ಸಾವಯವ ಗೊಬ್ಬರ ಬಳಸಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಿ- ಕಾಡಸಿದ್ದೇಶ್ವರ ಸ್ವಾಮಿ

ಸಾವಯವ ಗೊಬ್ಬರ ಬಳಸಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಿ- ಕಾಡಸಿದ್ದೇಶ್ವರ ಸ್ವಾಮಿ Maintain good health by using organic fertilizers - Kadasiddheshwara Swamy

ಸಾವಯವ ಗೊಬ್ಬರ ಬಳಸಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಿ- ಕಾಡಸಿದ್ದೇಶ್ವರ ಸ್ವಾಮಿ

ರಾಣಿಬೆನ್ನೂರು 12;  ಇಂದು ನಾವು ಸೇವಿಸುವ ಆಹಾರದಲ್ಲಿ ವಿಷ ತುಂಬಿದೆ ಇದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರಾಗಿ ಮನುಷ್ಯ ಬಲಹೀನವಾಗುತ್ತಿದ್ದಾನೆ. ಭೂಮಿಗೆ ರೈತ ವಿಷ ಉಣಿಸುತ್ತಿದ್ದಾನೆ. ನಾವು ಉಣ್ಣು ಆಹಾರದಿಂದ ಆರೋಗ್ಯ ಕೆಡುವುದಿಲ್ಲ ಪಂಚಭೂತಗಳು ಸಹ ಆರೋಗ್ಯಕ್ಕೆ ಕಾರಣವಾಗಿದೆ. ಆದಕಾರಣ ಸಾವಯವ ಕೃಷಿಯಲ್ಲಿ ಬೆಳೆದ ಧಾನ್ಯಗಳು ಮತ್ತು ತರಕಾರಿಗಳನ್ನು ಸೇವಿಸಬೇಕು ಎಂದು ಕೊಲ್ಲಾಪುರ ಕನ್ನೇರಿಯ ಸಿದ್ಧಗಿರಿ ಸಂಸ್ಥಾನ ಮಠದ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.  

ಬುಧವಾರ ಇಲ್ಲಿನ ನಗರಸಭೆಯ ಕ್ರೀಡಾಂಗಣದಲ್ಲಿ ವಂದೇ ಮಾತರಂ ಸೇವಾ ಸಂಸ್ಥೆ ಪ್ರತಿಷ್ಠಾಪಿಸಿರುವ 17ನೇ ವರ್ಷದ ರಾಣಿಬೆನ್ನೂರು ಕಾ ರಾಜಾ ಗಣೇಶ್ಯೋತ್ಸವದ ಅಂಗವಾಗಿ ಕೃಷಿ ಮತ್ತು ಆರೋಗ್ಯ ಹಾಗೂ ಧರ್ಮ ಮತ್ತು ಸಂಘ ವಿಷಯಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯ ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕಾಗಿ ಯಾವುದೇ ತೊಂದರೆ ಇಲ್ಲದೇ ಅದು ಆರೋಗ್ಯ. ಬಾಯಿಂದ ತಿನ್ನುವುದು, ಕುಡಿಯುವುದು ಆಹಾರವಲ್ಲ. ಕಣ್ಣು, ಕಿವಿ, ಮೂಗು, ನಾಲಿಗೆ, ತ್ವಚೆ ಈ ಪಂಚೇಂದ್ರಿಯಗಳಿಂದ ಸೇವಿಸುವುದು ಕೂಡ ಆಹಾರವಾಗಿದೆ. ಇತ್ತೀಚೆಗೆ ಶ್ರಮ ಸಂಸ್ಕೃತಿ ಮರೆಯಾಗುತ್ತಿದೆ. ಇಂದು ಕೃಷಿಯನ್ನು ನಂಬಿ ರೈತರು ಜೀವನ ನಡೆಸಲಾಗುತ್ತಿಲ್ಲ. ಜಮೀನಿಗೆ ರಾಸಾಯನಿಕ ಬಳುಸುವದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ ಇತ್ತೀಚೆಗೆ ಅತೀ ಚಿಕ್ಕ ವಯಸ್ಸಿನಲ್ಲಿ ಹಲವಾರು ರೋಗಗಳು ಭಾದಿಸುತ್ತಿವೆ. ದೇಶ ಅಭಿವೃದ್ದಿ ಹೊಂದಬೇಕಾದರೆ ಆರೋಗ್ಯವಂತ ಸಮಾಜ ಇರಬೇಕು ಎಂದರು.     ಧಾರವಾಡ ವಿಭಾಗದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಚಾರಕರಾದ ಗೋವಿಂದಪ್ಪ ಗೌಡಪ್ಪಗೋಳ ಮಾತನಾಡಿ, ಆರೆಸ್ಸೆಸ್ ಸಂಘ ಪರಿವಾರದ ಪ್ರಮುಖ ಸಂಘಟನೆಗಳ ಮಾತೃ ಸಂಸ್ಥೆಯಾಗಿದೆ. ದೇಶದ ಸಂಸ್ಕೃತಿ ಬಗ್ಗೆ ತಿಳಿಸುವ ಏಕೈಕ ಸಂಘ. 100ನೇ ವರ್ಷಕ್ಕೆ ಕಾಲಿಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಮಹಾರಾಷ್ಟ್ರದ ನಾಗಪುರದಲ್ಲಿ ಸಂಘದ ಬೀಜವನ್ನು ಬಿತ್ತಿದ್ದ ಪ್ರಥಮ ಸರಸಂಘಚಾಲಕ್ ಡಾಕ್ಟರ್ ಜಿ ಅವರ ಜನ್ಮ ದಿನದ ಶುಭ ಸಂದರ್ಭದಲ್ಲಿ ಸದಾ ಸ್ಮರಿಸೋಣ ಎಂದರು.     ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ, ನಗರಸಭಾ ಸದಸ್ಯರಾದ ರೂಪಾ ಚಿನ್ನಿಕಟ್ಟಿ, ಹನುಮಂತಪ್ಪ ಹೆದ್ದೇರಿ, ಗಂಗಮ್ಮ ಹಾವನೂರು, ವರ್ತಕ ಮಲ್ಲೇಶಣ್ಣ ಅರಕೇರಿ, ವೈದ್ಯ ಡಾ.ಬಸವರಾಜ ಕೇಲಗಾರ, ಭಾರತಿ ಜಂಬಿಗಿ, ಬಸವರಾಜ ಕೊಪ್ಪದ, ಪ್ರಭುಲಿಂಗ ಕೋಡದ, ಪ್ರಮೋದ ನಲವಾಗಲ, ಈಶ್ವರ ಹಾವನೂರು, ಅಜೇಯ ಮಠದ, ಗುರುರಾಜ ಕುಲಕರ್ಣಿ, ರಾಘವೇಂದ್ರ ಚಿನ್ನಕಟ್ಟಿ, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.