ಮೌಲಾನ ಆಜಾದ್ ಮಾದರಿ ಶಾಲೆ ಬೇರೆಡೆ ಸ್ಥಳಾಂತರಿಸಿ, ಇಲ್ಲವಾದಲ್ಲಿ ಕಾನೂನು ಹೋರಾಟ : ಎನ್.ಮನೋಜಗೌಡ
Maulana Azad Model School should be shifted elsewhere, otherwise legal action will be taken: N. Man
ಲೋಕದರ್ಶನ ವರದಿ
ಕಂಪ್ಲಿ 09: ಮೌಲಾನ ಆಜಾದ್ ಮಾದರಿ ಶಾಲೆ ಕಟ್ಟಡ ನಿರ್ಮಾಣ ಮಾಡದೇ ಕೂಡಲೇ ಬೇರೆಡೆ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಯುವ ಮುಖಂಡ ಎನ್.ಮನೋಜಗೌಡ ಆಗ್ರಹಿಸಿದರು.ಇಲ್ಲಿನ ಸಕ್ಕರೆ ಕಾರ್ಖಾನೆಯ ಸರ್ಕಾರಿ ಹಿ ಪ್ರಾ ಶಾಲಾ ಆವರಣದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯಿಂದ ಮೌಲಾನ ಆಜಾದ್ ಶಾಲೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಸರ್ಕಾರಿ ಶಾಲೆಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿಳುತ್ತದೆ ಎಂಬ ನಿಟ್ಟಿನಲ್ಲಿ ಎಸ್ಡಿಎಂಸಿ ಹಳೇ ವಿದ್ಯಾರ್ಥಿಗಳು, ಸ್ಥಳೀಯ ಪೋಷಕರು ಸೋಮವಾರ ಹಮ್ಮಿಕೊಂಡಿದ್ದ ದಿಢೀರ್ ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದೆ.
ಇಲ್ಲಿನ ಮಕ್ಕಳಿಗೆ ಅಲ್ಪಸ್ವಲ್ಪ ಆಟೋಟಕ್ಕಾಗಿ ಮೈದಾನವಿದೆ. ಆದರೆ, ಸರಿಯಾದ ದಾಖಲೆಗಳಿಲ್ಲದೇ ಭೂಮಿ ಪೂಜೆ ಮಾಡದೇ ಹಾಗೂ ಸ್ಥಳೀಯರ ಗಮನಕ್ಕಿಲ್ಲದೇ ಏಕಾಏಕಿ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳು ಆಜಾದ್ ಶಾಲೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ದುರ್ಧೈವವಾಗಿದೆ. ಇಲ್ಲಿನ ಶಾಲಾ ಮೈದಾನ ಬಿಟ್ಟು ಬೇರೆಕಡೆ ಶಾಲಾ ಕಟ್ಟಡ ನಿರ್ಮಿಸಲಿ. ಆದರೆ, ಇಲ್ಲಿನ ಶಾಲೆ ನಿರ್ಮಿಸುವುದು ಸರಿಯಲ್ಲ. ಇಲ್ಲಿನ ಆಜಾದ್ ಶಾಲೆ ನಿರ್ಮಾಣವಾದರೆ ಸರ್ಕಾರಿ ಶಾಲಾ ಮಕ್ಕಳಿಗೆ ತುಂಬ ಸಮಸ್ಯೆಯಾಗುತ್ತದೆ. ಒಂದು ವೇಳೆ ಇಲ್ಲೇ ಶಾಲಾ ಕಟ್ಟಡ ನಿರ್ಮಾಣಕ್ಕೆ ಮುಂದಾದರೆ, ಕಾನೂನು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದರು.
ಬಳ್ಳಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ರಾಜು ಚೌಹಾಣ್ ಮಾತನಾಡಿ, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕಂಪ್ಲಿಯಲ್ಲಿ ಮೌಲಾನ ಆಜಾದ್ ಮಾದರಿ ಶಾಲೆ ನಿರ್ಮಾಣಕ್ಕಾಗಿ ಸ್ಥಳಕ್ಕೆ ಬಂದಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಗುರುತು ಹಾಕಿಸಿ, ಸ್ವಚ್ಚತೆ ಮಾಡುತ್ತಿರುವ ಸಂದರ್ಭದಲ್ಲಿ ಸ್ಥಳೀಯವರು ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಆದರೆ, ಮೇಲಾಧಿಕಾರಿಗಳ ಸೂಚನೆಯಿಂದ ಕಟ್ಟಡ ನಿರ್ಮಾಣಕ್ಕೆ ಸಕಲ ಸಿದ್ಧತೆ ಮಾಡಲಾಗುತ್ತಿದೆ ಎಂದರು. ಆಜಾದ್ ಶಾಲೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವ ಸಂದರ್ಭದಲ್ಲಿ ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ, ಎಸ್ಡಿಎಂಸಿಯವರು,
ಸ್ಥಳೀಯ ಮುಖಂಡರು, ಯುವಕರು, ಪೋಷಕರು ಪ್ರತಿಭಟನೆಗೆ ಮುಂದಾದಾಗ ಪಿಐ ವಾಸುಕುಮಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಿ, ಪ್ರತಿಭಟನೆ ಮಾಡದಂತೆ ಹಾಗೂ ಕಾಮಗಾರಿಗೆ ಅಡೆತಡೆ ಮಾಡದಂತೆ ತಿಳಿ ಹೇಳಿದರು. ನಂತರ ಬಳ್ಳಾರಿಗೆ ತೆರಳಿ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿ ಇಲಾಖಾ ಆಧಿಕಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ರಾಮಲಿಂಗಪ್ಪ, ಉಪಾಧ್ಯಕ್ಷ ನಾಗರಾಜ, ಸದಸ್ಯೆ ಸುಜಾತ, ಮುಖಂಡರಾದ ರಾಜಶೇಖರ್, ಯರಿ್ರಸ್ವಾಮಿ ಸೇರಿದಂತೆ ಎಸ್ಡಿಎಂಸಿಯವರು, ಮುಖಂಡರು, ಹಳೇ ವಿದ್ಯಾರ್ಥಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 