ಮನುಷ್ಯನಿಗೆ ವಿದ್ಯೆ,ಸಂಸ್ಕಾರ ಅವಶ್ಯ- ಶ್ರೀ ಷ.ಬ್ರ. ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು
Man needs education and culture - Shri Sha.Br. Abhinava Panchakshara Shivacharya Mahaswamy
ಯಲಬುರ್ಗಾ 20: ಮನುಷ್ಯನಿಗೆ ವಿದ್ಯಾ ಮತ್ತು ಸಂಸ್ಕಾರ,ವಿನಯ ಇದ್ದಾಗ ಮಾತ್ರ ಅವನು ಸಮಾಜದಲ್ಲಿ ಗುರ್ತಿಸಲು ಸಾಧ್ಯ ಎಂದು ಶ್ರೀ ಷ.ಬ್ರ. ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಅಡ್ವರ-ರಾಜೂರ-ಗದಗ ಶ್ರೀಗಳು ನೆರವೇರಿಸಿ ಸ್ವಾಮೀಜಿಗಳು ಹೇಳಿದರು. ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿಗಳ 24 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಧಾರ್ಮಿಕ ಹಾಗೂ ತುಲಭಾರ ಸೇವಾ ಕಾರ್ಯ , ಮೊದಲನೇ ದಿನದ ಕಾರ್ಯಕ್ರಮವಾದ “ಚಿಂತನ ಮಂಥನ ”ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಮನುಷ್ಯ ಹುಟ್ಟಿದ ಮೇಲೆ ನಾವು ದಾನ ಧರ್ಮ, ಸಂಸ್ಕಾರ, ವಿನಯವನ್ನು ಜೀವನದಲ್ಲಿ ಕಲಿಯಬೇಕು. ಮಠ ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಪಾವನರಾಗುವಂತೆ ಸಲಹೆ ನೀಡಿದರು. ದಿವ್ಯ ಸಾನಿಧ್ಯವನ್ನು ಶ್ರೀ ಷ. ಬ್ರ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಹಿರೇಮಠ ಜಿಗೇರಿ ಎಚ್ ಎಸ್ ವೆಂಕಟಾಪೂರ-ಹೊಸೂರ್ ಶ್ರೀಗಳು ವಹಿಸಿಕೊಂಡು “ದುರಿತ ಕರ್ಮದ ನೊಲ್ಲದಿರು ” ವಿಷಯ ಕುರಿತು ಶ್ರೀಗಳು ಭಗವಂತನ ಕೃಪೆಯಿಂದ ಮನಸ್ಸಿನ ದುರ್ಗುಣಗಳನ್ನು ಬಿಟ್ಟು ಸದ್ಗುಣಗಳನ್ನು ಪಡೆಯುವ ಮೂಲಕ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದು ಆಶೀರ್ವಚನ ನೀಡಿದರು. ಸಾನಿಧ್ಯವನ್ನು ಶ್ರೀ ಮ.ನಿ.ಪ್ರ. ಡಾಽಽ ಮಹಾದೇವ ಮಹಾಸ್ವಾಮಿಗಳು ಮುಂಡರಗಿ ಶ್ರೀ ಅನ್ನದಾನೀಶ್ವರ ಶಾಖಾಮಠ, ಕುಕನೂರು, ವಹಿಸಿದ್ದರು.
ಸಭಾ ಸಂಚಾಲಕರಾಗಿ ಬಸವರಾಜ ಕೊಂಡಗುರಿ ಅವರು ನೆರವೇಸಿದರು. ಈ ವೇಳೆ ಶ್ರೀ ಶಂಕ್ರ್ಪ ಬಸಪ್ಪ ರಾಂಪೂರ, ಶ್ರೀ ಆದಪ್ಪ ಮಲಿಯಪ್ಪ ಗುಳಗುಳಿ, ಶ್ರೀ ಭವರಸಿಂಗ್ ರಾಜಪುರೋಹಿತ, ಶ್ರೀ ತೇಜಸಿಂಗ್ ರಾಜಪುರೋಹಿತ, ಶ್ರೀ ಚಂದನ್ಸಿಂಗ್ ರಾಜಪುರೋಹಿತ, ಶ್ರೀ ಲಾಲ್ ಸಿಂಗ್ ರಾಜಪುರೋಹಿತ, ಶ್ರೀ ಜೀವನ್ಸಿಂಗ್ ರಾಜಪುರೋಹಿತ, ಶ್ರೀ ನಿಂಗಪ್ಪ ಹೂಗಾರ, ಶ್ರೀ ಶರಣಪ್ಪ ಸೋಮಪ್ಪ ಬನ್ನಿಕೊಪ್ಪ, ಶ್ರೀ ವಿರುಪಾಕ್ಷಪ್ಪ ಗದ್ದಿ , ಶ್ರೀ ಮಹಾಗುಂಡಪ್ಪ ಮಾಸ್ತರ ಕಟಗೇರಿ, ಶ್ರೀ ರಾಚಯ್ಯ ಸಿದ್ರಾಮಯ್ಯ ಸಾಲಿಮಠ, ಈರಣ್ಣ ಹುಬ್ಬಳ್ಳಿ, ಈಶಪ್ಪ ಸ್ಟಾಂಪಿನ, ಮಂಗಳೇಶ ಶ್ಯಾಗೋಟಿ, ಮಹೇಶ ಹುಬ್ಬಳ್ಳಿ, ಬಸವರಾಜ ಕೊಳ್ಳಿ, ಶಿವುಕುಮಾರ ಸಾದರ್, ಮುತ್ತು ಬಂಡಿ ಸೇರಿ ಅಪಾರ ಶ್ರೀಮಠದ ಭಕ್ತರು ಇದ್ದರು . ನಂತರ 247-251 ನೇ ತುಲಭಾರ ನಡೆಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 