ಮಹೇಶ ಅಣ್ಣಾಸಾಹೇಬ ಬಾಕಳೆಗೆ ವಿವೇಕ ಸೇವಾ ಪ್ರಶಸ್ತಿ
Mahesh Annasaheb Bakale receives Viveka Seva Award
ಮಾಂಜರಿ, 19 : ಎಲ್ಲ ಪರಂಪರೆಗಳಲ್ಲಿ ಸನ್ಯಾಸಿ ಪರಂಪರೆ ದೊಡ್ಡದು. ಸ್ವಾಮಿ ವಿವೇಕಾನಂದರು ಸನ್ಯಾಸಿ ಜೊತೆಗೆ ಯೋಧರು ಸಹ ಆಗಿದ್ದರು. ಅವರ ಸ್ಮರಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಪ್ರಾಂತ ಕಾರ್ಯವಾಹ ರಾಘವೇಂದ್ರಜಿ ಕಾಗವಾಡ ಹೇಳಿದರು.
ಶನಿವಾರ ಸಂಜೆ ಯಕ್ಸಂಬಾ ಪಟ್ಟಣದ ಮರಾಠಾ ಭವನದಲ್ಲಿ ವಿವೇಕ ಬಳಗದ ಸ್ವಾಮಿ ವಿವೇಕಾನಂದ ಯುವ ಅಭಿವೃದ್ಧಿ ಆರ್ಥಿಕ ಸಂಸ್ಥೆಯವರು ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ 163ನೇ ಜಯಂತಿ, ಬೆಳ್ಳಿ ಮಹೋತ್ಸವ ಹಾಗೂ ವಿವೇಕ ಸೇವಾ ಸನ್ಮಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಮ್ಮ ದೇಶ ಪಶು ಸಂಪದ್ಭರಿತವಾಗಿದೆ, ನಮಗೆ ಅಮೇರಿಕೆಯ ಆದರ್ಶ ಬೇಡ, ನಮ್ಮ ದೇಶದ ಸಂಸ್ಕಾರ ಮತ್ತು ಸಂಸ್ಕೃತಿ ಬೇಕು. ಸ್ವಾಮಿ ವಿವೇಕಾನಂದರ ಕಾರಣದಿಂದಲೇಧರ್ಮ ಉಳಿದಿದೆ. ನಮ್ಮ ದೇಶದಲ್ಲಿ ಸನ್ಯಾಸಿಗಳಿಗೆ ಮತ್ತು ಸ್ವಾಮಿಗಳಿಗೆ ಗೌರವ ನೀಡುವ ಪರಂಪರೆಯಿದೆ ಇದೆ ಎಂದು ಅವರು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಜೋಡಕುರಳಿ ಚಿದ್ರಾನಾನಂದ ಭಾರತಿ ಸ್ವಾಮೀಜಿ ಮಾತನಾಡಿ. ಇಂದು ನಮ್ಮನಾವೆ ಬ್ಯಾನರ್ ಹುಟ್ಟು ಹಬ್ಬ ಹಚ್ಚಿಕೊಂಡು ಆಚರಿಸಕೊಳ್ಳುತ್ತಿದ್ದೇವೆ. ಆದರೆ ಸಮಾಜ ಆಚರಣೆ ಮಾಡಬೇಕು. ಅಂದಾಗ ಬೆಲೆ ಬರುತ್ತದೆ ಎಂದು ಹೇಳಿದರು.
2026ರ ವಿವೇಕ ಸೇವಾ ಪುರಸ್ಕಾರವನ್ನು ಸಮಾಜಿಕ ಚಿಂತಕ ಮಹೇಶ ಅಣ್ಣಾಸಾಹೇಬ ಬಾಕಳೆಯವರಿಗೆ ನೀಡಿ ಸನ್ಮಾನಿಸಿದರು. ಆರ್.ಎಸ್.ಎಸ್‌ನ ವಿಭಾಗ ಕಾರ್ಯವಾಹ ಸಂಜಯ ಅಡಕೆ ಇತರರಿದ್ದರು. ಉತ್ತಮ ಕಾಟಕರೆ ಸ್ವಾಗತಿಸಿದರು. ಬಾಲಚಂದ್ರ ಬಾಕಳೆ ಪ್ರಾಸ್ತಾವಿಕ ಮಾತನಾಡಿದರು. ಆರ್.ಎ. ಕೆರಗುಟ್ಟಿ ನಿರೂಪಿಸಿದರು. ಖೋತ ವಂದಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 