ಮಡಿವಾಳ ಮಾಚಿದೇವ ನಾಡು ಕಂಡ ಶ್ರೇಷ್ಠ ಮಹಾಶರಣ: ತಹಶೀಲ್ದಾರ ಬಿರಾದಾರ

ಮಡಿವಾಳ ಮಾಚಿದೇವ ನಾಡು ಕಂಡ ಶ್ರೇಷ್ಠ ಮಹಾಶರಣ: ತಹಶೀಲ್ದಾರ ಬಿರಾದಾರ Madiwala is the greatest refuge Machideva has ever seen: Tahsildar Biradar

ದೇವರಹಿಪ್ಪರಗಿ 01 : ವಚನಗಳ ಸಂರಕ್ಷಕನಾಗಿ ಕಾಯಕ ನಿಷ್ಟೆಯನ್ನು ಹೊಂದಿ ಶರಣ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ ಮಡಿವಾಳ ಮಾಚಿದೇವರು ಈ ನಾಡು ಕಂಡ ಶ್ರೇಷ್ಠ ಮಹಾಶರಣ ಎಂದು ತಹಶೀಲದಾರ ನಿಂಗಣ್ಣ ಬಿರಾದಾರ ಹೇಳಿದರು.ತಾಲೂಕಿನ ತಹಶೀಲದಾರರ ಕಾರ್ಯಾಲಯದಲ್ಲಿ ಆಯೋಜಿಸಿದ್ದ ವೀರಘಂಟಿ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಬಸವಣ್ಣನವರು ನಾನೊಂದು ಮರುಳು,ನೀವು ನನ್ನ ಅರಿವಿನ ತಿರುಳು ಎಂದು ಮಾಚಿದೇವರ ಬಗ್ಗೆ ಹೇಳಿರುವುದು ಮಾಚಿದೇವರ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ ಎಂದರು.ನಂತರ ಮಾಚಿದೇವರ ಜನ್ಮಸ್ಥಳಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಲಾಯಿತು.

ಶಾಲೆಗಳಲ್ಲಿ ಮಕ್ಕಳಿಗೆ ಆಯೋಜಿಸಿದ್ದ ವಚನಗಳ ಕಂಠಪಾಠ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.ಪಟ್ಟಣದ ಗದ್ದುಗೆ ಮಠದ ಕಿರಿಯ ಮಹಾಂತ ಶ್ರೀಗಳು ಆಶೀರ್ವಚನ ನೀಡಿದರು.ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ.ಎಮ್‌.ಪಾಟೀಲ,ಬಸವ ಶರಣ ಸಮಿತಿಯ ತಾಲೂಕು ಅಧ್ಯಕ್ಷ ಸಂಗಣ್ಣ.ತಡವಲ್,ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಸ್‌.ಎನ್‌.ಬಸವರೆಡ್ಡಿ, ಇಮ್ತಿಯಾಜ ಮುಲ್ಲಾ ಮಾತನಾಡಿದರು. ಶಿರಸ್ತೇದಾರ ಸುರೇಶ ಮ್ಯಾಗೇರಿ ಕಾರ್ಯಕ್ರಮವನ್ನು ನಿರೂಪಿಸಿ,ವಂದಿಸಿದರು.ಸಮಾಜದ ತಾಲ್ಲೂಕು ಅಧ್ಯಕ್ಷ ಕಾಶೀನಾಥ ಅಗಸರ, ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಜಿ.ಪಿ.ಬಿರಾದಾರ, ರಾವುತ ಅಗಸರ ಸೇರಿದಂತೆ ಮಾಚಿದೇವರ ಭಕ್ತಾದಿಗಳು ಹಾಗೂ ಕಚೇರಿಯ ಸಿಬ್ಬಂದಿ ವರ್ಗದವರು ಇದ್ದರು.