ಗುರ್ಲಾಪೂರದ ಅಯ್ಯಪ್ಪನಿಗೆ ಮಹಾಪೊಜೆ
Mahapooja to Lord Ayyappa of Gurlapura
ಗುರ್ಲಾಪೂರ 30: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರವು ಭಕ್ತಿಗೆ ಹೆಸರವಾಸಿಯಾಗಿದೆ. ಅಂತಹ ಗ್ರಾಮದ ಹೃದಯಭಾಗದಲ್ಲಿರುವ ಅಯ್ಯಪ್ಪಸ್ವಾಮಿಯ ಮಹಾಪೂಜೆಯೂ ಗುರು ಸ್ವಾಮಿಗಳ ಸಾನಿಧ್ಯದಲ್ಲಿ ಗುರುವಾರ ದಿ.1 ರಂದು ಹೊಸ ವರ್ಷಾಚರಣೆಯ ದಿನದಂದು ನಡೆಯುವುದು. ಗುರುವಾರ ಬೆಳೆಗ್ಗೆ 6 ಗಂಟೆಗೆ ಭಕ್ತರಿಂದ ಪಂಪಾ ನದಿ ಹಳ್ಳದಲ್ಲಿ ತಣ್ಣೀರ ಸ್ನಾನ ಮಾಡಿ, ಸನ್ನಿದಾನದವರೆಗೆ ದಿಡ ನಮಸ್ಕಾರ ಹಾಕಿ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುವರು. ಸಂಜೆೆ 5 ಗಂಟೆಗೆ ಅಯ್ಯಪ್ಪನ ಕನ್ಯಾಸ್ವಾಮಿಗಳು ಹಾಗೂ ಗುರುಸ್ವಾಮಿಗಳು ಮಕ್ಕಳು ಮುತೈದೆರು ಸೇರಿ ಗ್ರಾಮದ ಪ್ರಮುಖ ರಸ್ಥೆಗಳಲ್ಲಿ ಅಯ್ಯಪ್ಪಸ್ವಾಮಿಯ ಭಾವಚಿತ್ರ ಹಾಗೂ ಅಯ್ಯಪ್ಪಣ ಪಲ್ಲಕ್ಕಿ ಉತ್ಸವದೊಂದಿಗೆ ಸಕಲ ವಾದ್ಯವೃಂದದೂದಿಗೆ ಸಾಗುತ್ತಾ ಕಂಬಳಿ ಪಲಾಟದ ಶ್ರೀ ವೀರಭದ್ರೇಶ್ವರಣಿಗೆ ಮಹಾಮಂಗಳಾರತಿ ಮಾಡಿ ಮರಳಿ ಅಯ್ಯಪ್ಪಣ ಸನ್ನಿಧಾನಕ್ಕೆ ಬಂದು ಅಗ್ನಿಗೆ ವಿಶೆಷ ಪೊಜೆ ಮಾಡಿ ಮಹಾಪೂಜೆಗೆ ಬಂದ ಎಲ್ಲ ಗುರುಸ್ವಾಮಿಗಳು ಹಾಗೊ ಕನ್ನಾಸ್ವಾಮಿಗಳು ಅಗ್ನಿಹಾದು ಹದಿನೆಂಟು ಮೆಟ್ಟಲೇರಿ ಸ್ವಾಮಿಯ ದರ್ಶನ ಪಡೆದು ಜೀವನ ಪಾವನ ಮಾಡಿಕೊಳ್ಳೂವರು ನಂತರ ಮಹಾಪೂಜೆಗೆ ಬಂದ ಭಕ್ತರೆಲ್ಲರು ಅಯ್ಯಪ್ಪನ ಶರಣು ಗೋಶಣೆಯೊಂದಿಗೆ ಹಾಡು ಹಾಡುವರು. ನಂತರ ಅಯ್ಯಪ್ಪಣಿಗೆ ಹಾಗು ಗಣಪತಿಗೆ ಸಕಲ ದೇವರಿಗೆ ಮಹಾಮಂಗಳಾರತಿ ಮಾಡಿ ಎಲ್ಲ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಗುವದು ಎಂದು ಅಯ್ಯಪ್ಪನ ಭಕ್ತಮಂಡಳಿ ತಿಳಿಸಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 