ಕಂಪ್ಲಿ ತಾಲ್ಲೂಕು ವೀರಶೈವ ಸಂಘದ ಮಹಾಜನ ಸಭೆ ಯಶಸ್ವಿ : ಪಿ.ಮೂಕಯ್ಯಸ್ವಾಮಿ

ಕಂಪ್ಲಿ ತಾಲ್ಲೂಕು ವೀರಶೈವ ಸಂಘದ ಮಹಾಜನ ಸಭೆ ಯಶಸ್ವಿ : ಪಿ.ಮೂಕಯ್ಯಸ್ವಾಮಿ Mahajana Sabha of Kampli Taluk Veerashaiva Sangha successful : P. Mookayaswamy

                  ಕಂಪ್ಲಿ 22:  ಪಟ್ಟಣದ ವೀರಶೈವ ಸಂಘದ ಶಾಲಾವರಣದಲ್ಲಿ ನಡೆದ ಕಂಪ್ಲಿ ತಾಲ್ಲೂಕು ವೀರಶೈವ ಸಂಘದ ಮಹಾಜನ ಸಭೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಸಂಘದ ವರದಿಯನ್ನು ಮಂಡಿಸಿದ ಸಂಘದ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಮಾತನಾಡಿ, 1991-92ರಲ್ಲಿ ಸಮಾಜದ ಹಿರಿಯರು ಕಟ್ಟಿ ಬೆಳೆಸಿದ ವೀರಶೈವ ಸಂಘವೂ ಪ್ರಸ್ತುತ ಹೆಮ್ಮರವಾಗಿ ಬೆಳೆದಿದ್ದು, ಕೇವಲ ಸಮಾಜದ ಸಂಘವಿದ್ದರೆ ಸಾಲದು ಎಂದು ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ, ಸಂಘ ಶಿಕ್ಷಣ ಸಂಸ್ಥೆಯೂ ಸಹಿತ ಉತ್ತಮವಾಗಿ ಬೆಳೆದಿದೆ. ಶಾರದಾ ಹಿರಿಯ ಪ್ರಾಥಮಿಕ ಶಾಲೆ ಸರ್ಕಾರದ ಅನುದಾನಕ್ಕೊಳಪಟ್ಟಿದ್ದರೆ,

                ಓದ್ಸೋ ಜಡೆಮ್ಮ ಗುರುಸಿದ್ದಯ್ಯ ಪ್ರೌಢಶಾಲೆ, ಶ್ರೀಮತಿ ರುದ್ರಮ್ಮ ರುದ್ರಯ್ಯಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ಖಾಸಗಿಯಾಗಿ ನಡೆಯುತ್ತಿದ್ದು, ಜವಳಿ ವೀರಮ್ಮ ಚನ್ನಬಸಪ್ಪ ಪದವಿ ಪೂರ್ವ ಕಾಲೇಜು ಉತ್ತಮವಾಗಿ ನಡೆಯುತ್ತಿದ್ದು, ಪಟ್ಟಣವೂ ಸೇರಿದಂತೆ ತಾಲ್ಲೂಕಿನಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಿದೆ ಎಂದರು. ಸಂಘದ ಕಾರ್ಯದರ್ಶಿ ಎಚ್‌.ನಾಗರಾಜ ಸಂಘದ ಲೆಕ್ಕ ಪತ್ರಗಳನ್ನು ಮಂಡಿಸಿ, ಸದಸ್ಯರಿಂದ ಒಪ್ಪಿಗೆಯನ್ನು ಪಡೆದರು. ಸಂಘದ ಖಜಾಂಚಿ ಎಸ್‌.ಎಂ.ನಾಗರಾಜ ಮಹಾಜನ ಸಭೆಗೆ ಲೆಕ್ಕ ಪತ್ರಗಳ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದರು. ಮಹಾಜನ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಾಜದ ಹಿರಿಯರಾದ ಅರವಿ ಬಸವನಗೌಡ ಮಾತನಾಡಿದರು. ಸಂಘದ ಉಪಾಧ್ಯಕ್ಷ ವಿ.ವಿದ್ಯಾಧರ ಸ್ವಾಗತಿಸಿದರೆ, ಶಾಲಾಭಿವೃದ್ಧಿ ಸಮಿತಿ ನಿರ್ದೇಶಕರಾದ ಜಿ.ಚಂದ್ರಶೇಖರಗೌಡ ವಂದಿಸಿದರು. 

               ಪದಾಧಿಕಾರಿಗಳಾದ ಕೆ.ವಿರುಪಾಕ್ಷಪ್ಪ, ವಾಲಿ ಕೊಟ್ರ​‍್ಪ, ಕೆ.ಎಂ.ವಾಗೀಶ್, ನಾಗರತ್ನ ಕಲ್ಗುಡಿ, ಎಸ್‌.ವೀರಭದ್ರಯ್ಯ, ಎಸ್‌.ಡಿ.ಬಸವರಾಜ, ಬಿ.ಮಹೇಶಗೌಡ್ರು, ಹೊನ್ನಳ್ಳಿ ಗಂಗಾಧರ, ಜಿ.ಅಮರೇಗೌಡ, ಜಿ.ಅಯ್ಯನಗೌಡ, ಡಿ.ವೀರ​‍್ಪ, ಇಟಗಿ ಬಸವರಾಜಗೌಡ ಹಾಗೂ ಸಮಾಜದ ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಜಿ.ಲಿಂಗನಗೌಡ, ಕಲ್ಗುಡಿ ಮಂಜುನಾಥ್, ಅಳ್ಳಳ್ಳಿ ವೀರೇಶ್, ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಡಾ.ಶಾರದಾ ಹಿರೇಮಠ ಹಾಗೂ ಪದಾಧಿಕಾರಿಗಳು, ವೀರಶೈವ ಸಂಘದ ವಿವಿಧ ಘಟಕಗಳ ಪದಾಧಿಕಾರಿಗಳು, ಸಮಾಜದ ಬಾಂಧವರು ಭಾಗವಹಿಸಿದ್ದರು.