ಮೇಯಲು ಬಂದ ಗೋವಿನ ಕಾಲು ಕಡಿದು ಹತ್ಯೆಗೈದ ವ್ಯಕ್ತಿಗೆ ಗಡಿಪಾರು ಮಾಡಲು ಒತ್ತಾಯ
Man who killed cow by cutting off its leg after it came to graze urged to be deported
ಕೊಪ್ಪಳ 03: ಜಿಲ್ಲೆಯ ಯಲಬುರ್ಗಾ ತಾಲೂಕನ ನಿಂಗಲಬಂಡಿ ಗ್ರಾಮದ ರಮೇಶಪ್ಪ ಹಡಪದ ಸಾಽಽನಿಂಗಲಬಂಡಿ ಇವರು ನಮ್ಮ ಮಾಟರಂಗಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನ ಆಕಳು (ದೇವರಿಗೆ ಬಿಟ್ಟಿದ್ದು.) ಇವರ ಹೊಲದಲ್ಲಿ ಆಗಾಗ ಇದು ಮೇಯಲು ಬರುತ್ತದೆ ಎಂಬ ಒಂದೇ ಕಾರಣಕ್ಕೆ ಸದರಿಯವರು ಸದರಿ ಆಕಳ ಬಲಭಾಗದ ಹಿಂಗಾಲನ್ನ ಕೊಡಲಿಯಿಂದ ಕತ್ತರಿಸಿದ್ದರಿಂದ ಆಕಳು ರಕ್ತಸ್ರಾವ ಆಗಿ ಎರಡು ದಿನಗಳ ನಂತರ ಚಿಕಿತ್ಸೆಯು ಫಲಕಾರಿಯಾಗದೇ ಪ್ರಾಣ ಬಿಟ್ಟಿತು, ಇಂತಹ ಅಮಾನವಿಯ ದೃಶ್ಯವನ್ನು ಮಾಟರಂಗಿ ಗ್ರಾಮದ ಜನರು ಕರು ಕಂಡು ಸದರಿ ವ್ಯಕ್ತಿಗೆ ಹಿಡಿಶಾಪ ಹಾಕಿದ್ದಾರೆ ಸದರಿ ವ್ಯಕ್ತಿಯ ಮೇಲೆ ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಕೂಡಾ ಅವರು ಚಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಇಂಥಹ ಮನಸ್ಥಿತಿವುಳ್ಳ ವ್ಯಕ್ತಿಯಿಂದ ಗ್ರಾಮದಲ್ಲಿನ ಜನರು ಭಯಭೀತರಾಗಿದ್ದಾರೆ.
ಅಲ್ಲದೇ ಗೋ ಮಾತೆಯನ್ನು ಹತ್ಯೆಗೈದು ವ್ಯಕ್ತಿಯನ್ನು ಕೂಡಲೇ ಗಡಿಪಾರು ಮಾಡಲು ಸೂಕ್ತ ಕಾನೂನು ಕ್ರಮವಹಿಸಬೇಕೆಂದು ಎಚ್ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಕೊಪ್ಪಳ ಜಿಲ್ಲೆಯ ಪದಾಧಿಕಾರಿಗಳು ಸರಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರ ಅರ್ಿಸಿ ಸರಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ ಸದರಿ ವ್ಯಕ್ತಿಗೆ ಸೂಕ್ತ ಶಿಕ್ಷೆಯಾದರೆ, ಮುಂದಿನ ದಿನಮಾನದಲ್ಲಿ ಇಂಥಹ ಘಟನೆಗಳು ಮರುಕಳಿಸುವುದಿಲ್ಲ ಇಲ್ಲವಾದರೆ ಇಂಥಹ ಘಟನೆಗಳು ಅಗಾಗ ಮರಕಳಿಸುವುದು ಸರ್ವೇ ಸಾಮಾನ್ಯ. ಒಂದು ವೇಳೆ ಸದರಿ ವ್ಯಕ್ತಿಯ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸದೇ ಹೋದರೆ ನಮ್ಮ ಸಂಘಟನೆಯಿಂದ ಜಿಲ್ಲಾದ್ಯಾಂತ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳರಾಗುವುದು ಎಂದು ಎಚ್ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಕೊಪ್ಪಳ ಜಿಲ್ಲೆಯ ಪದಾಧಿಕಾರಿಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ, ಪ್ರತಿಭಟನೆಯ ನೇತೃತ್ವವನ್ನು ವೇದಿಕೆಯ ಜಿಲ್ಲಾಧ್ಯಕ್ಷ ಶಿವರಾಜ್ ಉಳ್ಳಾಗಡ್ಡಿ ವಹಿಸಿದ್ದು ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೊನಕೇರಿ ಮತ್ತು ತಾಲೂಕ ಅಧ್ಯಕ್ಷ ಅಬ್ದುಲ್ ಸಮದ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಕಾರ್ಯಕರ್ತರು ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 