ಉತ್ತಮ ಮಳೆಯಾಗಿ ಬೆಳೆ ಚೆನ್ನಾಗಿ ಬರಲಿ:ಶಾಸಕ ಪಠಾಣ ಪ್ರಾರ್ಥನೆ

ಉತ್ತಮ ಮಳೆಯಾಗಿ ಬೆಳೆ ಚೆನ್ನಾಗಿ ಬರಲಿ:ಶಾಸಕ ಪಠಾಣ ಪ್ರಾರ್ಥನೆ May there be good rain and a good crop: MLA's chanting prayer

ಲೋಕದರ್ಶನ ವರದಿ 

ಶಿಗ್ಗಾವಿ: ನಾಡಿನ ಜನತೆಗೆ ಆರೋಗ್ಯ, ಸಂಪತ್ತು, ರೈತರಿಗೆ ಉತ್ತಮ ಮಳೆಯಾಗಿ ಬೆಳೆ ಚೆನ್ನಾಗಿ ಬರಲಿ ಎಂದು ಅಲ್ಲಾನಲ್ಲಿ ಪ್ರಾರ್ಥಿಸಿದ್ದೇನೆ ಎಂದು ಶಾಸಕ ಯಾಸೀರ್ ಖಾನ್ ಪಠಾಣ್ ಹೇಳಿದರು.  ಪಟ್ಟಣದಲ್ಲಿ ಮುಸಲ್ಮಾನ್ ಸಮುದಾಯದ ಬಾಂಧವರ ಜೊತೆಗೂಡಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ ಮಾತನಾಡಿದ ಅವರು, ಒಂದು ತಿಂಗಳ ಕಾಲ ಉಪವಾಸ ಆಚರಿಸುವ ಮುಸ್ಲಿಂರು ಈದ್ ಉಲ್ ಫಿತುರ್ ಹಿಂದಿನ ದಿನ ಚಂದ್ರದರ್ಶನದೊಂದಿಗೆ ಉಪವಾಸ ಅಂತ್ಯಗೊಳಿಸುತ್ತಾರೆ. ಹಬ್ಬದ ದಿನ ಪ್ರಾರ್ಥನೆ ಸಂಜೆ ಸಲ್ಲಿಸಿ ಝಕಾತ್ ನೀಡುತ್ತಾರೆ. ಝಕಾತ್ ಎಂದರೆ ಪ್ರತಿ ಮುಸ್ಲಿಮನು ರಂಜಾನ್ ನಲ್ಲಿ ತಮ್ಮ ದುಡಿಮೆ ಅಥವಾ ಸಂಪತ್ತಿನಲ್ಲಿ ಒಂದಷ್ಟು ಭಾಗವನ್ನು ಅಸಹಾಯಕ, ನಿರ್ಗತಿಕ, ಬಡವರ್ಗದ ಜನತೆಗೆ ಆಹಾರ, ಬಟ್ಟೆ, ಹಣ್ಣು ಹಂಪಲು ಸೇರಿದಂತೆ ಹಲವು ವಿಧಾನಗಳಲ್ಲಿ ದಾನ ನೀಡುವ ಮೂಲಕ ಅವರಿಗೆ ವಿವಿಧ ರೀತಿಯಲ್ಲಿ ನೆರವಾಗುವ ಸಹಾಯ ಮಾಡುವ ಪ್ರಕ್ರಿಯೆಯ ವಿಶಿಷ್ಟ ಆಚರಣೆಯಾಗಿದೆ ಎಂದರು.  ಅಂಜುಮನ್ ಸಂಸ್ಥೆಯಿಂದ ಶಾಸಕ ಪಠಾಣ್ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.