ವಿದ್ಯಾರ್ಥಿಗಳ ಶ್ರಮ ಆಶ್ರಮದಲ್ಲಿ ವೀಲೀನವಾದಾಗ ಸಾರ್ಥಕತೆ ಸಾಧ್ಯ: ಗುರುಸಿದ್ದೇಶ್ವರಶ್ರೀ

ವಿದ್ಯಾರ್ಥಿಗಳ ಶ್ರಮ ಆಶ್ರಮದಲ್ಲಿ ವೀಲೀನವಾದಾಗ ಸಾರ್ಥಕತೆ ಸಾಧ್ಯ: ಗುರುಸಿದ್ದೇಶ್ವರಶ್ರೀ Meaningfulness is possible when students' hard work is absorbed in the ashram: Gurusiddeshwarshree

              ಉಳ್ಳಾಗಡ್ಡಿ-ಖಾನಾಪೂರ 21: ವಿದ್ಯಾರ್ಥಿಗಳ ಶ್ರಮ ಆಶ್ರಮದಲ್ಲಿ ವಿಲಿನವಾಗಿ ಸಾರ್ಥಕತೆ ಕಾಣಲು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರವನ್ನು ಮಠ-ಪುಣ್ಯಕ್ಷೇತ್ರಗಳಲ್ಲಿ ಇಟ್ಟಿದ್ದು ಶ್ಲಾಘನೀಯ ಎಂದು ಹತ್ತರಗಿ ಕಾರಿಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು. 

              ಅವರು ಶುಕ್ರವಾರ ದಿ,21 ರಂದು ಹತ್ತರಗಿಯ ಕಾರಿಮಠದಲ್ಲಿ ಆರ್,ಎಮ್,ಎಸ್,ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿ ವಿದ್ಯಾರ್ಥಿ ಜೀವನ ಸುವರ್ಣಮಯ ಜೀವನ ಈ ಜೀವನವನ್ನು ಸ್ವಚ್ಚಂದವಾಗಿ ವಿನಿಯೋಗಿಸಿದಾಗ ಮಾತ್ರ ಜೀವನ ಸಾರ್ಥಕತೆಯನ್ನು ಕಾಣಲು ಸಾಧ್ಯ ವಿದ್ಯಾರ್ಥಿಗಳು ಆತ್ಮಶಕ್ತಿ, ಆತ್ಮಸ್ಥೈರ್ಯವನ್ನು ಹೊರಗಡವಿದಾಗ ವಿದ್ಯಾರ್ಥಿಗಳ ಜೀವನ ಸುಗಮವಾಗುತ್ತದೆ  ವಿದ್ಯಾರ್ಥಿಗಳು ಹಮ್ಮು-ಬಿಮ್ಮುಗಳನ್ನು ಬಿಟ್ಟು ಶ್ರಮದಾನ ಮಾಡಿದರೆ ಈ ಶ್ರಮ ಜೀವನಕ್ಕೆ ದಾರಿಕಾಣುವ ದಿವ್ಯಚಕ್ಷುವಾಗಲು ಸಾಧ್ಯ ಎಂದರು,  

                ಯಮಕನಮರಡಿಯ ಹುಣಸಿಕೊಳ್ಳಮಠದ ಸಿದ್ದಬಸವ ದೇವರುಆಶಿರ್ವಚನ ನೀಡಿ ಜೀವನಕ್ಕೆ ಅಗತ್ಯವಿರುವ ತತ್ವಗಳು ಚಿಂತನೆಗಳು ಇಂಥ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಿಂದ ದೊರೆಯುತ್ತವೆ ಎಂದು ಹೇಳಿದರು, ಸಾನಿಧ್ಯವನ್ನು ಹತ್ತರಗಿಯ ಕಾರಿಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು, 

               ವೇದಿಕೆಯಲ್ಲಿ ಸಿ,ಬಿ,ಸಿ, ಉಪಾಧ್ಯಕ್ಷ ಈರಣ್ಣಾ ಬಿಸಿರೊಟ್ಟಿ, ಪ್ರಾಚಾರ್ಯಎಸ್,ಎ,ರಾಮನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಹತ್ತರಗಿ ಗ್ರಾ,ಪಂ,ಅಧ್ಯಕ್ಷ ಸಮೀರ ಬೇಪಾರಿ, ಕಿರಣ ಸಿಂಗ್ ರಜಪೂತ, ಸಿದ್ದಪ್ಪಾ ಶಿಳ್ಳಿ, ಈಶ್ವರ ಮಾರಾ​‍್ಯಳಿ, ಶಿವಕುಮಾರ ಪೊತದಾರ, ಮಹಾದೇವ ಮಜತಿ, ಎ,ಎ,ಕಿವಂಡಾ, ಹಾಗೂ ಎನ್,ಎಸ್,ಎಸ್, ಶಿಬಿರಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು,ಕಾರ್ಯಕ್ರಮದಲ್ಲಿ ಬಿ,ಬಿ,ಕೋಡ್ಲಿ, ಶಿಬಿರದ ಬಗ್ಗೆ ಮಾಹಿತಿ ನೀಡಿದರು, ಎಸ್,ಆರ್‌. ತಬರಿ, ನಿರೂಪಿಸಿ ವಂದಿಸಿದರು.