ನಾಳೆ ಚಿದಂಬರ ಮಹಾ ಸ್ವಾಮಿಗಳ 267ನೇ ಅವತಾರ ಜಯಂತಿ

ನಾಳೆ ಚಿದಂಬರ ಮಹಾ ಸ್ವಾಮಿಗಳ 267ನೇ ಅವತಾರ ಜಯಂತಿ Mañan ta e di 267 aniversario di enkarnashon di Chidambaram Mahaswami.

ಅಥಣಿ, 08 : ಚಿದಂಬರ ಜಯಂತಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ. ಅಥಣಿ ಶ್ರೀ ಚಿದಂಬರ ಮಹಾ ಸ್ವಾಮಿಗಳ 267ನೇ ಅವತಾರ ಜಯಂತಿ ಮಹೋತ್ಸವ ಶ್ರೀ ಚಿದಂಬರ ಸೇವಾ ಸಮಿತಿ ಆಶ್ರಯದಲ್ಲಿ ನವ್ಹೆಂಬರ 10 ಸೋಮವಾರದಂದು ಅಥಣಿಯ ಶ್ರೀರಾಮ ಮಂದಿರದಲ್ಲಿ ಆಯೋಜಿಸಲಾಗಿದೆ.  

     ಮುಂಜಾನೆ 5.30ಕ್ಕೆ ಕಾಕಡಾರತಿ, 5.45ರಿಂದ 6.45 ರವರೆಗೆ ಶ್ರೀ ಚಿದಂಬರೇಶ್ವರ ನಾಮ ಸ್ನರಣೆ, 7 ರಿಂದ 10 30 ರವರೆಗೆ ರುದ್ರಾಭಿಷೇಕ, 10.45 ರಿಂದ11.45 ರವರೆಗೆ ವಾದಿರಾಜ ಜಂಬಗಿ ಇವರಿಂದ ಕೀರ್ತನೆ, 12 ಗಂಟೆಗೆ ಜನ್ಮೋತ್ಸವ ಸಮಾರಂಭ, ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ನೆರವೇರುವುದು. ಸಂಜೆ 7 ಗಂಟೆಗೆ ಶ್ರೀ ರಾಮದೇವರ ಹಾಗೂ ಶ್ರೀ ಶಿವ ಚಿದಂಬರ ಮಹಾಸ್ವಾಮಿಗಳವರ ಕಾರ್ತಿಕೋತ್ಸವ, ಭಜನೆ, ಸಂಗೀತ ಸೇವೆ, ಮಂತ್ರ ಪುಷ್ಪ, ಮಹಾ ಮಂಗಳಾರತಿಯೊಂದಿಗೆ ಜಯಂತೋತ್ಸವ ಮುಕ್ತಾಯಗೊಳ್ಳಲಿದೆ.     

     ಈ ಕಾರ್ಯಕ್ರಮಗಳ ಮೊದಲ ದಿನ ನವ್ಹೆಂಬರ 9  ಭಾನುವಾರ ಸಂಜೆ 6 ಗಂಟೆಗೆ ಶ್ರೀ ವಿಠ್ಠಲ ಮಂದಿರದಿಂದ ಕರಡಿ ಮಜಲು, ಭಜನಾ ಮಂಡಳಿಗಳ ಭಜನೆ, ಸುಮಂಗಲೆಯರ ಆರತಿಯೊಂದಿಗೆ ಶ್ರೀ ಶಿವ ಚಿದಂಬರ ಮಹಾ ಸ್ವಾಮಿಗಳ ಭಾವ ಚಿತ್ರವಿರುವ ಪಲ್ಲಕ್ಕಿ ಮೆರವಣಿಗೆ ಶ್ರೀರಾಮ ಮಂದಿರಕ್ಕೆ ಆಗಮಿಸಿ ಸಂಜೆ 7 ಗಂಟೆಗೆ ಅಲಂಕಾರ, ವಿಪ್ರರಿಂದ  ವೇದಘೋಷಣೆ, ಸಕಲ ಪೂಜೆಯೊಂದಿಗೆ ಭಾವಚಿತ್ರವನ್ನು ಭಕ್ತರ ಸಮ್ಮುಖದಲ್ಲಿ ಪ್ರತಿಷ್ಢಾಪಿಸಲಾಗುವುದು ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದು ಸೇವಾ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.