ಮಹಿಳೆಯರು ಸಂರಕ್ಷಣೆಗೆ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ: ಕುಡುವಕ್ಕಲಗಿ
Make good use of schemes for women's protection: Kuduvakkalagi
ಬೆಳಗಾವಿ 11 (ಘಟಪ್ರಭಾ): ನಗರದ ಮಹಿಳೆಯರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುತ್ತದೆ ಮತ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಕಾನೂನುಗಳನ್ನು ಮಾಡಿದೆ ಅವುಗಳನ್ನು ಮಹಿಳೆಯರು ಸದುಪಯೋಗ ಪಡಿಸಿಕೊಂಡು ಸಾರ್ಥಕ ಬದುಕು ಸಾಗಿಸಬೇಕು ಎಂದು ಗೋಕಾಕ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಡಿ ಎಸ್ ಕುಡುವಕ್ಕಲಗಿ ಹೇಳಿದರು. ಅವರು ಜೈಂಟ್ಸ್ ಗ್ರುಪ್ ಆಪ್ ಘಟಪ್ರಭ ಇವರು ಮಂಗಳವಾರ ದಿನಾಂಕ 10-03-2026 ರಂದು ಘಟಪ್ರಭಾದಲ್ಲಿ ಏರಿ್ಡಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಹಿಳಾ ಆಪ್ತ ಸಮಾಲೋಚಕರಾದ ಶಕುಂತಲಾ ಶ್ರೀಕಾಂತ ಮಹಾಜನ ಮಾತನಾಡಿ ಮಹಿಳೆಯರ ಇಂದಿನ ಸ್ಥಿತಿ- ಗತಿ ಈ ವಿಷಯದ ಕುರಿತು ಉಪನ್ಯಾಸ ನೀಡಿದರು.ಅತಿಥಿಗಳಾಗಿ ಅಕ್ಕನ ಬಳಗದ ಅಧ್ಯಕ್ಷರಾದ ಸುನಂದಾ ಖಡಬಡಿ, ನಿವೃತ್ತ ಶಿಕ್ಷಕ ಹಿರೇಮನಿ, ಜೆ ಜಿ ಆಸ್ಪತ್ರೆ ಆವರಣದ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ದಾಕ್ಷಾಯಿಣಿ, ಆರುಣಗೌಡ ಪಾಟೀಲ, ಡಾ ವಿಲಾಸ ನಾಯಿಕವಾಡಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಜೈಂಟ್ಸ್ ಗ್ರುಪ್ ಆಪ್ ಘಟಪ್ರಭಾದ ಅಧ್ಯಕ್ಷರಾದ ಆನಂದ ದೇಶಪಾಂಡೆ ಅವರು ವಹಿಸಿದ್ದರು.
ಕಾರ್ಯಕ್ರಮವನ್ನು ಮಲಗೌಡಾ ದೊಡ್ಡಬಸಣ್ಣವರ ನಿರೂಪಣೆ ಮಾಡಿದರು, ಕಾರ್ಯದರ್ಶಿ ರವೀಂದ್ರ ಉಪ್ಪಾರ ಎಲ್ಲರನ್ನೂ ಸ್ವಾಗತಿಸಿ ವಂದನಾರೆ್ಣ ಮಾಡಿದರು. ಈ ಸಂದರ್ಭದಲ್ಲಿ ಗಿರಡ್ಡಿ ಗುರುಗಳು, ಸುಭಾಷ ದಡ್ಡೀಕರ ಕೆ ಪಿ ಕಳ್ಳೀಮಠ, ಶ್ರೀಕಾಂತ ಬಿ ಕುಲಕರ್ಣಿ, ಡಾ ಹರಗಣ್ಣವರ, ಶ್ರೀಕಾಂತ ವಿ ಮಹಾಜನ,ಶಂಕರ ಕುರಣಗಿ,ಭೂಪಾಲ ಖೆಮಲಾಪುರೆ, ಸಂತೋಷ ದೇಶಪಾಂಡೆ, ಪ್ರಕಾಶ್ ಕುಲಕರ್ಣಿ, ಕಲ್ಲಪ್ಪ ಕಾಡದವರ, ಸುಭಾಷ ಗಾಯಕಾಡ,ಸೇರಿದಂತೆ ಜೈಂಟ್ಸ್ ಗ್ರುಪ್ ಸದಸ್ಯರು ಮತ್ತು ಮಹಿಳೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 