ವಿದ್ಯಾರ್ಥಿ ಗಳ ಮೇಲಿನ ಪೋಲೀಸ್ ದೌರ್ಜನ್ಯವನ್ನು ಖಂಡಿಸಿ ಬೃಹತ್ ಪ್ರತಿಭಟನೆ

ಧಾರವಾಡ/ಹುಬ್ಬಳ್ಳಿ 17: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿ ಗಳು ಮುಂಚಿತವಾಗಿ ತಿಳಿಸಿಯೇ ಯಾವುದೇ ಹಿಂಸೆಗೆ ಆಸ್ಪದವಿಲ್ಲದಂತೆ ತಮ್ಮ ಬೇಡಿಕೆಗಳಿಗಾಗಿ ಪ್ರತಿಭಟನೆಯನ್ನು ಶಾಂತಿಯುತವಾಗಿ ಮುಂದುವರೆಸುತ್ತಿದ್ದರು. ಆ ಸಂದರ್ಭದಲ್ಲಿ ಕೆಲವು ಸಮಾಜ ಘಾತುಕ ಶಕ್ತಿಗಳು ಹಿಂಸಾಚಾರಕ್ಕಿಳಿದರೆಂಬ ನೆಪದಲ್ಲಿ ಇಂತಹ ಸಮಾಜ ಘಾತುಕ ಶಕ್ತಿಗಳನ್ನು ಪತ್ತೆಹಚ್ಚುವ ಸಲುವಾಗಿ ಸಮಗ್ರವಾಗಿ ತನಿಖೆ ನಡೆಸುವ ಬದಲು ಪೋಲೀಸರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಹೇಡಿಗಳಂತೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಪ್ರತಿಭಟನಾಕಾರರಲ್ಲಿ ಹಲವರು ಗುಂಡಿನೇಟಿಗೆ ತುತ್ತಾಗಿ ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ದಿನ ದೇಶದ ವಿದ್ಯಾಥರ್ಿ ಚಳುವಳಿಯ ಇತಿಹಾಸದಲ್ಲಿ ಕರಾಳವಾದ ದಿನವಾಗಿದೆ ಎಂದು ಎಐಡಿಎಸ್ಓ ಜಿಲ್ಲಾಧ್ಯಕ್ಷ ಮಹಾಂತೇಶ ಬೀಳೂರು ಹೇಳಿದರು.

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿ ಹಾಗೂ ಅಲೀಘರ್ ಮುಸ್ಲೀಂ ವಿ.ವಿ.ಯ ವಿದ್ಯಾರ್ಥಿ ಗಳ ಮೇಲೆ ಪೋಲೀಸರು ನಡೆಸಿರುವ ಗುಂಡಿನ ದಾಳಿಯನ್ನು ಖಂಡಿಸಿ ಇಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎ.ಐ.ಡಿ.ಎಸ್.ಓ)ವಿದ್ಯಾರ್ಥಿ  ಸಂಘಟನೆಯಿಂದ ಧಾರವಾಡದಲ್ಲಿ ನಡೆಸಿದ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಅವರು ಮಾತನಾಡಿದರು. 

 ಇಂತಹ ಪೋಲೀಸರ ರಾಕ್ಷಸೀ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತೇವೆ. ಇಡೀ ದೇಶವ್ಯಾಪಿ ವಿರೋಧಿಸಲ್ಪಡುತ್ತಿರುವ ಕೋಮು ಪಕ್ಷಪಾತದ ಆಧಾರಿತವಾದ ಎಸ್.ಆರ್.ಸಿ ಹಾಗೂ ನಾಗರಿಕತ್ವ ತಿದ್ದುಪಡಿ ಖಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿ  ಸಮುದಾಯದ ಪ್ರಜಾತಾಂತ್ರಿಕ ಹಕ್ಕನ್ನು ಎತ್ತಿಹಿಡಿಯುತ್ತೇವೆ. ಹಾಗೆಯೇ ಈ ಕೂಡಲೇ ಇಂತಹ ನಿರ್ದಾ ಕ್ಷಿಣ್ಯ ಹಾಗೂ ಮಾರಣಾಂತಿಕ ದಾಳಿಗಳಂತಹ ಪ್ರಯತ್ನಗಳನ್ನು ನಿಲ್ಲಿಸಬೇಕೆಂದು ಪೋಲೀಸ್ ಆಡಳಿತ ಮತ್ತು ಕೇಂದ್ರ ಸರ್ಕಾ ರಕ್ಕೆ ಎಚ್ಚರಿಕೆ ನೀಡುತ್ತೇವೆ. ಇಂತಹ ಹಿಂಸಾಚಾರಗಳ ಹಿಂದಿರುವ ಘಾತುಕ ಶಕ್ತಿಗಳನ್ನು ಪತ್ತೆಹಚ್ಚಬೇಕೆಂದು  ಒತ್ತಾಯಿಸುತ್ತೇವೆ. ಇಂತಹ ಭಯಂಕರ ದಾಳಿಗಳಿಗೆ ಹೊಣೆಗಾರರಾಗಿರುವ ಪೋಲೀಸ್ ಅಧಿಕಾರಿಗಳ ವಿರುದ್ಧವೂ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಸಹ ಒತ್ತಾಯಿಸುತ್ತಿದ್ದೇವೆ ಎಂದರು.

ಪೌರತ್ವ ತಿದ್ದುಪಡಿ ಖಾಯ್ದೆಯನ್ನು ಜಾರಿಗೊಳಿಸಿ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಹೊರಟಿರುವ ಸಕರ್ಾರದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಹಾಗೆಯೇ ರಾಜ್ಯಾಧಿಕಾರದ ದಬ್ಬಾಳಿಕೆ ಮತ್ತು ಅದರ ಅಪ್ರಜಾತಾಂತ್ರಿಕ ಹಾಗೂ ಅನೈತಿಕ ಆಳ್ವಿಕೆಯ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಶಾಂತಿಯುತ ಪರಿಸ್ಥಿತಿಯನ್ನು ಕಾಯ್ದುಕೊಂಡು ಹೋರಾಟವನ್ನು ಮುಂದುವರೆಸಬೇಕೆಂದು ಜನ ಸಮುದಾಯ ಅದರಲ್ಲೂ ನಿರ್ಧಿ ಷ್ಟವಾಗಿ ವಿದ್ಯಾರ್ಥಿ  ಸಮುದಾಯಕ್ಕೆ ನಾವು ಈ ಮೂಲಕ ಒತ್ತಾಯಿಸುತ್ತೇವೆ ಎಂದರು. 

ಕಲಾಭವನದಿಂದ ಪ್ರಾರಂಭವಾದ ಪ್ರತಿಭಟನೆ ವಿವೇಕಾನಂದ ವೃತ್ತ, ಜ್ಯುಬಲಿವೃತ್ತದ ಮೂಲಕ ಕಲಾಭವನ ಮೈದಾನದಲ್ಲಿ ಕೊನೆಗೊಂಡಿತು. ಪ್ರತಿಭಟನೆಯಲ್ಲಿ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿ ಗಳು ಭಾಗವಹಿಸಿದ್ದರು. 

ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ  ರಣಜಿತ್ ದೂಪದ್ ಮಾತನಾಡಿ ಅನ್ಯಾಯವನ್ನು ಪ್ರತಿಭಟಿಸುವ ಹಕ್ಕು ಪ್ರಜಾತಾಂತ್ರಿಕವಾಗಿಯೇ ಬಂದಿರುವಂತದ್ದು. ಅಂತಹ ಹಕ್ಕನ್ನು ಕಸಿದುಕೊಳ್ಳಲು ನಡೆಸುತ್ತಿರುವ ಹುನ್ನಾರವನ್ನು ವಿದ್ಯಾಥರ್ಿ ಸಮುದಾಯ ಸೋಲಿಸಬೇಕು. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿ ಗಳ ಹೋರಾಟದೊಂದಿಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು. 

ಪ್ರತಿಭಟನೆಯ ನೇತೃತ್ವವನ್ನು ಎಐಡಿಎಸ್ಓ ಜಿಲ್ಲಾ ಮುಖಂಡರಾದ ಸಿಂದು ಕೌದಿ, ಅರುಣ, ಅಶೋಕ, ಸಹನಾ, ಪ್ರದೀಪ್, ಮಹಾಂತೇಶ, ಅಕ್ಷತಾ, ಗಂಗರಾಜ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.