ಸಾಮೂಹಿಕ ವಿವಾಹದಿಂದ ಸಾಲ ಮಾಡುವುದು ತಪ್ಪುತ್ತದೆ: ಚನ್ನಬಸಯ್ಯ ಶಾಸ್ತ್ರೀ
Mass marriage avoids debt: Channabasaiah Shastri
ಸಾಮೂಹಿಕ ವಿವಾಹದಿಂದ ಸಾಲ ಮಾಡುವುದು ತಪ್ಪುತ್ತದೆ: ಚನ್ನಬಸಯ್ಯ ಶಾಸ್ತ್ರೀ
ಬ್ಯಾಡಗಿ 07: ಸಾಮೂಹಿಕ ವಿವಾಹ ಮಾಡಿಕೊಳ್ಳುವದರಿಂದ ಅನಗತ್ಯ ಸಾಲ ಮಾಡುವದು ತಪ್ಪುತ್ತದೆ ಎಂದು ಪಟ್ಟಣದ ಪಾಠಶಾಲೆಯ ಚನ್ನಬಸಯ್ಯ ಶಾಸ್ತ್ರೀಗಳು ಹೇಳಿದರು. ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಾಲಯಗಳ 70 ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ 7 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ 45 ವರ್ಷಗಳಿಂದ ಜಾತ್ರಾ ಸಮಿತಿಯವರು ಉಚಿತ ಸಾಮೂಹಿಕ ವಿವಾಹ ಏರಿ್ಡಸುತ್ತ ಬಂದಿದ್ದಾರೆ ಎಂದರು. ವೀರಯ್ಯ್ ಶಾಸ್ತ್ರೀಗಳು ಮಾತನಾಡಿ ದಂಪತಿಗಳಲ್ಲಿ ನಂಬಿಕೆ ವಿಶ್ವಾಸ ಹಾಗೂ ಪ್ರೀತಿ ಇದ್ದರೆ ಜೀವನ ಸುಖಮಯ ಆಗುತ್ತದೆ ಎಂದರು. ವರರು ವರದಕ್ಷಿಣೆ ಅಸೆ ಮಾಡದೇ ದುಡಿದು ಹಣ ಗಳಿಸಿ ಕುಟುಂಬದಲ್ಲಿ ಸಂತೋಷ ತರಬೇಕೆ ಹೊರತು ದುಷ್ಟ ಚಟಗಳಿಗೆ ಬಲಿಯಾಗಬಾರದು ಎಂದರು. ಮಹಿಳಾ ಮತ್ತು ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಚಂದ್ರಶೇಖರ ಅವರು ಮಾತನಾಡಿ ಕನ್ಯಾ ಹಾಗೂ ವರನಿಗೆ ಕಾನೂನು ಪ್ರಕಾರ ವಯಸ್ಸಾದಾಗ ಮಾತ್ರ ವಿವಾಹ ಮಾಡಲು ಅವಕಾಶಗಳು ಇದ್ದು ವಯಸ್ಸು ಕಡಿಮೆ ಇದ್ದಾಗ ವಿವಾಹ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವದು ಎಂದು ಹೇಳಿದರು. ಆಯಾ ಪ್ರದೇಶದ ಅಂಗನವಾಡಿ ಶಿಕ್ಷಕಿಯರು ಮದುವೆ ಆಗುವಾಗ ವಯಸ್ಸು ಪರೀಶೀಲನೆ ಮಾಡುವ ಅಗತ್ಯವಿದೆ ಎಂದರು. ಜಾತ್ರಾ ಸಮಿತಿಯ ಅಧ್ಯಕ್ಷ ಮಲ್ಲಣ್ಣ ಹುಚಗೊಂಡರ. ಉಪಾಧ್ಯಕ್ಷ ಗಂಗಣ್ಣ ತಿಳವಳ್ಳಿ. ಗೌರವ ಕಾರ್ಯದರ್ಶಿ ಮಾಲತೇಶ ಅರಳಿಮಟ್ಟಿ. ಖಜಾಂಚಿ ಶೆಂಬಣ್ಣ ಅಂಗಡಿ. ಸದಸ್ಯರಾದ ಶಿವಣ್ಣ ಶೆಟ್ಟರ. ಶಿವಣ್ಣ ಬಣಕಾರ ಹಾಗೂ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 