ಮುದ್ದಾಬಳ್ಳಿ ಶಾಲೆಯಲ್ಲಿ ಮುದ್ದಾದ ಮಕ್ಕಳಿಂದ ಮಕರ ಸಂಕ್ರಮಣ ಆಚರಣೆ
Makar Sankram celebration by cute children at Muddaballi School
ಕೊಪ್ಪಳ 16: ಕೊಪ್ಪಳ ಸಮೀಪದ ಮುದ್ದಾಬಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಚೇತನ ಕಾರ್ಯಕ್ರಮದ ಪ್ರಯುಕ್ತವಾಗಿ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು ಮುಖ್ಯೋಪಾಧ್ಯಯರಾದ ರೇಖಾ ಕುಲಕರ್ಣಿ ಕಾರ್ಯಕ್ರಮದ ಕುರಿತು ಸಮಗ್ರವಾಗಿ ತಿಳಿಸಿದರು ಅದರಲ್ಲೂ ಮಕ್ಕಳಿಂದ ಹಳ್ಳಿ ಸೊಬಗಿನ ಸುಗ್ಗಿಯ ಹಾಡಿನ ನೃತ್ಯ ಮಾಡುವುದರ ಮೂಲಕ ಸಂಕ್ರಾಂತಿಯ ಆಚರಣೆ ಮಾಡಲಾಯಿತು.ಪ್ರಸ್ತಾವಿಕವಾಗಿ ಎಪಿಎಫ್ ಶೋಭನಾ ಸಂಕ್ರಾಂತಿಯ ಉತ್ತರಾಯಣ ಪುಣ್ಯಕಾಲ ಕುರಿತು ಮಕ್ಕಳಿಗೆ ತಿಳಿಹೇಳಿದರು,
ಕಾರ್ಯಕ್ರಮದ ಕುರಿತಾಗಿ ಮಾಹಿತಿ ಪಡೆದುಕೊಂಡ ಉಪನಿರ್ದೇಶಕ ಎಲ್ ಡಿ ಜೋಶಿ, ಸಚೇತನ ಕಾರ್ಯಕ್ರಮದ ನೋಡಲ್ ಅಧಿಕಾರಿ ಗವಿಸಿದ್ದಯ್ಯ ಬೆಣಕಲ್ಮಠ ಶಾಲೆಯ ಮುಖ್ಯೋಪಾಧ್ಯಾಯರಿಗೂ ಹಾಗೂ ಸಿಬ್ಬಂದಿ ವರ್ಗದವರಿಗೂ ವಿಶೇಷ ಅಭಿನಂದನೆ ಸಲ್ಲಿಸಿದರು ಹಾಗೂ ಸಮೂಹ ಸಂಪನ್ಮೂಲ ಅಧಿಕಾರಿ ಮುದ್ದು ಬಸವ ಗುಡ್ಲಾನೂರು ಹರ್ಷ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಎಸ್ ಡಿಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಗ್ರಾಮದ ಹಿರಿಯರು ಯುವಕರು ಪಾಲ್ಗೊಂಡಿದ್ದರು ಇದೇ ಸಂದರ್ಭದಲ್ಲಿ ಶಿಕ್ಷಕಿಯರಾದ ಸವಿತಾ ಕಲ್ಯಾಣಿ ,ಗೀತಾ ವಿ,ಶ್ವೇತ, ಹಾಜರಿದ್ದರು. ನಾಲ್ಕನೇ ತರಗತಿ ವಿದ್ಯಾರ್ಥಿನಿ ಕುಮಾರಿ ರಂಜಿತ ಪ್ರಾರ್ಥಿಸಿದರು, ಶಿಕ್ಷಕರಾದ ಮಹಮದ್ ಇಸ್ಮಾಯಿಲ್ ಸ್ವಾಗತಿಸಿದರು, ಶಿಕ್ಷಕಿಯರಾದ ಸವಿತಾ ಬಿ ಕೆ ವಂದಿಸಿದರು,ರಾಜಶ್ರೀ ಕಾರ್ಯಕ್ರಮ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 