ಬಕ್ರೀದ್ ಹಬ್ಬದ ಆಚರಣೆಯ ಪ್ರಯುಕ್ತ ನೆಡೆದ ಸಾಮೂಹಿಕ ಪ್ರಾರ್ಥನ
Mass prayer held on the occasion of Bakrid festival
ಬಕ್ರೀದ್ ಹಬ್ಬದ ಆಚರಣೆಯ ಪ್ರಯುಕ್ತ ನೆಡೆದ ಸಾಮೂಹಿಕ ಪ್ರಾರ್ಥನ
ಹೊಸಪೇಟೆ 07 : ಇಂದು ನಗರದಲ್ಲಿ ಮುಸ್ಲಿಂ ಬಾಂಧವರು ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗೆ 07.00 ಗಂಟೆಗೆ ಆರ್.ಟಿ.ಒ ಈದ್ಗಾ ಮೈದಾನದಲ್ಲಿ, 08.45 ಗಂಟೆಗೆ ಚಿತ್ತವಾಡ್ಗಿ ಈದ್ಗಾ ಮೈದಾನದಲ್ಲಿ, 09.00 ಗಂಟೆಗೆ ಟಿ.ಬಿ.ಡ್ಯಾಂ, ಈದ್ಗಾ ಮೈದಾನದಲ್ಲಿ 08.30 ಗಂಟೆಗೆ ಅಂಬೇಡ್ಕರ್ ವೃತ್ತದ ಬಳಿ ಇರುವ ಗುಲಾಬ್ ಶಾ ವಲೀ ದರ್ಗಾದ ಈದ್ಗಾ ಮೈದಾನದಲ್ಲಿ, 08.00 ಗಂಟೆಗೆ ಬಳ್ಳಾರಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ 08.30 ಗಂಟೆಗೆ ಕಾರಿಗನೂರು ಈದ್ಗಾ ಮೈದಾನದಲ್ಲಿ 09.00 ಗಂಟೆಗೆ ನಾಗೇನ ಹಳ್ಳಿ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಶ್ರದ್ದಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
08.30 ಗಂಟೆಗೆ ಅಂಬೇಡ್ಕರ್ ವೃತ್ತದ ಬಳಿ ಇರುವ ಗುಲಾಬ್ ಶಾ ವಲೀ ದರ್ಗಾದ ಈದ್ಗಾ ಮೈದಾನದಲ್ಲಿ, ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಹೊಸಪೇಟೆ ಕಾಂಗ್ರೆಸ್ ಮುಖಂಡರು ಹಾಗು ಅಂಜುಮನ್ ಕಮಿಟಿ ಅಧ್ಯಕ್ಷರಾದ ಹೆಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ಈ ದಿನ ವಿಶ್ವದಾದ್ಯಂತ ಆಚರಿಸುತ್ತಿರುವ ಎಲ್ಲ ನನ್ನ ಮುಸ್ಲಿಂ ಭಾಂದವರಿಗೂ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಬಕ್ರೀದ್ ಹಬ್ಬವು ನಮ್ಮ ಕ್ಷೇತ್ರದಾದ್ಯಂತ ಹಾಗೂ ದೇಶದಾದ್ಯಂತ ಉತ್ತಮ ಮಳೆ ಬೆಳೆಯಾಗಿ ಪ್ರತಿಯೊಬ್ಬರಿಗೂ ಸುಃಖ ಶಾಂತಿ, ನೆಮ್ಮದಿ ಸೌಹಾರ್ದತೆ, ನೀಡಿ ಪ್ರೀತಿ, ಪ್ರೇಮ, ವಾತ್ಸಲ್ಯದಿಂದ ಸಮೃದ್ದಿಗೊಂಡು ಉತ್ತಮ ಆರ್ಥಿಕತೆ, ಆರೋಗ್ಯ, ಆಯುಷ್ಯ, ನೀಡಲಿ ಆ ಭಗವಂತನಲ್ಲಿ ಪ್ರಾರ್ಥಿಸಿದರು. ಹಾಗು ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಪೈಗಂಬರ್‌ರವರ ಆದೇಶದ ಪ್ರಕಾರ ಕುರ್ಬಾನಿ ಎಂದರೆ ತ್ಯಾಗ ಅಂದರೆ ನಮ್ಮಲ್ಲಿರುವ (ಅರಿಷಡ್ ವರ್ಗಗಳಾದ) ಕೆಟ್ಟ ಗುಣಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಹಾಗು ಇವುಗಳೊಂದಿಗೆ ಮುಂತಾದ ದುರ್ಗುಣಗಳನ್ನು ಬಿಟ್ಟು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಪರಸ್ಪರೊಂದಿಗೆ ಹಂಚಿಕೊಂಡು ತಿನ್ನುವ ಮನೋಭಾವನೆಯನ್ನು ಪ್ರತಿಯೊಬ್ಬರು ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು
ಬಕ್ರೀದ್ ಹಬ್ಬದ ಆಚರಣೆಯ ಪ್ರಯುಕ್ತ ನೆಡೆದ ಸಾಮೂಹಿಕ ಪ್ರಾರ್ಥನೆಯನ್ನು ಮೌಲಾನಾಗಳಾದ ಮೊಹಮ್ಮದ್ ಅಬುಬಕರ್ ಅಶ್ರಫಿ ಪ್ರಾರ್ಥನೆಯನ್ನು ನೆರವೇರಿಸಿಕೊಟ್ಟರು.
ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷರಾದ ಎಮ್ ಫಿರೋಜ್ ಖಾನ್ ಕಾರ್ಯದರ್ಶಿಗಳಾದ ಎಮ್.ಡಿ. ಅಬೂಬಕ್ಕರ್ ಖಾಜಾಂಚಿಗಳಾದ ಜಿ.ಅನ್ಸರ್ ಭಾಷ ಸಹಕಾರ್ಯದರ್ಶಿಗಳಾದ ಡಾಽಽ ಎಮ್.ಡಿ. ದುರ್ವೇಶ್ ಮೈನುದ್ದಿನ್ ಹಾಗು ಸದ್ಯಸರುಗಳಾದ ಕೋತ್ವಾಲ್ ಮೊಹಮ್ಮದ್ ಮೋಸಿನ್ ಅಡ್ವಕೇಟ್ ಸದ್ದಾಮ್ ಮತ್ತು ಎಲ್ ಗುಲಾಮ್ ರಸೂಲ್ ಅಬ್ದುಲ್ ಖಾದರ್ ರಫಾಯಿ ಖದೀರ್ ಹಾಗೂ ಮುಸ್ಲಿಂ ಮುಖಂಡರುಗಳಾದ ಖದೀರ್. ಜಫ್ರುಲ್ಲಾ ಖಾನ್‌ಸಾಬ್. ರಜಾಕ್. ಹಾಗೂ ಸಾವಿರಾರು ಮುಸ್ಲಿಂ ಭಾಂಧವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 