ಮನೋಹರ್ ತಹಸಿಲ್ದಾರ್ ಉದಾಸಿ ಹಾನಗಲ್ ಅಭಿವೃದ್ಧಿಗೆ ಪೈಪೋಟಿ ನಡೆಸಿದರು: ಬಸವರಾಜ ಬೊಮ್ಮಾಯಿ
Manohar Tehsildar competed for the development of Udasi Hanagal: Basavaraj Bommai
ಹಾವೇರಿ ( ಹಾನಗಲ್): ರಾಜ್ಯದಲ್ಲಿ ಅಧಿಕಾರಕ್ಕಾಗಿ ಕುರ್ಚಿಯಲ್ಲಿ ಕೂಡುವುದೇ ಸಾಧನೆಯಾಗಿದೆ. ಕುರ್ಚಿಯಲ್ಲಿ ಕೂಡಿಸಿದ ಯಜಮಾನರು ಜನರ ಬಗ್ಗೆ ಯೋಚನೆಯನ್ನೇ ಮಾಡುತ್ತಿಲ್ಲ. ಅಧಿಕಾರದ ದಾಹದಲ್ಲಿ ರಾಜ್ಯದ ಜನರನ್ನು ಅನಾಥ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿದರು.ಇಂದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಅಕ್ಕಿವಳ್ಳಿ ಗ್ರಾಮದಲ್ಲಿ ಹಾನಗಲ್ಲ ತಾಲೂಕಿನ ಮನೋಹರ ತಹಶೀಲ್ದಾರ ಅಭಿಮಾನಿ ಬಳಗದ ವತಿಯಿಂದ ಏರಿ್ಡಸಿದ ದಿವಂಗತ ಮನೋಹರ ತಹಶಿಲ್ದಾರ ಅವರ ಪ್ರಥಮ ಪುಣ್ಯಸ್ಮರಣೆ ಹಾಗೂ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಮನೋಹರ್ ತಹಸೀಲ್ದಾರ ಅವರ ವ್ಯಕ್ತಿತ್ವ ತಾವೆಲ್ಲ ಕಂಡವರಾಗಿದ್ದೀರಿ, ಅವರು ಮುಗ್ದರು ಅಂತ ಗುರುಗಳು ಹೇಳಿದರು.
ನಾವೆಲ್ಲ ಹುಟ್ಟಿದಾಗ ಮಕ್ಕಳಿದ್ದಾಗ ಮುಖ ಅಂದವಾಗಿರುತ್ತದೆ. ಈಗ ಅಕ್ರಾಳ ವಿಕ್ರಾಳ ಇರುತ್ತದೆ. ಹೃದಯ ಸ್ವಚ್ಚಂದವಾಗೊದ್ದಾಗ ಮುಖ ಚಂದ ಇರುತ್ತದೆ. ಈಗ ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವುದು ಬಹಳ ಕಷ್ಟ ರಾಜಕಾರಣಿಗಳು ನಡೆದುಕೊಳ್ಳುವುದು ಬಹಳ ಕಷ್ಟ. ಆದರೆ, ಉದಾಸಿಯವರಾಗಲಿ ತಹಸೀಲ್ದಾರ ಆಗಲಿ ಜನರನ್ನು ಓಲೈಸಲು ಸುಳ್ಳು ಹೇಳದವರು. ಶಿಗ್ಗಾವಿ ಸವಣೂರಿನಲ್ಲಿ ಒಂದು ಗಾದೆ ಮಾತಿದೆ. ಕೊಡ್ತಿನಿ, ಕೊಡ್ತಸ್ತೀನಿ, ಕೊಡೊನ ತೋರಸ್ತೀನಿ ಅಂತ , ಇವರಿಬ್ಬರು ನೇರವಾಗಿ ಮಾತಗಳಿಂದ ಜನರನ್ನು ಉಳಿಸಿಕೊಂಡಿದ್ದರು. ಇಬ್ಬರ ಸ್ವಭಾವ ಒಂದೇ ಆಗಿದ್ದರಿಂದ ಒಮ್ಮೆ ಅವರು ಮತ್ತೊಮ್ಮೆ ಇವರು ಆರಿಸಿ ಬರುತ್ತಿದ್ದರು ಎಂದು ಹೇಳಿದರು.ಈ ತಾಲೂಕು ಇವರಿಬ್ಬರಿಂದ ಅಭಿವೃದಿ ಆಗಿದೆ. ಉದಾಸಿ ಸಚಿವರಾದ ಮೇಲೆ ರಸ್ತೆಗಳ ಅಭಿವೃದ್ಧಿ ಆದವು.
ತಹಸಿಲ್ದಾರ ಅವರು ಹಿಂದುಳಿದ ವರ್ಗಕ್ಕೆ ಧ್ವನಿ ಕೊಟ್ಟರು ಅವರು ಮಾಡಿರುವ ಕೆಲಸದಿಂದ ಶಿವಮೊಗ್ಗ ಸಾಗರ, ಸೊರಬ,ಹಾನಗಲ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗಟ್ಡಿ ಬುನಾದಿ ಹಾಕಿದ್ದು ತಹಸಿಲ್ದಾರ ಅವರು, ಬಡವರ ಬಗ್ಗೆ ಕಾಳಜಿ ಇದ್ದಿದ್ದರಿಂದ ಈ ಕೆಲಸ ಮಾಡಿದ್ದಾರೆ. ತಹಸಿಲ್ದಾರ ಅವರ ಮಕ್ಕಳು ತಂದೆಗೆ ತಕ್ಕ ಕೆಲಸ ಮಾಡಿದ್ದೀರಿ ಸದಾ ಕಾಲ ಅವರನ್ನು ನೆನೆಯುವ ಕೆಲಸ ಮಾಡಿದ್ದ ಕ್ಕೆ ಧನ್ಯವಾದ ಎಂದು ಹೇಳಿದರು.ಇದನ್ನು ನೊಡಿದಾಗ ಬದುಕು ಇಷ್ಟೇನಾ ಅಂತ ಅನಿಸುತ್ತದೆ. ಎಷ್ಟೇ ಆರೋಗ್ಯ ಸಮಸ್ಯೆ ಇದ್ದರೂ ಸಕ್ರೀಯರಾಗಿ ಕಾರ್ಯ ನಿರ್ವಹಿಸಿದರು. ತಾಯಿ ಗರ್ಭದಿಂದ ಭೂತಾಯಿ ಗರ್ಭದವರೆಗೆ ಇರುವುದು ಜೀವನ ಇದರ ನಡುವೆ ಬದುಕುವ ಅವಕಾಶ ಸಿಕ್ಕಾಗ ನಮಗಾಗಿ ಬದುಕುವುದು ಸಾಮಾನ್ಯ ಆದರೆ ಇನ್ನೊಬ್ಬರಿಗಾಗಿ ಬದುಕುವುದು ಮನುಷ್ಯನ ಧರ್ಮ. ತಹಸಿಲ್ದಾರ ಅವರ ಜೀವನ ನೋಡಿದಾಗ ನಾನು ಐದು ಸಿಎಂ ಗಳ ಜೊತೆ ಕೆಲಸ ಮಾಡಿದ್ದೇನೆ. ಬಹುತೇಕ ರಾಜಕಾರಣಿಗಳ ಜೊತೆ ಸಂಬಂಧ ಇದೆ. ಆದರೆ, ಮನೋಹರ್ ತಹಸಿಲ್ದಾರ ಅವರು ಶಾಸಕರಾಗುವ ಮುಂಚೆ ಏನಿತ್ತೊ ಅವರ ಕೊನೆ ದಿನಗಳವರೆಗೂ ಅವರ ಆಸ್ತಿ ಅಷ್ಟೆ ಇದೆ. ಜನರೇ ಅವರ ದೊಡ್ಡ ಆಸ್ತಿಯಾಗಿದ್ದರು.
ರಾಜಕಾರಣದಲ್ಲಿ ಇದು ಬಹಳ ವಿರಳ. ನಾವೆಲ್ಲ ಆಸ್ತಿ ಅಂತಸ್ಥಿನ ಬಗ್ಗೆ ತಲೆ ಕೆಡೆಸಿಕೊಳ್ಳುತ್ತೇವೆ. ನಾವು ಗಳಸಿರುವ ಪ್ರೀತಿ ವಿಶ್ವಾಸ ಕೊನೆವರೆಗೂ ಉಳಿಯುತ್ತದೆ ಎಂದು ಹೇಳಿದರು.*ಬದ್ದತೆಯಿಂದ ಕೆಲಸ*ಸಾಕ್ರೆಟಿಸ್ ವಿಚಾರಧಾರೆ ಹೆಂಗಿತ್ತು ಅಂದರೆ ಎಲ್ಲ ವಿಚಾರಗಳ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ರೊಮ್ ನಲ್ಲಿ ಚರ್ಚ್ ಅಧಿಕಾರ ನಡೆಸುತ್ತಿತ್ತು ಚರ್ಚ್ ಗಳಿಗೆ ಹುಟ್ಟಿಸುವ ಅಧಿಕಾರ ಇಲ್ಲ ಹೀಗಿದ್ದಾಗ ಮರಣದಂಡನೆ ಕೊಡುವ ಅಧಿಕಾರ ಇಲ್ಲ ಎಂದು ಹೇಳಿದ ಚರ್ಚ್ ಜಡ್ಜ್ ಗಳ ಮೂಲಕ ವಿಚಾರಣೆ ನಡೆಸಿ ಮರಣ ದಂಡನೆ ವಿಧಿಸುತ್ತಾರೆ. ಆದರೂ ಆತ ಬಹಳ ಜನಪ್ರೀಯಗಿರುತ್ತಾನೆ ಅವನನ್ನು ಸ್ನೇಹಿತರ ಮೂಲಕ ಮಾತುಕತೆಗೆ ಕರೆದು ಅವರನ್ನು ಚರ್ಚ ನ ಅಧಿಕಾರ ಒಪ್ಪಿಕೊಳ್ಳುವಂತೆ ಹೇಳುತ್ತಾರೆ. ಅದಕ್ಕೆ ಸಾಕ್ರೆಟಿಸ್ ನಾನು ಅದನ್ನು ಒಪ್ಪಿದರೆ ನನ್ನ ಸಿದ್ದಾಂತ ಸಾಯುತ್ತದೆ ಎಂದು ಸಾಕ್ರೆಟಿಸ್ ಅದನ್ನು ಒಪ್ಪುವುದಿಲ್ಲ. ಬಹಳಷ್ಟು ಜನರು ಸ್ಥಾನಿಕವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ತಹಸಿಲ್ದಾರ್, ಉದಾಸಿಯವರು ಏನು ಮಾಡಿದ್ದಾರೆ ನೋಡಬೇಕು.
ಮಾರನಬಿಡಾ ಏತ ನೀರಾವರಿ ಸೇರಿದಂತೆ ನಾಲ್ಕು ನೀರಾವರಿ ಯೋಜನೆ ಜಾರಿಯಾಗಿದೆ. ಯಡಿಯೂರ್ಪ ಅವರು ಸಿಎಂ ಆಗಿದ್ದರು ಅವರನ್ನು ಎರಡು ನೀರಾವರಿ ಯೋಜನೆಗಳಿಗೆ ಒಪ್ಪಿಗೆ ಪಡೆದಿದ್ದೇವು ಉದಾಸಿಯವರು ಬದ್ದತೆಯಿಂದ ಕೆಲಸ ಮಾಡುತ್ತಿದ್ದರು. ತಹಸಿಲ್ದಾರ ಅವರು ಅಧಿಕಾರದಲ್ಲಿಲ್ಲದಿದ್ದಾಗ ಕ್ಷೇತ್ರದ ನೀರಾವರಿ, ಅಭಿವೃದ್ಧಿ ಕೆಲಸಕ್ಕೆ ಬಂದಿದ್ದರು ಅವರ ಕೆಲಸಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕು. ಇದೇ ಮಣ್ಣಿನಲ್ಲಿ ಹುಟ್ಟಿರುವ ನಾಯಕರು ಅನೇಕ ಕೆಲಸ ಮಾಡಿರುತ್ತಾರೆ. ನಾವು ಹಾನಗಲ್ ತಾಲೂಕಿನ ಇತಿಹಾಸವನ್ನು ಇವರಿಬ್ಬರನ್ನು ಬಿಟ್ಟು ಬರೆಯಲು ಸಾಧ್ಯವಿಲ್ಲ. ಇಬ್ಬರ ನಡುವೆ ಪೈಪೋಟಿ ಇದ್ದರೂ ವಯಕ್ತಿಕ ನಿಂದನೆ ಮಾಡುತ್ತಿರಲಿಲ್ಲ. ಇವತ್ತಿನ ರಾಜಕಾರಣಿಗಳು ಅದನ್ನು ಅನುಸರಿವುದು ಅಗತ್ಯ ಸ್ಥಾನ ಯಾರಿಗೂ ಶಾಸ್ವತ ಅಲ್ಲ. ಪ್ರತಿ ದಿನಾನೂ ಇದೇ ಕೊನೆ ದಿನ ಅಂತ ಕೆಲಸ ಮಾಡಬೇಕು ಎಂದು ಹೇಳಿದರು.*ಕುರ್ಚಿಯಲ್ಲಿ ಕೂಡುವುದೇ ಸಾಧನೆ*ಈಗೆಲ್ಲಾ ಒಬ್ಬರು ಎರಡೂವರೆ ವರ್ಷ ಅಂತಾರೆ ಇನ್ನೊಬ್ಬರು ಇಲ್ಲಾ ಅಂತಾರೆ. ಕುರ್ಚಿಯಲ್ಲಿ ಕೂಡುವುದೇ ಸಾದನೆಯಾಗಿದೆ. ಕುರ್ಚಿಯಲ್ಲಿ ಕೂಡಿಸಿದ ಯಜಮಾನರು ಜನರ ಬಗ್ಗೆ ಯೋಚನೆಯನ್ನೆ ಮಾಡುತ್ತಿಲ್ಲ.
ಕರ್ಚಿ ಉಳಿಸಿಕೊಳ್ಳುವುದಕ್ಕೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಅವರು ಐದ ವರ್ಷ ಸಿಎಂ ಆಗಿರುತ್ತಾರೆ ಎಂದು ಸಿಎಂ ಆಗಲು ಪ್ರಯತ್ನಿಸುತ್ತದ್ದಾರೆ ಒಬ್ಬ ಮುಖ್ಯಮಂತ್ರಿ ಪ್ರತಿ ದಿನ ನಾನು ಸಿಎಂ ಅಂತ ಹೇಳಿಕೊಳ್ಳುವ ಪರಿಸ್ತಿತಿ ಬಂದಿದೆ. ಅಧಿಕಾರದ ದಾಹದಲ್ಲಿ ರಾಜ್ಯದ ಜನರನ್ನು ಅನಾಥ ಮಾಡುತ್ತಿದ್ದಾರೆ ಎಂದು ವಗ್ದಾಳಿ ನಡೆಸಿದರು.*ಅಭಿವೃದ್ದಿಗೆ ಪೈಪೋಟಿ*ಹಾನಗಲ್ ತಾಲೂಕಿನಲ್ಲಿ ಉದಾಸಿ, ತಹಸಿಲ್ದಾರ ತಾಲೂಕಿನ ಅಭಿವೃದ್ಧಿ ಗಾಗಿ ಪೈಪೋಟಿ ನಡೆಸಿದ್ದರು. ಇವರು ಜನರ ಕೆಲಸಕ್ಕಾಗಿ ಪೈಪೋಟಿ ನಡೆಸಿದ್ದರು ಕೆಲವು ಮೂಲಭೂತ ಆದರ್ಶ ಉಳಿಸಿಕೊಳ್ಳಬೆಕೆಂದರೆ ಇವರಿಬ್ಬರ ಜೀವನ ಅರಿತುಕೊಳ್ಳಬೇಕಿದೆ. ಉದಾಸಿಯವರಿಂದ ತಹಸಿಲ್ದಾರ್ ವರ್ಚಸ್ಸಿದೆ. ತಹಸಿಲ್ದಾರಿಂದ ಉದಾಸಿಯವರ ವರ್ಚಸಿದೆ. ಇಬ್ಬರ ಅಭಿಮಾನಿಗಳು ಸೇರಿ ಅವರ ಕಾರ್ಯಕ್ರಮ ಮಾಡುತ್ತಾರೆ ಎಂದು ಅವರು ಅಂದುಕೊಂಡಿರಲಿಲ್ಲ ಈ ತಾಲೂಕಿನ ಅಭಿವೃದ್ಧಿ ಮಾಡಲಿ ಸ್ಚಚ್ಚ ರಾಜಕಾರಣ ಮಾಡಲು ಇಬ್ಬರ ಅಭಿಮಾನಿಗಳು ಸೇರಿದರೆ ಇಬ್ಬರ ಆದರ್ಶ ತೆಗೆದುಕೊಂಡು ಮುಂದೆ ಹೋದರೆ ಯಾರೂ ಕೂಡ ನಮಗೆ ಪೈಪೋಟಿ ಆಗುವುದಿಲ್ಲ. ಹಾನಗಲ್ ತಾಲೂಕಿನ ಜನರು ಬಿದ್ದಿವಂತರಿದ್ದಾರೆ. ಅವರ. ಆಶೋತ್ತರ ಈಡೇರಿಸಲು ನಿಮ್ಮ ಜೊತೆಗೆ ನಾನು ಇರುತ್ತೇನೆ.
ತಹಸಿಲ್ದಾರ್ ಅವರ ಉದಾಸಿ ಅವರ ಸಂಭಂಧ ನಮಗೆ ಆದರ್ಶ ಎಂದು ಹೇಳಿದರು. ಈ ಸಂಧರ್ಭದಲ್ಲಿ ಶ್ರೀ ಮ.ನಿ.ಪ್ರ ಶಿವಯೋಗಿಶ್ವರ ಮಹಾಸ್ವಾಮಿಗಳು, ಗುರುಪಾದೇಶ್ವರ ಮಠ, ಬಮ್ಮನಹಳ್ಳಿ, ಶ್ರೀ ಸದ್ಗುರು ಶಂಕರಾನಂದ ಮಹಾಸ್ವಾಮಿಗಳು, ಸಿದ್ಧಾರೂಢ ಮಠ, ಹೋತನಹಳ್ಳಿ, ಶ್ರೀ ಮ.ನಿ.ಪ್ರ ಶಿವಬಸವ ಮಹಾಸ್ವಾಮಿಗಳು, ವಿರಕ್ತಮಠ ಅಕ್ಕಿ ಆಲೂರ, ಶ್ರೀ ಷ.ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಮುತ್ತಿನಕಂತಿಮಠ, ಅಕ್ಕಿಆಲೂರ, ಶ್ರೀ ಮ.ಘ.ಚ ಗುರುಮಹೇಶ್ವರ ಮಹಾಸ್ವಾಮಿಗಳು, ಗುರುನಂಜೇಶ್ವರ ಮಠ, ಕೂಡಲ ಶ್ರೀಗಳವರು ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಚಿವರಾದ ಶ್ರೀ ಬಿ.ಸಿ ಪಾಟೀಲ್, ಮಾಜಿ ಶಾಸಕರುಗಳಾದ ಶ್ರೀ ಶಿವರಾಜ ಸಜ್ಜನ, ಶ್ರೀ ಅರುಣಕುಮಾರ ಪೂಜಾರ, ಮುಖಂಡರಾದ ಶ್ರೀ ರಾಘವೇಂದ್ರ ತಹಶೀಲ್ದಾರ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 