ಮರಡಿಬಸವೇಶ್ವರ ಭವನ ಎಲ್ಲ ಸಮುದಾಯ ಉಪಯುಕ್ತವಾಗಬೇಕು

ಮರಡಿಬಸವೇಶ್ವರ ಭವನ ಎಲ್ಲ ಸಮುದಾಯ ಉಪಯುಕ್ತವಾಗಬೇಕು   Maradi Basaveshwara Bhavan should be useful to all communities.

ಮರಡಿಬಸವೇಶ್ವರ ಭವನ ಎಲ್ಲ ಸಮುದಾಯ ಉಪಯುಕ್ತವಾಗಬೇಕು   

ಬ್ಯಾಡಗಿ 11: ಮರಡಿಬಸವೇಶ್ವರ ದೇವರ ಸಮುದಾಯ ಭವನ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲ ಸಮುದಾಯಕ್ಕೂ ಉಪಯೋಗ ಆಗುವಂತಾಗಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ಅವರು ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ  ಶ್ರೀಮರಡಿಬಸವೇಶ್ವರ ದೇವಸ್ಥಾನದ ಸಮುದಾಯ ಭವನದ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.  

ಈ ಭಾಗದ ಸುಪ್ರಸಿದ್ಧ ದೇವರಾದ ಶ್ರೀ ಮರಡಿಬಸವೇಶ್ವರ ದೇವರ ಭಕ್ತರು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯ ಭವನವವು ಯಾವುದೇ ಪಕ್ಷದ್ದಲ್ಲ. ಇದರ ನಿರ್ಮಾಣದಲ್ಲಿ ಹಿಂದಿನ ಶಾಸಕರ ಶ್ರಮವು ಇದೆ.  2023 ರಲ್ಲಿ ಈ ಸಮುದಾಯ ಭವನಕ್ಕೆ ಭೂಮಿಪೂಜೆ ನಡೆದಿದ್ದು. ಅದರ ಉದ್ಘಾಟನೆ ಇಂದು ಈಗ ನೇರವೇರಿಸಿರುವುದಕ್ಕೆ ಹರ್ಷವಾಗುತ್ತಿದೆ’ ಎಂದು ಹೇಳಿದರು. ತಾಲೂಕಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಾನಪ್ಪ ಚೂರಿ ಮಾತನಾಡಿ ಎಲ್ಲಾ ಸಮಾಜದ ಅಭಿವೃದ್ಧಿಗಾಗಿ ನಿರ್ಮಾಣಗೊಳ್ಳುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮದುವೆ ಸಮಾರಂಭಗಳಿಗೆ ಅದರಲ್ಲೂ ಬಡ ಕುಟುಂಬಗಳಿಗೆ ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.  

ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುಶೀಲವ್ವ ಬನ್ನಿಹಟ್ಟಿ, ಉಪಾಧ್ಯಕ್ಷ ನಾಗಪ್ಪ ಚನ್ನಳ್ಳಿ, ತಾಲೂಕ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಶಂಭಣ್ಣ ಪಾಟೀಲ, ಕಾಗಿನೆಲೆ ಕಾಂಗ್ರೇಸ್ ಪಕ್ಷದ ಶಿವನಗೌಡ ವಿರನಗೌಡ, ಚನ್ನಬಸಪ್ಪ ಹುಲ್ಲತ್ತಿ, ಬೀರಣ್ಣ ಬಣಕಾರ, ಜಗದೀಶ್ ಕೆರಕರ, ಗೌರಮ್ಮ ಕೋಣನವರ, ಲಲೀತವ್ವ ರಂಗಾರಿ, ಪ್ರೇಮಾ ಪೂಜಾರ, ಶರಣಬಸಪ್ಪ ಚಿಕ್ಕಣಜಿ, ಲಿಂಗರಾಜ ರಂಗಾರಿ, ತಾಲೂಕಾ ಹಿಂದುಳಿದ ಇಲಾಖಾಧಿಕಾರಿ ಸಿ.ಬಿ. ಪ್ರಸಾದಿಮಠ, ನಿರ್ಮಿತಿ  ಕೇಂದ್ರದ ಇಂಜೀನೀಯರ್ ಎಚ್‌. ಡಿ. ಶಾಂತಕುಮಾರ ಇದ್ದರು. ನ್ಯಾಯವಾದಿ ಡಿ.ಎಚ್‌.ಬುಡ್ಡನಗೌಡ್ರ ಸ್ವಾಗತಿಸಿ ವಂದಿಸಿದರು.