ಮೆಕ್ಕೆಜೋಳ ಖರೀದಿ ಮತ್ತು ಬೆಂಬಲ ಬೆಲೆ, ರೈತರ ಹೋರಾಟಕ್ಕೆ ಸಂದ ಜಯ ರವೀಂದ್ರಗೌಡ . ಪಾಟೀಲ
Maize purchase and support price, support to farmers' struggle, Ravindra Gowda. Patil
ರಾಣೇಬೆನ್ನೂರು 8 : ಮೆಕ್ಕೆಜೋಳ ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯಿಸಿ ಹಲವು ದಿನಗಳಿಂದ ರೈತ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ, ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ 2400/- ರೂ. ದರ ನಿಗದಿಪಡಿಸಿ ಕನಿಷ್ಠ ಎಕರೆ 12 ಕ್ವಿಂಟಲ್ ಗಳಂತೆ ಒಬ್ಬ ರೈತನಿಗೆ 50 ಕ್ವಿಂಟಲ್ ವರೆಗೆ ಖರೀದಿ ಮಾಡಲು ಸರ್ಕಾರ ಬದ್ಧವಾಗಿದ್ದು ಇಂದು ಅಧಿಕೃತ ಆದೇಶ ಮಾಡಿರುವುದು ಸಂಕಷ್ಟದಲ್ಲಿದ್ದ ಮೆಕ್ಕೆಜೋಳ ಬೆಳೆಗಾರ ರೈತರಿಗೆ ಚೈತನ್ಯ ಮತ್ತು ಭರವಸೆ ತಂದಿದೆ ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ತಿಳಿಸಿದ್ದಾರೆ. ಈ ಜಯ ರೈತ ಹೋರಾಟಕ್ಕೆ ಸಂದ ಜಯವಾಗಿದೆ. ಉತ್ತರ ಕರ್ನಾಟಕದಾದ್ಯಂತ ಸಾಮೂಹಿಕ ನಾಯಕತ್ವದಲ್ಲಿ ನಡೆದ ಈ ಹೋರಾಟ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಶುಕ್ರವಾರ ಈ ಬಗ್ಗೆ ಪ್ರತಿಭಟನೆ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತ, ಜಿಲ್ಲಾಧಿಕಾರಿಳು ಮತ್ತು ಜಿಲ್ಲೆಯ ಎಲ್ಲಾ ಶಾಸಕರ ಸಮ್ಮುಖದಲ್ಲಿ ರೈತ ಮುಂಖಡರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ರವೀಂದ್ರಗೌಡ ಪಾಟೀಲ, ಸರಕಾರದ ಕ್ರಮಕ್ಕೆ ಧನ್ಯವಾದಗಳನ್ನು ಹೇಳಿ ಪ್ರತಿಭಟನೆ ವಾಪಸ್ ಪಡೆಯುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲೆ ಎಲ್ಲ ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ರೈತಪರ ಸಂಘಟನೆಯ ಮುಖಂಡರಾದ, ಹನುಮಂತಪ್ಪ ದೀವಿಗಿಹಳ್ಳಿ, ಪ್ರಕಾಶ ಬಾರ್ಕಿ, ಈರಣ್ಣ ಮಾಕನೂರು, ಪಕ್ಕೀರಗೌಡ ಗಾಜಿಗೌಡ್ರ, ಬಸವರಾಜ ದೇವಗಿಹಳ್ಳಿ, ಮಹೇಶ ಕೊಟ್ಟೂರ, ರಾಜಶೇಖರ ದೂದಿಹಳ್ಳಿ, ನೀಲಪ್ಪ ಹರಿಜನ, ಚನ್ನವೀರಯ್ಯ ಹೊಸಮಠ, ಧರ್ಮ ಗೌಡ ಹೊನ್ನಗೌಡ್ರ, ಸದಾನಂದ ಗೌಡ ಪಾಟೀಲ, ಕರಿಯಪ್ಪ ಆಲೂರ, ಮಂಜುನಾಥ ಕಂಕನವಾಡಿ, ನಿಂಗಪ್ಪ ಮತ್ತು ಶಿವಪ್ಪ ಕಣಮನಿ, ದಿಳ್ಳೆಪ್ಪ ಸತ್ತೆಪ್ಪನವರ, ಪವರ್ತಗೌಡ ಕುಸಗೂರು, ಹರಿಹರಗೌಡ ಪಾಟೀಲ, ಭೀರ್ಪ ಲಮಾಣಿ, ಸೋರಡ್ಡಿ ರಡ್ಡೆರ, ಸಿರಾಜ್ ಶೇಖ ರಾಣೇಬೆನ್ನೂರು, ಸಿದ್ದಪ್ಪ ಕಂಬಳಿ, ಬಸಲಿಂಗಪ್ಪ ಶಿವಲಿಂಗಪ್ಪನವರ, ಗುಡ್ಡಪ್ಪ ಹರಿಜನ ಜೊತೆಯಲ್ಲಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 