ಮರುಳಸಿದ್ದೇಶ್ವರ ರಥೋತ್ಸವಕ್ಕೆ ಅದ್ದೂರಿ ಚಾಲನೆ
Marulasiddheshwara Chariot Festival kicks off with grand opening
ಇಂಡಿ 20: ತಾಲೂಕಿನ ಸುಕ್ಷೇತ್ರ ತಡವಲಗಾ ( ಜೋಡಗುಡಿ) ಗ್ರಾಮದ ಮರುಳಸಿದ್ದೇಶ್ವರ ನೂತನ ರಥೋತ್ಸವ ಸೋಮವಾರ ಕಾಶಿ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ನೂತನ ರಥಕ್ಕೆ ಪೂಜೆ ಸಲ್ಲಿಸಿ ಅವರೇ ರಥದ ಮೇಲೆ ಕುಳಿತು ನೂತನ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತರ ಜಯಕಾರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಬೆಳಿಗ್ಗೆ ಎಂಟು ಗಂಟೆಗೆ ನೂತನ ರಥಕ್ಕೆ ಉಜ್ಜೈನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಧ್ಯಾಹ್ನ ಮೂರು ಘಂಟೆ ಇಂಡಿ ತಾಲೂಕಿನ ಹೀರೆಬೇವನೂರ ಗ್ರಾಮದಿಂದ ನೂತನ ರಥಕ್ಕೆ ಕಳಸವನ್ನು ಹಾಗೂ ತಡವಲಗಾ ಗ್ರಾಮದ ಮೂಲ ದೇವಾಲಯದಿಂದ ಮರುಳಸಿದ್ದೇಶ್ವರ ಪಲ್ಲಕ್ಕಿ ಉತ್ಸವ ವಾದ್ಯ ವೃಂದ ಸಂಗೀತ ನೃತ್ಯ ವೈಭವದೊಂದಿಗೆ ಮೆರವಣಿಗೆ ಮೂಲಕ ಜೋಡಗುಡಿ ತಲುಪಿತು. ನಂತರ ನೂತನ ರಥೋತ್ಸವಕ್ಕೆ ಚಾಲನೆ ದೊರೆಯಿತು.
ತಡವಲಗಾ ಗ್ರಾಮದ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು ಜಿಗಜಿಣಗಿಯ ಮುಪ್ಪಿನಾರ್ಯ ಶಿವಾಚಾರ್ಯರು ಶಿವಾನಂದಯ್ಯ ಶಾಸ್ತ್ರಿಗಳು ಗ್ರಾಮದ ಹಿರಿಯರು ಬಾಬುಸಾವುಕಾರ ಮೇತ್ರಿ, ಬಸವರಾಜ ಇಂಡಿ, ಚಂದ್ರಶೇಖರ ರೂಗಿ, ತಮ್ಮಣ್ಣ ಪೂಜಾರಿ, ಅಣ್ಣಾರಾಯ ಮದರಿ, ಅಶೋಕ ಮಿರ್ಜಿ, ಮಳಸಿದ್ದಪ್ಪ ಖಸ್ಕಿ, ಅಪ್ಪು ಇಂಡಿ, ಮಲ್ಕಪ್ಪ ತೆನ್ನಹಳ್ಳಿ, ಶ್ರೀಶೈಲ ಕಟಾಯಿ, ಮಲ್ಲಿಕಾರ್ಜುನ ಇಂಡಿ, ಕುತಬುದ್ದಿನ್ ಬಾಗವಾನ, ಮಲ್ಲಿಕಾರ್ಜುನ ಇಂಡಿ, ವಿಠೋಬಾ ಖಸ್ಕಿ, ಜೇಟ್ಟಪ ಪಂತೋಜಿ, ಮಲ್ಲಿಕಾರ್ಜುನ ನೇಂದ್ಯಾಳ, ಸಾಹೇಬಗೌಡ ಇಂಡಿ, ಬಸವರಾಜ ಚವಡಿಹಾಳ, ಹಣಮಂತ ಅಗಸಿಮನಿ, ರಾಜು ಮಿರ್ಜಿ ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 