ಬುಡಶೇಟ್ನಾಳ ಗ್ರಾಮದ ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ
Man missing from Budashetnala village: appeal for help in search
ಬುಡಶೇಟ್ನಾಳ ಗ್ರಾಮದ ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ
ಕೊಪ್ಪಳ 07: ಕೊಪ್ಪಳ ತಾಲೂಕಿನ ಬುಡಶೇಟ್ನಾಳ ಗ್ರಾಮದ ನಿವಾಸಿ 38 ವರ್ಷದ ಕರಿಬಸಪ್ಪ ತಂದೆ ಬಸವರಾಜ ಕೌಟಿ ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆಯ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದದಾರೆ.
ವ್ಯಕ್ತಿಯು 2024ರ ಡಿಸೆಂಬರ್ 23 ರಂದು ಬೆಳಿಗ್ಗೆ 8.30 ಗಂಟೆಗೆ ಬುಡಶೇಟ್ನಾಳ ಗ್ರಾಮದ ಹೋಲಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿ, ವಾಪಸ ಮನೆಗೆ ಬಾರದೆ ಕಾಣೆಯಾಗಿದ್ದಾನೆ ಎಂದು ವ್ಯಕ್ತಿಯ ಅಣ್ಣ ದೂರು ನೀಡಿದ್ದು, ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ: 05/2025 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿ ಕೋಲು ಮುಖ, ಉದ್ದವಾದ ಮೂಗು, ತಲೆಯಲ್ಲಿ ಬಿಳಿಯ ಕೂದಲುಗಳು, ಅಗಲವಾದ ಕಿವಿಗಳು, ಹೇರು ಹಣೆ, ಕುರುಚಲು ದಾಡಿ, ಮೀಸೆ ಇರುತ್ತವೆ. ಕಾಣೆಯಾದಾಗ ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಲುಂಗಿ ಮತ್ತು ಹಸಿರು-ಬಿಳಿಯ ಗೆರೆಯುಳ್ಳ ಟವಲ್ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಈ ವ್ಯಕ್ತಿಯು ಯಾರಿಗಾದರೂ ಕಂಡಲ್ಲಿ ಅಥವಾ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ.ನಂ: 08539-100 ಮತ್ತು 230222, ಕೊಪ್ಪಳ ಗ್ರಾಮಿಣ ಪೊಲೀಸ ಠಾಣೆ ಪಿ.ಎಸ್.ಐ ಮೊ.ಸಂ: 08539-221333,9480803746 ಮತ್ತು ಸಿ.ಪಿ.ಐ ದೂರವಾಣಿ ನಂ: 9480803731 ಹಾಗೂ ಕೊಪ್ಪಳ ಡಿ.ವೈ.ಎಸ್.ಪಿ ಪೋ.ನಂ: 08539-230342,9480803720 ಮತ್ತು ಕೊಪ್ಪಳ ಪೊಲೀಸ್ ಠಾಣೆಯ ಎಸ್.ಪಿ ಮೊ.ಸಂ: 08539-230111ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 