ಕಷ್ಟದ ದಿನಗಳಿಂದ ತಹಶೀಲ್ದಾರ್ ಹುದ್ದೆಯವರೆಗೆ ಮಲ್ಲಿಕಾರ್ಜುನ ಹೆಗ್ಗನ್ನವರ ಪಯಣ
Mallikarjun Heggannavar's journey from days of hardship to the post of Tahsildar
ಸವದತ್ತಿ 31: ಆರ್ಥಿಕ ಸಂಕಷ್ಟಗಳ ನಡುವೆಯೂ ಶಿಕ್ಷಣ ಮುಂದುವರಿಸಿ, ಶಿಕ್ಷಕ ವೃತ್ತಿಯಿಂದ ಆಡಳಿತಾತ್ಮಕ ಸೇವೆಗೆ ಏರಿದ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಅವರ ಜೀವನಯಾನ ಹಲವರಿಗೆ ಸ್ಫೂರ್ತಿದಾಯಕವಾಗಿದೆ. ಪಿಯುಸಿ ದಿನಗಳಲ್ಲಿ ಪ್ರತಿದಿನ ಶಿಕ್ಷಣಕ್ಕಾಗಿ ಪ್ರಯಾಣಿಸುತ್ತಿದ್ದ ಅವರು, ತಂದೆಯಿಂದ ಸಿಗುತ್ತಿದ್ದ ನಾಲ್ಕು ರೂಪಾಯಿಯಲ್ಲಿ ಪ್ರಯಾಣ ವೆಚ್ಚ ಕಳೆದು ಉಳಿದ ಎರಡು ರೂಪಾಯಿಯನ್ನು ಮನೆಗೆ ಹಿಂದಿರುಗಿಸುತ್ತಿದ್ದರು. ಕಷ್ಟಗಳ ನಡುವೆಯೂ ಶಿಕ್ಷಣದತ್ತದ ಬದ್ಧತೆಯನ್ನು ಮುಂದುವರಿಸಿದ ಅವರು ಕನ್ನಡ ವಿಷಯದಲ್ಲಿ ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.
ನಂತರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವರು, ಉದ್ಯೋಗದ ಜತೆಗೆ ಹೊರಾಂಗಣ ಶಿಕ್ಷಣದ ಮೂಲಕ ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿ.ಎಡ್. ಪೂರ್ಣಗೊಳಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ, 2014ರಲ್ಲಿ ತಹಶೀಲ್ದಾರ್ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯಮಟ್ಟದಲ್ಲಿ 34ನೇ ಸ್ಥಾನ ಪಡೆದು ಆಯ್ಕೆಯಾದರು. ಬದಾಮಿ, ಹಾವೇರಿ, ರಾಮದುರ್ಗ ಹಾಗೂ ಗದಗ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿರುವ ಅವರು, 2019ರ ಪ್ರವಾಹದ ಸಂದರ್ಭದಲ್ಲಿ ಬದಾಮಿ ತಾಲ್ಲೂಕಿನಲ್ಲಿ ಎನ್ಡಿಆರ್‌ಎಫ್ ಸಹಯೋಗದೊಂದಿಗೆ 72 ಜನರ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಅಲ್ಲದೆ, ಪ್ರವಾಹಪೀಡಿತ 90 ಕುಟುಂಬಗಳಿಗೆ ತಾತ್ಕಾಲಿಕ ವಸತಿ ಕಲ್ಪಿಸುವ ಕಾರ್ಯದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಕುಟುಂಬದ ಬೆಂಬಲ, ಸಹೋದರ ಸುರೇಶ್ ಅವರ ಪ್ರೋತ್ಸಾಹ ಹಾಗೂ ಪತ್ನಿ ರಚೀತಾ ಅವರ ಸಹಕಾರವೂ ಅವರ ಯಶಸ್ಸಿನ ಪಯಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಆಡಳಿತಾತ್ಮಕ ಜವಾಬ್ದಾರಿಗಳ ಜತೆಗೆ ಸಂಗೀತದ ಮೇಲೂ ಅವರಿಗೆ ಆಸಕ್ತಿ ಇದೆ. ಕಷ್ಟಗಳನ್ನು ಮೆಟ್ಟಿ ನಿಂತು ಶಿಕ್ಷಣ, ಶಿಕ್ಷಕ ವೃತ್ತಿ ಹಾಗೂ ನಿರಂತರ ಪರಿಶ್ರಮದ ಮೂಲಕ ತಹಶೀಲ್ದಾರ್ ಹುದ್ದೆಗೇರಿದ ಮಲ್ಲಿಕಾರ್ಜುನ ಹೆಗ್ಗನ್ನವರ ಅವರ ಜೀವನ ಪಯಣ, ಸಾಧನೆಗೆ ಹಿನ್ನೆಲೆ ಮುಖ್ಯವಲ್ಲ; ಛಲ ಮತ್ತು ಪರಿಶ್ರಮವೇ ಮುಖ್ಯ ಎಂಬುದನ್ನು ಸಾರುತ್ತದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 