ಕಸದಿಂದ ಸ್ವಚ್ಛತೆ ಇಟ್ಟಾಗಲೇ ಆರೋಗ್ಯ ಪ್ರಾಪ್ತಿಯಾಗುತ್ತದೆ. ನಮ್ಮ ಕಾರ್ಯವನ್ನು ನಾವು ಪ್ರಾಮಾಣಿಕತೆಯಿಂದ ಮಾಡಬೇಕು ಎಂದರು.
ಬೆಳಗಾವಿ ಯಳ್ಳೂರ ರೋಡ ಕೆ. ಎಲ್. ಇ ಹಾಸ್ಪಿಟಲ ಚಿಕ್ಕಮಕ್ಕಳ ತಜ್ಞರು ಡಾ. ಸೌಮ್ಯ ವೆರ್ಣೇಕರ ಇವರು ಮಾತನಾಡುತ್ತ ಚಿಕ್ಕಮಕ್ಕಳಿದ್ದಾಗಲೆ ತಂದೆ ತಾಯಿಂದರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಬೇಕು. ಯಾಕೆಂದರೆ ಈಗಿನ ಮಕ್ಕಳು ಪರೀಕ್ಷೆ ಬಂದಾಗ ಮಾತ್ರ ದೇವರರು ಭಕ್ತಿ ಮಾಡುತ್ತಾರೆ. ನಿರಂತರವಾಗಿ ಭಕ್ತಿ ಭಾವನೆ ಇರುವದು ಅವಶ್ಯಕತೆ ಎಂದರು.
ಡಾ. ಸಂಗೀತಾ, ಪ್ರೋಫೆಸರ ಶೇಖ ಹೋಮಿಯೋಪತಿ ಕಾಲೇಜು, ಬೆಳಗಾವಿ ಮಾತನಾಡುತ್ತ ಹೃದಯ ಸಂಬಂಧಿತ ರೋಗಗಳನ್ನು ಗುಣಪಡಿಸಲು ಬ್ರಹ್ಮಾಕುಮಾರಿ ಇವರು ಕಲಿಸುವ ರಾಜಯೋಗದ ಧ್ಯಾನ, ವ್ಯಾಯಾಮ ಹಾಗೂ ಆಹಾರ ಪದ್ಧತಿಯಿಂದ ಸಾಧ್ಯವಿದೆ ಎಂಧರು. ಇಂಥಹ ಸಂಶೋಧನೆಗಳು ಮೌಂಟ ಅಬುವಿನ, ಮೇಡಿಕಲ್ವಿಂಗ ವತಿಯಿಂದ ನಡೆಯುತ್ತವೆ.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾಕುಮಾರಿ ಮೀನಾಕ್ಷೀ ಅಕ್ಕನವರು ಮಾತನಾಡುತ್ತ ಡಾಕ್ಟರರ ನಗುಮುಖ ನೋಡಿಯೇ ರೋಗಿಯ ಅರ್ಧ ರೋಗ ದೂರವಾಗುತ್ತದೆ, ವೈದ್ಯನಾಥನಾದಂತಹ ಆ ಪರಮಾತ್ಮ ಶಿವನು, ಇಲ್ಲಿ ಕಲಿಸಿ ಕೊಡುತ್ತಿರುವ ರಾಜಯೋಗವು, ಸರ್ವರೋಗಗಳಿಂದ ಮುಕ್ತವಾಗುವ ದಿವ್ಯ ಓಷಧಿಯಾಗಿದೆ ಎಂದರು.
ರಾಜಯೋಗಿನಿ ಬ್ರಹ್ಮಾಕುಮಾರಿ ವಿದ್ಯಾ ಅಕ್ಕನವರು ಮಾತನಾಡುತ್ತ ಇಂದಿನ ರೋಗಿಗಳು, ಮಾನಸಿಕವಾಗಿಯೂ ದುರ್ಬಲರಾಗಿರುತ್ತಾರೆ. ಓಷಧ ಜೊತೆಗೆ ಮಾನಸಿಕ ಬಲ ಹೆಚ್ಚಿಸಲು ಮೇಡಿಟೆಶನ ಅವಶ್ಯಕವಾಗಿದೆ. ಇದರಿಂದ ರೋಗಿಯು ಗುಣವಾಗುವದಲ್ಲದೇ, ಆನಂದದಿಂದ ಜೀವನ ನಡೆಸಬಹುದಾಗಿದೆ ಎಂದರು.
ಅತಿಥಿಗಳಿಗೆ ಈಶ್ವರೀಯ ಪ್ರಸಾದ ಕಾಣಿಕೆ ಕೊಡಲಾಯಿತು. ರಾಜಯೋಗಿನಿ ವಿದ್ಯಾ ನಿರೂಪಿಸಿ, ಸ್ವಾಗತಿಸಿದರು. ಬಿ.ಕೆ ದತ್ತಾತ್ರಯ ವಂದಿಸಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 