ಕನ್ನಡ ಭಾಷಾ ಪ್ರೇಮ ಎಲ್ಲರಲ್ಲಿ ಮೂಡಲಿ - ಡಾ ಶಶಿಕಾಂತ ಉಡಕೇರಿ

ಕನ್ನಡ ಭಾಷಾ ಪ್ರೇಮ ಎಲ್ಲರಲ್ಲಿ ಮೂಡಲಿ - ಡಾ ಶಶಿಕಾಂತ ಉಡಕೇರಿ May the love of Kannada language be instilled in everyone - Dr. Shashikantha Udakeri

ಧಾರವಾಡ 11: ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರಿ​‍್ಡಸಿದ್ದ ಹಚ್ಚೇವು ಕನ್ನಡದ ದೀಪ ಶೀರ್ಷಿಕೆ ಅಡಿಯಲ್ಲಿ ಶ್ರೀ ಹನಮಂತಪ್ಪ ಫ.ಪ್ರತಾಪ.ದತ್ತಿ ಶಾಂತಮ್ಮ ನಿಂ ಬಾರಕೇರ ದತ್ತಿ ಬಸಪ್ಪ ಯಲ್ಲಪ್ಪ ಕಲ್ಲೂರ ದತ್ತಿ ಚಂದ್ರಶೇಖರ ಕಂಬಾರ ದತ್ತಿ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ಮತ್ತು ಕನ್ನಡ ನಾಡು ನುಡಿಯ ಗೀತ ಗಾಯನ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಶಶಿಕಾಂತ ಉಡಕೇರಿ ಇವರು ಕೆಲವು ಭಾಷೆಗಳು ಅಳಿವಿನಂಚಿನಲ್ಲಿರುವದು ಪ್ರಸ್ತುತ ವಿದ್ಯಮಾನಗಳಿಂದ ಕಂಡು ಬರತಾ ಇದೆ. ಕಾರಣ ಇವುಗಳನ್ನು ಬಳಸುತ್ತ ಬೆಳೆಸಬೇಕಾಗಿದೆ. ಎಲ್ಲರಲಿ ಕನ್ನಡ ಭಾಷಾ ಪ್ರೇಮ ಮೂಡಿ ಬರಲಿ, ಆಂಗ್ಲ ಭಾಷಾ ವ್ಯಾಮೋಹ ಬಿಡಿ ಎಂದರು.. ಉಪನ್ಯಾಸಕರಾದ ಡಾ ವೀಣಾ ಬಿರಾದಾರ ಇವರು ಕನ್ನಡ ಭಾಷಾ ಇತಿಹಾಸ ಬಗ್ಗೆ ಮತ್ತು ಕರ್ನಾಟಕ ಏಕೀಕರಣ ಕುರಿತು ಮಹತ್ವದ ಅಂಶಗಳನ್ನು ತಿಳಿಸಿದರು.ಬಸವರಾಜ ಶಿಗ್ಗಾಂವ ಮತ್ತು ಮೌನೇಶ್ ಭಜಂತ್ರಿ ಇವರು ಏಕತಾರಿ ತತ್ವಪದಗಳನ್ನು ಹಾಡಿದರು..  

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ದ ಅಧ್ಯಕ್ಷರು ಆದ ಡಾ ಲಿಂಗರಾಜ ಅಂಗಡಿ ಮಾತನಾಡಿದರು ವೇದಿಕೆಯ ಮೇಲೆ ಶ್ರೀಮತಿ ಉಡಕೇರಿ.. ದತ್ತಿ ದಾನಿಗಳು ಆದ ಶ.ಹ.ಪ್ರತಾಪ ಡಾ ಶಿವಾನಂದ ಕಲ್ಲೂರ ಇದ್ದರು ನಿರ್ಣಾಯಕ ರಾಗಿ ಪ್ರಮೀಳಾ ಜಕ್ಕಣ್ಣವರ ಹಾಗೂ ಬಾಬಾಜಾನ ಮುಲ್ಲಾ ಮತ್ತು ನಂದಪ್ಪಗೌಡ ದ್ಯಾಪೂರ ಕಾರ್ಯ ನಿರ್ವಹಿಸುವ ಮೂಲಕ ಯಶಸ್ವಿಗೊಳಿಸಿದರು. ಕನ್ನಡ ನಾಡು ನುಡಿ ಗೀತೆ ಗಾಯನ ಸ್ಪರ್ಧೆಯಲ್ಲಿ ಹತ್ತು ಮಹಿಳಾ ಮಂಡಳಗಳು ಭಾಗವಹಿಸಿದ್ದವು.. ಪ್ರಥಮ ಸ್ಥಾನವನ್ನು ಗೀತಾ ಮಹಿಳಾ ಮಂಡಳ ಪಡೆದಿದೆ.. ದ್ವಿತೀಯ ಸ್ಥಾನವನ್ನು ಸ್ವರಾತ್ಮಿಕಾ ಮಹಿಳಾ ಮಂಡಳ ಪಡೆದಿದೆ, ತೃತೀಯ ಸ್ಥಾನವನ್ನು ಶಿವ ಪಾರ್ವತಿ ಮಹಿಳಾ ಮಂಡಳ ಪಡೆದಿದೆ.. ಭಾಗವಹಿಸಿದ ಎಲ್ಲಾ ಮಹಿಳಾ ಮಂಡಳಿಗಳಿಗೆ ಪ್ರಮಾಣ ಪತ್ರ ಕೊಡಲಾಯಿತು. ಪ್ರಾರಂಭದಲ್ಲಿ ಎಸ್ ಎಸ್ ಕರಡಿ ಇವರು ಪ್ರಾರ್ಥನೆ ಸಲ್ಲಿಸಿದರು. ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹಾಂತೇಶ ನರೇಗಲ್ಲ ಸ್ವಾಗತಿಸಿದರು.ಡಾ ಜಿನದತ್ತ ಹಡಗಲಿ ಕಾರ್ಯಕ್ರಮ ನಿರೂಪಿಸಿದರು.ನೇಹಾ ಬುದ್ನಿ ವಂದಿಸಿದರು... ಕಾರ್ಯಕ್ರಮದಲ್ಲಿ ಮೇಘಾ ಹುಕ್ಕೇರಿ, ಗುರು ತಿಗಡಿ, ಎಚ್ ಎಸ್ ಬಡಿಗೇರ, ಎಸ್ ಎಸ್ ದೊಡಮನಿ,ಸುಮಂಗಲಾ ದಂಡಿನ, ಧಾರವಾಡ ಶೆಟ್ಟರ್, ಸುನಂದಾ ಯಡಾಲ, ಸಿ ವಿ ಮಮದಾಪೂರ, ಸಾಣಿಕೊಪ್ಪ, ಕ್ವಾಟಿಹಳ್ಳಿ ಭಾಗವಹಿಸಿದ್ದರು