ಮಹಾವಿದ್ಯಾಲಯ ಕೊಠಡಿಗಳ ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆ
ಅಥಣಿ 27: ಅಥಣಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ನೂತನವಾಗಿ ಮಂಜೂರಾದ ಅನುದಾನದಲ್ಲಿ ಕೊಠಡಿಗಳ ಭೂಮಿ ಪೂಜೆಯನ್ನು ಶಾಸಕ ಲಕ್ಷ್ಮಣ ಸವದಿ ನೆರವೇರಿಸಿದರು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಇತ್ತೀಚಿಗೆ ಸರಕಾರಿ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಈಗಿದ್ದ ಕೊಠಡಿಗಳು ಸಾಕಾಗುತ್ತಿಲ್ಲ ಹೀಗಾಗಿ ನೂತನ ಕೊಠಡಿಗಳನ್ನು ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡಲಾಗಿದೆ ಎಂದ ಅವರು ಸರಕಾರಿ ಮಹಾವಿದ್ಯಾಲಯಗಳಿಗೆ ಸೌಲಭ್ಯ ಕಲ್ಪಿಸಿದಷ್ಟು ವಿದ್ಯಾರ್ಥಿಗಳ ಸಂಖ್ಯೆಯೂ ಕೂಡ ಹೆಚ್ಚುವುದು ಎಂದು ಹೇಳಿದರು.
ಅಥಣಿ ಮತಕ್ಷೇತ್ರದಲ್ಲಿ ಕೆಲವೇ ವರ್ಷಗಳಲ್ಲಿಯೇ ಸರಕಾರಿ ಪದವಿ, ಪದವಿ ಪೂರ್ವ, ಡಿಪ್ಲೊಮಾ, ಪಶು ವೈದ್ಯಕೀಯ, ಐಟಿಐ ಕಾಲೇಜುಗಳು ಪ್ರಾರಂಭಗೊಂಡಿರುವುದು ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನಕೂಲವಾಗಿದೆ ಎಂದರು. ಜಿಲ್ಲಾ ಪಂಚಾಯತನ ಅಧಿಕಾರಿ ವೀರಣ್ಣಾ ವಾಲಿ, ಗುತ್ತಿಗೆದಾರ ರಾಜು ಆಲಬಾಳ, ಧುರೀಣರಾದ ಶಂಕರ ಗಡದೆ, ಶಿವಾನಂದ ದಿವಾನಮಳ, ಶ್ರೀಶೈಲ ನಾಯಿಕ, ಶಿವರುದ್ರ ಘೂಳಪ್ಪನವರ, ಅನಂತ ಬಸರಿಖೋಡಿ ಸೇರಿದಂತೆ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.