ಮಹಾಯೋಗಿ ವೇಮನ ತಮ್ಮ ಪದ್ಯಗಳ ಮೂಲಕ ಮನುಕುಲದ ಉನ್ನತಿಗೆ ಸನ್ಮಾರ್ಗದ ಮೂಲಕ ಉಪದೇಶ : ಅಧ್ಯಕ್ಷ ಬಸವಲಿಂಗನಗೌಡ
Mahayogi Vemana preaches the right path for the upliftment of mankind through his verses: President
ಕಂಪ್ಲಿ 19 : ಮಹಾಯೋಗಿ ವೇಮನ ತಮ್ಮ ಪದ್ಯಗಳ ಮೂಲಕ ಮನುಕುಲದ ಉನ್ನತಿಗೆ ಸನ್ಮಾರ್ಗದ ಉಪದೇಶ ನೀಡಿದ್ದಾರೆ ಎಂದು ಹೇಮ ವೇಮ ಫಿರ್ಕಾ ರೆಡ್ಡಿ ಜನ ಸಂಘದ ಅಧ್ಯಕ್ಷ ಇಟಗಿ ಬಸಲಿಂಗನಗೌಡ ಹೇಳಿದರು.ಪಟ್ಟಣದ ಬಳ್ಳಾರಿ ರಸ್ತೆಯ ಪೆಟ್ರೋಲ್ ಬಂಕ್ ಬಳಿಯಲ್ಲಿರುವ ಹೇಮ ವೇಮ ಫಿರ್ಕಾ ರೆಡ್ಡಿ ಜನ ಸಂಘದ ಕಛೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತ್ಯೋತ್ಸವ ಕಾರ್ಯಕ್ರಮ ನೆರವೇರಿಸಿದ ನಂತರ ಇಟಗಿ ಮಾತನಾಡಿ, ಸಾಮಾನ್ಯ ವ್ಯಕ್ತಿ ತನ್ನ ಬದುಕಿನ ಸಾಧನೆ, ಪರಿಶ್ರಮಗಳಿಂದ ಮಾತ್ರ ಮಹಾಯೋಗಿಯಾಗಲು ಸಾಧ್ಯ. ಅಂತಹ ಸಾಧಕರಲ್ಲಿ ವೇಮನು ಸಹ ಒಬ್ಬರು ಆಗಿದ್ದಾರೆ. ಮಹಾಯೋಗಿ ವೇಮನರು ಲೋಕ ಶಾಂತಿಯನ್ನು ಸಾರಿದ ಮಹಾತ್ಮರು. ಅವರ ಜೀವನದ ಮೂಲಕ ಮನುಕುಲಕ್ಕೆ ಮಹತ್ತರ ಸಂದೇಶವನ್ನು ನೀಡಿದರು ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಪಿ.ವೆಂಕಟರೆಡ್ಡಿ, ಸಮಾಜದ ಮುಖಂಡರಾದ ಟಿ.ವಿ.ಸುದರ್ಶನರೆಡ್ಡಿ, ವೀರನರೆಡ್ಡಿ, ಭಾಸ್ಕಾರ್ ರೆಡ್ಡಿ, ವೈ.ಶರಣಗೌಡ, ಕೇಶವರೆಡ್ಡಿ, ಡಾ.ಪಿ.ಅಶೋಕ್ ಹಾಂದ್ರಾಳ್, ವೆಂಕಟೇಶ, ರಾಜಶೇಖರ, ಪ್ರಭಾಕರ, ಮಾಧವ, ಕೃಷ್ಣ ರೆಡ್ಡಿ, ದುರ್ಗಾ ಪ್ರಸಾದ್, ಸಂದೀಪ, ಸುಧಾಕರ, ಮಂಜುನಾಥ, ಲಕ್ಷ್ಮಿರೆಡ್ಡಿ ಇದ್ದರು. ತಹಶೀಲ್ದಾರ್ ಕಛೇರಿ: ಇಲ್ಲಿನ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ವೇಮನ ಜಯಂತಿ ಸಂಭ್ರಮ ಸಡಗರದಿಂದ ಆಚರಿಸಿದರು.ತಹಶೀಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿದರು .ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವಿ.ಸುದರ್ಶನರೆಡ್ಡಿ, ಹೇಮ ವೇಮ ಫಿರ್ಕಾ ರೆಡ್ಡಿ ಜನ ಸಂಘದ ಅಧ್ಯಕ್ಷ ಇಟಗಿ ಬಸಲಿಂಗನಗೌಡ, ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗು ರೆಡ್ಡಿ ಸಮಾಜದವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 