ಸಾಮೂಹಿಕ ವಿವಾಹಗಳಿಂದ ಬಡವರಿಗೆ ಅನುಕೂಲವಾಗುತ್ತದೆ : ಶಾಸಕ ಕೆ.ರಾಘವೇಂದ್ರ ಹಿಟ್ನಾಳ
Mass marriages benefit the poor: MLA K. Raghavendra Hitnal
ಕೊಪ್ಪಳ 30: ಸಾಮೂಹಿಕ ವಿವಾಹಗಳು ಏರಿ್ಡಸುವುದರಿಂದ ಬಡವರಿಗೆ, ಆರ್ಥಿಕವಾಗಿ ಸದೃಢವಿಲ್ಲದವರಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದರು.ಅವರು ರವಿವಾರದಂದು ಸರ್ದಾರ್ ಗಲ್ಲಿಯ ಮುಸ್ಲಿಂ ಪಿಂಜಾರ್ ಪಂಚ ಕಮಿಟಿಯವರು ಹಜರತ್ ಮೆಹಬೂಬ್ ಸುಬ್ಹಾನಿ ರವರ ಪವಿತ್ರ ಗ್ಯಾರವಿ ಶರೀಫ್ ಆಚರಣೆಯ ನಿಮಿತ್ತ ಏರಿ್ಡಸಿದ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಸತತವಾಗಿ 21 ವರ್ಷದಿಂದ ಪ್ರತಿ ವರ್ಷ ಬಡ ಮುಸ್ಲಿಂ ಜೋಡಿಗಳ ಉಚಿತ ವಿವಾಹಗಳನ್ನು ನಡೆಸಿಕೊಂಡು ಬಂದಿದ್ದು ಸಂತೋಷವನಿಸುತ್ತದೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ,ಸಚಿವರಾದ ಜಮೀರ್ ಅಹ್ಮದ್ ಖಾನ್ ಸಾಕಷ್ಟು ಅನುದಾನವನ್ನು ನೀಡಿದ್ದಾರೆ .
ಈ ವರ್ಷ ಸುಮಾರು 20 ಬಡ ಜೋಡಿಗಳು ಹೆಸರುಗಳನ್ನ ನೋಂದಾಯಿಸಿದ್ದು, ನೂತನ ವಧು ವರರಿಗೆ ಶುಭ ಕೋರುತ್ತೇನೆ ಎಂದರು.ಜೆಡಿಎಸ್ ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಮಾತನಾಡಿ ಇಂದಿನ ಅತ್ಯಂತ ದುಬಾರಿ ಯುಗದಲ್ಲಿ ಸಮಾಜದಲ್ಲಿರುವ ಬಡ ಮುಸ್ಲಿಂ ಜೋಡಿಗಳಿಗೆ ಸಾಮೂಹಿಕ ವಿವಾಹಗಳನ್ನು ಮಾಡುವುದರ ಮೂಲಕ ಅವರ ದೊಡ್ಡ ಭಾರವನ್ನ ಕಡಿಮೆ ಮಾಡಲು ಸಂಸ್ಥೆಯವರು ಕಾರ್ಯ ಶ್ಲಾಘನೀಯವಾಗಿದೆ ಎಂದರು.ಈ ಎಲ್ಲಾ ನೂತನ ಜೋಡಿಗಳಿಗೆ ಬಂಗಾರದ ತಾಳಿಯನ್ನು ಕೆಪಿಸಿಸಿ ಸಂಯೋಜಕ ಡಾ. ಕೆ.ಎಂ.ಸೈಯದ್ ನೀಡುತ್ತಾರೆ ಅವರನ್ನು ಸಂಘಟಕರು ಅಭಿನಂದಿಸಿದರು.ಇದೇ ಸಂದರ್ಭದಲ್ಲಿ ಈ ಪವಿತ್ರ ಗ್ಯಾರವಿ ನಿಮಿತ್ತ ಬೃಹತ್ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಪ್ರಮಾಣ ಪತ್ರವನ್ನು ವಿತರಿಸಿದರು.
ಪ್ರಾಸ್ತಾವಿಕವಾಗಿ ಕಾಸಿಂ ಸರ್ದಾರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಗುಪ್ತ, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ, ಕೆಪಿಸಿಸಿ ಸಂಯೋಜಕ ಡಾ. ಕೆ.ಎಂ. ಸೈಯದ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕಾಟನ್ ಪಾಷಾ, ಸಮಾಜದ ಗುರುಗಳು, ನದಾಫ್ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಫ್. ಮುದ್ದಾಬಳ್ಳಿ,ಕೊಪ್ಪಳ ತಾಲೂಕ ನದಾಫ್ ಸಂಘದ ಅಧ್ಯಕ್ಷರಾದ ಅಸ್ಮನ್ ಸಾಬ್, ಉಪಾಧ್ಯಕ್ಷರಾದ ಫಕ್ರುಸಾಬ್, ಮಹಿಳಾ ಜಿಲ್ಲಾ ಅಧ್ಯಕ್ಷರಾದ ಸಲೀಂ ಜಾನ್, ಮುಸ್ಲಿಂ ಪಿಂಜಾರ್ ಪಂಚ ಕಮಿಟಿಯ ಗೌರವ ಅಧ್ಯಕ್ಷರು ಹಾಗೂ ನದಾಫ್ ಪಿಂಜಾರ್ ಸಂಘದ ರಾಜ್ಯ ಕೋಶಾಧಿಕಾರಿ ಶಹಾಬುದ್ದೀನ್ ಸಾಬ್ ನೂರಬಾಷ್, ಪಂಚ ಕಮಿಟಿಯ ಅಧ್ಯಕ್ಷರಾದ ಖಾದರ್ ಸಾಬ್ ಕುದುರಿಮೋತಿ, ನಗರಸಭೆ ಮಾಜಿ ಸದಸ್ಯ, ಪಂಚ ಕಮಿಟಿಯ ಕಾರ್ಯದರ್ಶಿ ಮೆಹಬೂಬ್ ಬಾಷಾ ಮಾನ್ವಿ, ಖಜಾಂಚಿಯಾದ ಮೀರಾಸಾಬ್, ಝಂಡಾ ಕಟ್ಟಿ ಅಧ್ಯಕ್ಷ ಮರ್ದಾನ್ ಸಾಬ್ ಲುಂಗಿ, ಪಂಚ ಕಮಿಟಿಯ ಇತರ ಸದಸ್ಯರಾದ ರಿಯಾಜ್ ಕುದ್ರಿಮೋತಿ, ರಶೀದ್ ನೀರಲಗಿ, ಅಬ್ದುಲ್ ರೆಹಮಾನ್, ವಾಸಿಮ್, ಇಸ್ಮಾಯಿಲ್ ಸಾಬ್, ನಬಿಸಾಬ್ , ಕುತ್ತುಬುದ್ದೀನ್, ಖಾಜಾಸಾಬ್ ನಗರ ಘಟಕ ಕಾರ್ಯದರ್ಶಿ ಬಾಬುಸಾಬ, ಅಮೀರ್ ಹಮ್ಜಾ ನಿವೃತ್ತ ಶಿಕ್ಷಕರು, ರಮಜಾನ್ ಸಾಬ್ ಸೇರಿದಂತೆ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 