ಬಲ್ಡೊಟ ಉಕ್ಕಿನ ಕಾರ್ಖಾನೆ ಶೀಘ್ರ ಸ್ಥಾಪನೆಗೆ ಒತ್ತಾಯಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ
Massive protest in Koppal demanding early establishment of Baldota Steel Factory
ಕೊಪ್ಪಳ 13: ಬಲ್ದೋಟ ಸಮೂಹ ಸಂಸ್ಥೆ ಯು ಕೊಪ್ಪಳದಲ್ಲಿ ಇಂಟಿಗ್ರೇಟೆಡ್ ಉಕ್ಕಿನ ಕಾರ್ಖಾನೆಯನ್ನು ಸ್ಥಾಪನೆಗೆ ಮುಂದಾಗಿದ್ದು ಕೂಡಲೇ ಸ್ಥಾಪಿಸುವಂತೆ ಸರ್ಕಾರ ಮುಂಜಾಗ್ರತೆ ಕ್ರಮ ವಹಿಸಿ ಕಾರ್ಖಾನೆ ಅವರಿಗೆ ಸಹಕಾರ ನೀಡಬೇಕೆಂದು ಒತ್ತಾಯಿಸಿ ಕೊಪ್ಪಳದಲ್ಲಿಂದು ವಿವಿಧ ಸಂಘಟನೆಗಳು ಮತ್ತು ಕಾರ್ಖಾನೆಗೆ ತಮ್ಮ ಹೂಲ ಜಮೀನು ಕಳೆದುಕೊಂಡಿರುವ ರೈತರು ಗುರುವಾರದಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಿಸಿ ಒತ್ತಾಯಿಸಿದರು, ಉಕ್ಕಿನ ಕಾರ್ಖಾನೆ ಸ್ಥಾಪಿಸಿ ಇಲ್ಲವೇ ನಮಗೆಲ್ಲ ಸರ್ಕಾರಿ ನೌಕರಿ ಕೊಡಿ ಎಂದು ಪ್ರತಿಭಟನಾಕಾರರು ಬೃಹತ್ ಪ್ರತಿಭಟನೆ ನಡೆಸಿದರು, ನೇತೃತ್ವ ವಹಿಸಿದ ಹನುಮಂತಪ್ಪ ಕೌದಿ ಯವರು ಮಾತನಾಡಿ ಸರ್ಕಾರ ಮತ್ತು ಜಿಲ್ಲಾ ಆಡಳಿತ ಕೂಡಲೇ ಕೊಪ್ಪಳದಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಅವಕಾಶ ಕಲ್ಪಿಸಿ ಕೊಡಬೇಕು ಸಂಪೂರ್ಣ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು ಸದರಿ ಕಾರ್ಖಾನೆ, ಕೊಪ್ಪಳದಲ್ಲಿ ಕೂಡಲೇ ಸ್ಥಾಪನೆ ಆಗಬೇಕು ಆಡಳಿತ ಮಂಡಳಿ ಪರಿಸರ ಮಾಲಿನ್ಯ ಇಂದ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಉತ್ತಮ ವ್ಯವಸ್ಥೆಯನ್ನು ಕೊಪ್ಪಳ ನಗರದ ಸಾರ್ವಜನಿಕರಿಗೆ ಕಲ್ಪಿಸಿ ಕೊಡಬೇಕು, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿ ಕೊಡಬೇಕು ಕಾರ್ಖಾನೆ ಸ್ಥಾಪಿಸಿ ಅಥವಾ ನಮಗೆಲ್ಲರಿಗೆ ಸರ್ಕಾರಿ ನೌಕರಿ ಒದಗಿಸಿಕೊಡಿ ಎಂದು ಒತ್ತಾಯಿಸಿ ಕೊಪ್ಪಳದಲ್ಲಿ ಕೂಡಲೇ ಉಕ್ಕಿನ ಕಾರ್ಖಾನೆ ಸ್ಥಾಪನೆ ಯಾಗಲು ಬಲದೋಟ ಕಂಪನಿಯ ಆಡಳಿತ ಮಂಡಳಿಗೆ ಸಹಕಾರ ನೀಡಬೇಕು ಎಂದು ಹಲವು ಸಂಘಟನೆಗಳು, ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಪಡಿಸಿದ್ದಾರೆ, ಮೆರವಣಿಗೆಯಲ್ಲಿ ನಾಗರಾಜ್ ಗುಡಿಕಾರ್, ಕೆಂಪಪ್ಪ ಇಟಗಿ, ಸೋಮಣ್ಣ ಹಳ್ಳಿಕೇರಿ, ಹನುಮನ ಗೌಡ ರೆಡ್ಡಿಆರ್ ,ಪ್ರಾಣೇಶ್ ಹಾಲ್ವರ್ತಿ, ಬಸವರಾಜ್ ಬಡಿಗೇರ್, ಇರ್ಫಾನ್ ಸರ್ದಾರ್, ಮಹಿಬೂಬ್ ವಾಲಿಕಾರ್, ಮದಾಾರ್ನ್ ಅಲಿ ಪರದೇಘರ್, ಮಹಿಬೂಬ್ ಬಾಗಿಲಿ, ಆಸ್ಗರ್, ಉಸ್ಮಾನ್ ವಾಲಿಕಾರ್, ಅನ್ವರ್ ಪರದೆಗರ್, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 